ಶಿವಸೇನಾ ನಾಯಕ ರಾವುತ್ ಇಡಿ ವಶಕ್ಕೆ

ಮುಂಬೈ, ಜು.31- ಅಕ್ರಮ ಹಣ ವರ್ಗಾವಣೆ ಪ್ರಕರಣ ಕುರಿತಂತೆ ಶಿವಸೇನಾ ವಕ್ತಾರ ಮತ್ತು ಸಂಸದ ಸಂಜಯ್ ರಾವತ್ ಅವರನ್ನು ಜಾರಿ ನಿರ್ದೇಶನಾಲಯ ಇಂದು ವಶಕ್ಕೆ ತೆಗೆದುಕೊಂಡಿದೆ.
ಇಂದು ಬೆಳಿಗ್ಗೆ 7 ಗಂಟೆಗೆ ರಾವತ್ ಅವರ ನಿವಾಸವ ತಲುಪಿದ್ದ ಇಡಿ ಅಧಿಕಾರಿಗಳು, 9 ಗಂಟೆಗೂ ಹೆಚ್ಚು ಕಾಲ ವಿಚಾರಣೆ ನಡೆಸಿ, ಅವರ ನಿವಾಸವನ್ನು ಶೋಧಿಸಿದ ನಂತರ ಬಂಧಿಸಲಾಗಿದೆ.
ದೆಹಲಿಯಲ್ಲಿ ನಡೆಯುತ್ತಿರುವ ಸಂಸತ್ ಅಧಿವೇಶನವನ್ನು ಉಲ್ಲೇಖಿಸಿ ಈ ಹಿಂದೆ ನೀಡಿದ್ಸ ಸಮನ್ಸ್ ತಪ್ಪಿಸಿಕೊಂಡ ನಂತರ ಜುಲೈ 27 ರಂದು ಶಿವಸೇನೆ ನಾಯಕನಿಗೆ ಇಡಿ ಮತ್ತೊಂದು ಸಮನ್ಸ್ ನೀಡಿತ್ತು.
ತನಿಖಾ ಸಂಸ್ಥೆಯ ತಂಡವು ಸಿಐಎಸ್ಎಫ್ ಅಧಿಕಾರಿಗಳೊಂದಿಗೆ ಮುಂಬೈನ ಪೂರ್ವ ಉಪನಗರಗಳಲ್ಲಿರುವ ಭಾಂಡುಪ್ನಲ್ಲಿರುವ ಶಿವಸೇನೆ ನಾಯಕನ ಮನೆಗೆ ತಲುಪಿ ಶೋಧವನ್ನು ಪ್ರಾರಂಭಿಸಿತು.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ರಾವತ್ ಈ ಹಿಂದೆ ಇಡಿ ಮುಂದೆ ಹಾಜರಾಗಿದ್ದರು. ಆದಾಗ್ಯೂ, ಮುಂಗಾರು ಅಧಿವೇಶನ ಉಲ್ಲೇಖಿಸಿ ಅವರು ಇತ್ತೀಚೆಗೆ ಸಮನ್ಸ್ ತಪ್ಪಿಸಿಕೊಂಡಿದ್ದರು.
ಯಾವುದೇ ಕಾರಣಕ್ಕೂ ಇಡಿ ಮುಂದೆ ಶರಣಾಗುವುದಿಲ್ಲ ಎಂದು ಗುಡುಗಿದ್ದರು.