ಶಿವಸೇನೆ ಸಂಘರ್ಷ, ಉನ್ನತ ಪೀಠಕ್ಕೆ

ನವದೆಹಲಿ,ಮೇ.೧೧- ಮಹಾರಾಷ್ಟ್ರದ ಶಿವಸೇನೆಯ ಉಭಯ ಬಣಗಳಾದ ಮುಖ್ಯಮಂತ್ರಿ ಏಕನಾಥ ಶಿಂಧೆ ಮತ್ತು ಮಾಜಿ ಮುಖ್ಯಮಂತ್ರಿ ಉದ್ದವ್ ಠಾಕ್ರೆ ನಡುವೆ ಚಿಹ್ನೆಗಾಗಿ ನಡೆಯುತ್ತಿರುವ ಕದನ ಕುರಿತ ಅರ್ಜಿಯನ್ನು ಸುಪ್ರೀಂಕೋರ್ಟ್ ಇಂದು ೭ ನ್ಯಾಯಾಧೀಶರ ಉನ್ನತ ಪೀಠಕ್ಕೆ ವರ್ಗಾವಣೆ ಮಾಡಿದೆ.
ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಐವರು ನ್ಯಾಯಾಧೀಶರ ಸಾಂವಿಧಾನಿಕ ಪೀಠ ೨೦೧೬ ರ ನಬಮ್ ರೆಬಿಯಾ ಅವರ ಪದಚ್ಯುತಗೊಳಿಸುವ ನಿರ್ಣಯ ಬಾಕಿ ಉಳಿದಿರುವಾಗ ಸ್ಪೀಕರ್ ಅನರ್ಹತೆಯ ಪ್ರಕ್ರಿಯೆ ಪ್ರಾರಂಭಿಸಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ೭ ಮಂದಿ ನ್ಯಾಯಾದೀಶರ ಪೀಠಕ್ಕೆ ಅರ್ಜಿಯನ್ನು ವರ್ಗಾಯಿಸಿದ್ದಾರೆ.
ಉದ್ಧವ್ ಠಾಕ್ರೆ ವರ್ಸಸ್ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಬಣಗಳು ಸಲ್ಲಿಸಿದ ಅರ್ಜಿಗಳ ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್ ಇಂದು ೭ ನ್ಯಾಯಾಧೀಶರ ಪೀಠಕ್ಕೆ ಅರ್ಜಿಯನ್ನು ವರ್ಗಾಯಿಸಿದೆ.
ಕೆಲ ಅರ್ಜಿಗಳು ೨೦೨೨ರಲ್ಲಿ ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟಿಗೆ ಸಂಬಂಧಿಸಿವೆ, ಮಾಹಾರಾಷ್ಟ್ರದ ಮಹಾ ವಿಕಾಸ್ ಆಘಾಡಿ ಸರ್ಕಾರದ ಪತನಕ್ಕೆ ಕಾರಣವಾಗಿದೆ. ಸ್ಪೀಕರ್ ಅನರ್ಹತೆಯ ಪ್ರಕ್ರಿಯೆಗಳನ್ನು ಪ್ರಾರಂಭಿಸಲು ಸಾಧ್ಯವಿಲ್ಲ ಎನ್ನುವ ಮತ್ತು ಶಾಸಕರನ್ನು ಪದಚ್ಯುತಗೊಳಿಸುವ ನಿರ್ಣಯ ಬಾಕಿ ಇದೆ. ಹೀಗಾಗಿ ಈ ವಿಷಯವನ್ನು ೭ ನ್ಯಾಯಾಧೀಶರ ಪೀಠ ನಿರ್ಧರಿಸಲಿ ಎಂದು ಮುಖ್ಯನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ತಿಳಿಸಿದ್ದಾರೆ.
ಸ್ಪೀಕರ್ ಪದಚ್ಯುತಿಗೆ ನೋಟಿಸ್ ಅನರ್ಹತೆ ನೋಟಿಸ್ ನೀಡಲು ಸ್ಪೀಕರ್‌ನ ಅಧಿಕಾರವನ್ನು ನಿರ್ಬಂಧಿಸುತ್ತದೆಯೇ ಎಂಬಂತಹ ವಿಷಯಗಳಿಗೆ ವಿಸೃತ ಪೀಠ ನಿರ್ಣಯ ಕೈಗೊಳ್ಳುವ ಅಗತ್ಯವಿದೆ ಎಂದಿದ್ದಾರೆ.
ಫೆಬ್ರವರಿ ೨೧ ರಿಂದ ಒಂಬತ್ತು ದಿನಗಳ ಕಾಲ ನಡೆದ ಎರಡೂ ಕಡೆಯ ಸುದೀರ್ಘ ವಾದಗಳ ಮುಕ್ತಾಯದಲ್ಲಿ ಸುಪ್ರೀಂ ಕೋರ್ಟ್ ತನ್ನ ತೀರ್ಪನ್ನು ಕಾಯ್ದಿರಿಸಿತ್ತು.
ವಿಚಾರಣೆಯ ಕೊನೆಯ ದಿನದಂದು, ಉದ್ಧವ್ ಠಾಕ್ರೆ ನೇತೃತ್ವದ ಬಣ ಸದನದಲ್ಲಿ ಅವಿಶ್ವಾಸ ಪರೀಕ್ಷೆಯನ್ನು ಎದುರಿಸುವ ಮೊದಲೇ ಮುಖ್ಯಮಂತ್ರಿಗಳು ತಮ್ಮ ರಾಜೀನಾಮೆ ಸಲ್ಲಿಸಿದ್ದರು ಎನ್ನುವ ವಿಷಯವನ್ನು ಸುಪ್ರೀಂಕೋರ್ಟ್ ನನ್ಯಾಯಮೂರ್ತಿಗಳಾದ ಎಂಆರ್ ಶಾ, ಕೃಷ್ಣ ಮುರಾರಿ, ಹಿಮಾ ಕೊಹ್ಲಿ ಮತ್ತು ಪಿಎಸ್ ನರಸಿಂಹ ಅವರನ್ನೂ ಒಳಗೊಂಡಿದೆ.
ಉದ್ಧವ್ ಠಾಕ್ರೆ ಪರ ಹಿರಿಯ ವಕೀಲರಾದ ಕಪಿಲ್ ಸಿಬಲ್, ಅಭಿಷೇಕ್ ಮನು ಸಿಂಘ್ವಿ, ದೇವದತ್ ಕಾಮತ್ ಮತ್ತು ವಕೀಲ ಅಮಿತ್ ಆನಂದ್ ತಿವಾರಿ ಪ್ರತಿನಿಧಿಸಿದ್ದರು.
ಏಕನಾಥ್ ಶಿಂಧೆ ಪರವಾಗಿಹಿರಿಯ ವಕೀಲರಾದ ನೀರಜ್ ಕಿಶನ್ ಕೌಲ್, ಹರೀಶ್ ಸಾಳ್ವೆ, ಮಹೇಶ್ ಜೇಠ್ಮಲಾನಿ ಮತ್ತು ವಕೀಲ ಅಭಿಕಲ್ಪ್ ಪ್ರತಾಪ್ ಸಿಂಗ್ ಪ್ರತಿನಿಧಿಸಿದರು.
ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ರಾಜ್ಯಪಾಲರ ಕಚೇರಿ ಪ್ರತಿನಿಧಿಸಿದರು. ಫೆಬ್ರವರಿ ೧೭ ರಂದು, ಅರುಣಾಚಲದ ಕುರಿತು ೨೦೧೬ ರ ನಬಮ್ ರೆಬಿಯಾ ತೀರ್ಪಿನ ಮರುಪರಿಶೀಲನೆಗಾಗಿ ಶಿವಸೇನೆಯಲ್ಲಿನ ವಿಭಜನೆಯಿಂದ ಉಂಟಾದ ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟಿಗೆ ಸಂಬಂಧಿಸಿದ ಮನವಿಗಳ ಬ್ಯಾಚ್ ಅನ್ನು ಏಳು ನ್ಯಾಯಾಧೀಶರ ಪೀಠಕ್ಕೆ ಉಲ್ಲೇಖಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿತ್ತು.