ಶಿವಸ್ವಾಮಿಯನ್ನ ಬೆಂಬಲಿಸಿ ಗೆಲ್ಲಿಸಿಕೊಂಡಿದ್ದೇವೆ

ಚಿತ್ರದುರ್ಗ.ನ.೨೨: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಚುನಾವಣೆಯಲ್ಲಿ ನಾಯಕನಹಟ್ಟಿಯ ಕೆ.ಎಂ.ಶಿವಸ್ವಾಮಿ ಅವರು ಚಿತ್ರದುರ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನೂತನ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಅವರಿಗೆ ನನ್ನ ಅಭಿನಂದನೆಗಳು ಎಂದು ಕಸಾಪ ನಿಕಟಪೂರ್ವ ಗೌರವ ಕಾರ್ಯದರ್ಶಿ ಹಾಗೂ ಅಭ್ಯರ್ಥಿ ಮಾಲತೇಶ್ ಅರಸ್ ಹರ್ತಿಕೋಟೆ ಹೇಳಿದ್ದಾರೆ. ಚುನಾವಣೆಯಲ್ಲಿ ಎಲ್ಲರೂ ಪತ್ರಕರ್ತರೇ ಅಭ್ಯರ್ಥಿಗಳಾಗಿದ್ದೆವು. ಈ ಹಿಂದಿನಿಂದಲೂ ನಾವುಗಳು ಜತೆಯಾಗಿದ್ದ ಕಾರಣ ಮತ್ತು ನನಗೆ ಬೆಂಬಲಿಸಿದ್ದ ನನ್ನ ಹಿರಿಯರ ಹಾಗೂ ಹಿತೈಷಿಗಳ ಮಾರ್ಗದರ್ಶನದ ಅನ್ವಯ ಕೆ.ಎಂ. ಶಿವಸ್ವಾಮಿಗೆ ಬೆಂಬಲಿಸಿ ಅವರನ್ನು ಗೆಲ್ಲಿಸಿಕೊಂಡಿದ್ದೇವೆ. ಐದು ವರ್ಷಗಳ ಕಾಲ ಅವರೊಂದಿಗೆ ಇದ್ದು ಅವರ ಮೂಲಕ ಈ ನಾಡಿನಲ್ಲಿ ಮಾದರಿ ಸಾಹಿತ್ಯ ಪರಿಷತ್ತು ಮಾಡುವುದು ನಮ್ಮ ಹೊಣೆ ಮತ್ತು ಕನ್ನಡ ಭವನ ನಿರ್ಮಿಸುವುದು ತಮ್ಮ ಕರ್ತವ್ಯ ಎಂದು ತಿಳಿಸಿದ್ದಾರೆ.