ಶಿವಸಿಂಪಿ ಸಮಾವೇಶ 2023ರ ಲೋಗೋ ಅನಾವರಣ

ಸಂಜೆವಾಣಿ ವಾರ್ತೆ

ದಾವಣಗೆರೆ, ಜು.09, ಶಿವಸಿಂಪಿ ಸಮಾಜದ ಕುಲಗುರು ಶರಣ ಶ್ರೀ ಶಿವದಾಸಿಮಯ್ಯ ಜಯಂತ್ಯುತ್ಸವ, ಪ್ರತಿಭಾ ಪುರಸ್ಕಾರ ಹಾಗೂ ಶಿವಸಿಂಪಿ ಸಮಾವೇಶದ  ಲೋಗೋ ಅನಾವರಣವನ್ನು  ಸಮಾಜದ ಕಚೇರಿಯಲ್ಲಿ ಗೌರವಾಧ್ಯಕ್ಷರಾದ  ಚಿಂದೋಡಿ ಚಂದ್ರಧರ್ ಅನಾವರಣಗೊಳಿಸಿದರು.ನಂತರ  ಮಾತನಾಡಿ  ಕಾರ್ಯಕ್ರಮ ಅಚ್ಚುಕಟ್ಟಾಗಿ  ಮತ್ತು ಸುಂದರವಾಗಿ ಮೂಡಿಬರಲ್ಲೂ ನಾವೆಲ್ಲರೂ ಇಂದಿನಿಂದಲೇ ಕಾರ್ಯಪ್ರವೃತ್ತರಾಗಬೇಕೆಂದರು ಹಾಗೂ ಕಾರ್ಯಕ್ರಮ ಯಶಸ್ವಿಯಾಗಲು  ಸಮಾಜದ ಎಲ್ಲಾ ಬಂಧುಗಳು ತನು, ಮನ, ಧನ ನೀಡುವ ಮೂಲಕ ಹೆಚ್ಚಿನ ಸಹಕಾರ ನೀಡಲು ಮನವಿ ಮಾಡಿದರು.ಅಧ್ಯಕ್ಷರಾದ ಬೂಸ್ನೂರು ಗುರುಬಸಪ್ಪ ಸಮಾಜ ಬಾಂಧವರ ಅನಿಸಿಕೆ ಪಡೆದು ಸಮಾವೇಶವನ್ನು ಆಗಸ್ಟ್ 13ರ ಭಾನುವಾರ ಬೆಳಿಗ್ಗೆ 10.30 ಗಂಟೆಗೆ ಮಾಡಲು ತೀರ್ಮಾನಿಸಲಾಯಿತು.2023 ರಲ್ಲಿ, ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಯಲ್ಲಿ ಶೇ. 75 ಮತ್ತು ಅಧಿಕ ಅಂಕ ಪಡೆದವರಿಗೆ ಪ್ರತಿಭಾ ಪುರಸ್ಕಾರವನ್ನು ನೀಡಲು ತೀರ್ಮಾನಿಸಲಾಯಿತು. ಇದೇ ವೇಳೆ ಶಿವಸಿಂಪಿ ಸಮಾಜದ  ಪ್ರತಿಭಾ ಪುರಸ್ಕಾರ ಕ್ಕಾಗಿ ಅರ್ಜಿ ಆಹ್ವಾನಿಸಲಾಯಿತು.2023 ರಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ತೇರ್ಗಡೆಯಾದ, ಶೇಕಡಾ 75 ಮತ್ತು ಹೆಚ್ಚಿನ ಅಂಕ ಪಡೆದ ದಾವಣಗೆರೆ ಜಿಲ್ಲೆಯ ಶಿವಸಿಂಪಿ ಸಮಾಜದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸ ಬಹುದು.ವಿದ್ಯಾರ್ಥಿಗಳು, ಮಾರ್ಕ್ಸ ಕಾರ್ಡ್, ಅಧಾರ್ ಕಾರ್ಡ ನ ಜೆರಾಕ್ಸ್ ಪ್ರತಿಗಳು ಮತ್ತು ಇತ್ತೀಚಿನ ಒಂದು ಪಾಸ್ ಪೋರ್ಟ್ ಅಳತೆಯ ಭಾವಚಿತ್ರಗಳನ್ನು ಕಛೇರಿಗೆ ತಲುಪಿಸಬೇಕು.ಅರ್ಜಿ ಸಲ್ಲಿಸಲು ಜು. 31 ಅಂತಿಮ. ದಿನವಾಗಿದ್ದು ಅರ್ಜಿಗಳನ್ನು ಶಿವಸಿಂಪಿ ಸಮಾಜ (ರಿ), ದಾವಣಗೆರೆ.ಶಿವಯೋಗಾಶ್ರಮ ಕಾಂಪ್ಲೆಕ್ಸ್, ಮೊದಲನೇ ಮಹಡಿರೂಂ. ನಂ. 10,  ಜಯದೇವ ವೃತ್ತ, ದಾವಣಗೆರೆ. ಇಲ್ಲಿ ಸಲ್ಲಿಸಲು    ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಪ್ರಧಾನ ಕಾರ್ಯದರ್ಶಿಪ್ರಕಾಶ್ ಬೂಸ್ನೂರು ಮೋ; 9844636575 ಹಾಗೂಮಲ್ಲಾಬಾದಿ ಚನ್ನಬಸಪ್ಪ ಮೋ; : 7411770949 ಇವರನ್ನು ಕಚೇರಿ ವೇಳೆಯಲ್ಲಿಸಂಪರ್ಕಿಸಬಹುದು ಎಂದು ತಿಳಿಸಲಾಯಿತುಸಭೆಯಲ್ಲಿ ಪ್ರಧಾನಕಾರ್ಯದರ್ಶಿಗಳಾದ  ಪ್ರಕಾಶ್ ಬೂಸ್ನೂರು ಸ್ವಾಗತಿಸಿದರು. ಖಜಾಂಚಿಗಳಾದ‌  ಜಗದೀಶ್ ಬಾವಿಕಟ್ಟಿ ವಂದಿಸಿದರು. ಸಹ ಕಾರ್ಯದರ್ಶಿ ಜ್ಞಾನೇಶ್ವರ್ ಜವಳಿ ನಿರೂಪಿಸಿದರು.ಈ ಸಂಧರ್ಭದಲ್ಲಿ ಗೌರವಾಧ್ಯಕ್ಷರಾದ ಹೇಮಣ್ಣ ಹೆಚ್ ಕೆ, ಕಣಕುಪ್ಪಿ ಮುರುಗೇಶಪ್ಪ, ಮಾದ್ಯಮ ಕಾರ್ಯದರ್ಶಿ ಶಿವಕುಮಾರ್ ಬಿ ಎಂ,  ವಿರೂಪಾಕ್ಷ ಜವಳಿ, ಮಾಲ್ವಿ ಮಹಾದೇವಪ್ಪ, ಗುತ್ತಿ ಚನ್ನವೀರಪ್ಪ, ಶ್ರೀಮತಿ ಅನು ಕೊಟ್ರೇಶ್, ಶ್ರೀಮತಿ ದೀಪಾ, ಮಲ್ಲಾಬಾದಿ ಚನ್ನಬಸಪ್ಪ, ಮಹೇಶ್ ಬೇತೂರ್, ಮಾಲತೇಶ್ ಬಿ, ಮಲ್ಲಿಕಾರ್ಜುನ ಕಬ್ಬೂರ್, ಮಂಜುನಾಥ ಪಿ ಎನ್ , ಕೊಟ್ರೇಶ್ ಮುಂತಾದವರು ಹಾಜರಿದ್ದು, ಸಲಹೆ ಸೂಚನೆಗಳನ್ನು ನೀಡಿದರು.