
ಇತ್ತೀಚಿನ ದಿನಮಾನಗಳಲ್ಲಿ ನಮ್ಮ ಶಿವಶಿಂಪಿ ಸಮಾಜವು ಜಾಗೃತಗೊಳ್ಳುತ್ತಿದೆ ಈ ನಿಟ್ಟಿನಲ್ಲಿ ದಾವಣಗೆರೆ ಜಿಲ್ಲಾ ಶಿವಶಿಂಪಿ ಸಮಾಜವು ಕಳೆದ ಕೆಲವು ದಶಕಗಳಿಂದ ಹೋರಾಡುತ್ತಾ ಬಂದರೂ ಸಹ ಸರ್ಕಾರದಿಂದ ಯಾವುದೇ ಸೌಲಭ್ಯಗಳು ದೊರೆತಿಲ್ಲ. ಸಂಖ್ಯಾ ಬಲದಿಂದ ಶಿವಸಿಂಪಿ ಸಣ್ಣ ಸಮಾಜ ಹೀಗಾಗಿ ಸದಾ ಅನ್ಯಾಯ ಶೋಷಣೆಗೆ ಒಳಗಾಗುತ್ತಲೇ ಬಂದಿರುವುದು ಕಟು ಸತ್ಯವಾಗಿದೆ. ಇದರ ವಿರುದ್ಧ ನಾವು ಸಂಘಟಿತರಾಗಲೇಬೇಕಾಗಿದೆ. ಈ ಹಿನ್ನಲೆಯಲ್ಲಿ ಶಿಕ್ಷಣ ಸಂಸ್ಥೆ, ಸಹಕಾರಿ ಬ್ಯಾಂಕ್, ವಿದ್ಯಾರ್ಥಿ ವಸತಿ ನಿಲಯ, ಮಹಿಳಾ ವಸತಿ ನಿಲಯ, ಹೊಲಿಗೆ ತರಬೇತಿ ಕೇಂದ್ರ, ಕುಲ ಕಸುಬುಗಳ ಅಭಿವೃದ್ಧಿಗೆ ಆಧುನಿಕ ಕೌಶಲ್ಯ ತರಬೇತಿ ಕೇಂದ್ರ ಮುಂತಾದ ಯೋಜನೆಗಳನ್ನು ಕೈಗೊಳ್ಳಬೇಕಾಗಿದೆ.ಈ ಎಲ್ಲಾ ಹಿನ್ನಲೆಯಲ್ಲಿ 2023 ರ ಆಗಸ್ಟ್ 13 ರ ಭಾನುವಾರದಂದು, ಶಿವಶಿಂಪಿ ಸಮಾವೇಶ, ಕುಲಗುರು ಶರಣ ಶ್ರೀ ಶಿವದಾಸಿಮಯ್ಯ ಜಯಂತ್ಯುತ್ಸವ, ಪ್ರತಿಭಾ ಪುರಸ್ಕಾರ, ಸಾಂಸ್ಕöÈತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.ಇದೇ ವೇಳೆಪ್ರತಿಭಾ ಪುರಸ್ಕಾರ ಹಮ್ಮಿಕೊಳ್ಳಲಾಗಿದ್ದು 2022 ಮತ್ತು 2023ರ ಸಾಲಿನ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ., ಪರೀಕ್ಷೆಗಳಲ್ಲಿ ಶೇ 75 ಕ್ಕೂ ಹೆಚ್ಚು ಅಂಕಗಳನ್ನು ಪಡೆದಿರುವ ದಾವಣಗೆರೆ ಜಿಲ್ಲೆಯ, ಶಿವಸಿಂಪಿ ಸಮಾಜದ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದೆ. ಸಮಾಜದ ವತಿಯಿಂದ ಕಛೇರಿಯಲ್ಲಿ ಶಿವಸಿಂಪಿ ವಧು-ವರರ ಮಾಹಿತಿ ಕೇಂದ್ರವನ್ನು ಆರಂಭಿಸಲಾಗಿದ್ದು ಸಮಾಜ ಬಾಂಧವರು ಇದರ ಪ್ರಯೋಜನವನ್ನು ಪಡೆಯುತ್ತಿದ್ದಾರೆ.ಸಮಾಜದ ಪ್ರತಿಭೆಗಳನ್ನು ಬೆಳಕಿಗೆ ತರುವ ಉದ್ದೇಶದಿಂದ ಸಾಂಸ್ಕöÈತಿಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ಸಮಾಜದ ಹಲವಾರು ಪ್ರತಿಭೆಗಳು ಈ ಸಂದರ್ಭದಲ್ಲಿ ತಮ್ಮ ಕಲೆಗಳನ್ನು ಪ್ರದರ್ಶಿಸಲಿದ್ದಾರೆ.ಈಗಾಗಲೇ ಸಮಾಜದಿಂದ ಅನುಷ್ಠಾನಗೊಂಡ ಕಾರ್ಯಕ್ರಮಗಳು:ಸಮಾಜದ ಸಂಘಟನೆಗಾಗಿ ನಿರಂತರವಾಗಿ ಕಾರ್ಯಕ್ರಮಗಳನ್ನು ಅನುಷ್ಠಾನ ಗೊಳಿಸಲಾಗಿದೆ.
• ಸಮಾಜದ ಸಂಘಟನೆಗಾಗಿ ಶ್ರೀ ಮುರುಘರಾಜೇಂದ್ರ ಕಾಂಪ್ಲೆಕ್ಸ್ ರೂಂ ನಂ. 10ರಲ್ಲಿ ಸುಸಜ್ಜಿತ ಶಾಶ್ವತ ಕಛೇರಿ ಆರಂಭಿಸಲಾಗಿದೆ.
• 2009 ರಿಂದ ಪ್ರತಿವರ್ಷ ಕುಲಗುರು ಶರಣ ಶಿವದಾಸಿಮಯ್ಯ ಜಯಂತ್ಯುತ್ಸವ ಆಚರಣೆ ಹಾಗೂ ಜಿಲ್ಲಾ ಸಮಾವೇಶಗಳನ್ನು ಏರ್ಪಡಿಸಿ ಜಿಲ್ಲೆಯಾದ್ಯಂತ ಸಮಾಜ ಸಂಘಟನೆ ಮಾಡಲಾಗಿದೆ.
• ಪ್ರತೀ ವರ್ಷ ಸಂಕ್ರಾAತಿ ಸಂಭ್ರಮ ಕಾರ್ಯಕ್ರಮದಲ್ಲಿ ಸಾಂಸ್ಕöÈತಿಕ ಚಟುವಟಿಕೆ ಹಾಗೂ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನ ಮತ್ತು ಪ್ರಸಾದ ವಿತರಿಸಲಾಗುತ್ತಿದೆ.
• ಪ್ರತಿವರ್ಷ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ, ಶಿವಸಿಂಪಿ ಹಿರಿಯರಿಗೆ ಹಾಗು ಶ್ರೇಷ್ಠ ಶಿವಸಿಂಪಿ ಸಾಧಕರಿಗೆ ಸನ್ಮಾನ.
• ಸಮಾಜದ ವತಿಯಿಂದ ಸಾಮೂಹಿಕ ವಿವಾಹ ಕಾರ್ಯಕ್ರಮ ಮಾಡಲಾಗಿದೆ.
• ಸಮಾಜದ ಅರ್ಹ ಫಲಾನುಭವಿಗಳಿಗೆ ಹೊಲಿಗೆ ಯಂತ್ರಗಳನ್ನು ನೀಡಲಾಗಿದೆ.
• ಸಮಾಜದ ಅರ್ಹ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ಹಾಗೂ ನೋಟ್ ಪುಸ್ತಕಗಳನ್ನು ವಿತರಿಸಲಾಗಿದೆ.
• ಶ್ರೀ ಜಯದೇವ ಕಂಚಿನ ಪ್ರತಿಮೆ ಆನಾವರಣಕ್ಕೆ ರೂ 1,15,000/- ಗಳನ್ನು ಶಿವಸಿಂಪಿ ಸಮಾಜದ ಹೆಸರಿನಲ್ಲಿ ದೇಣಿಗೆ ಸಮರ್ಪಿಸಲಾಗಿದೆ.
• ಜಮಖಂಡಿ ಶಿವಸಿಂಪಿ ಭವನ ನಿರ್ಮಾಣಕ್ಕೆ ರೂ. 30,000/-ಗಳನ್ನು ದೇಣಿಗೆ ನೀಡಲಾಗಿದೆ.
• 2015ರಲ್ಲಿ ರಾಜ್ಯಮಟ್ಟದ ಶಿವಸಿಂಪಿ ಸಮಾವೇಶವನ್ನು ಯಶಸ್ವಿಯಾಗಿ ನಡೆಸಲಾಗಿದೆ.
• ಮದುವೆ ಹಾಗು ಇತರ ಶುಭ ಸಮಾರಂಭಗಳಲ್ಲಿ ಭಾಗವಹಿಸಿ ಹಿರಿಯರನ್ನು ಗೌರವಿಸಲಾಗುತ್ತಿದೆ.
• ಶ್ರೀ ಜಯದೇವ ಸ್ಮರಣೋತ್ಸವಕ್ಕೆ ಅಕ್ಕಿ ಹಾಗೂ ರೂ 10,000/- ದೇಣಿಗೆ ಅರ್ಪಿಸಲಾಗಿದೆ.
• ಶ್ರೀ ವಿರಕ್ತಮಠದಲ್ಲಿ ನಡೆದ ಶ್ರಾವಣ ಮಾಸ ಪುರಾಣದಲ್ಲಿ ದಾಸೋಹ ಸೇವೆ ಮಾಡಲಾಗಿದೆ.
• ರಕ್ತದಾನ ಶಿಬಿರ, ಉಚಿತ ವೈದ್ಯಕೀಯ ತಪಾಸಣೆ, ಮತದಾರರ ಜಾಗೃತಿ ಕಾರ್ಯಕ್ರಮ, ನೇಪಾಳ ಭೂಕಂಪ ಸಂತ್ರಸ್ಥರಿಗೆ ನಿಧಿ ಸಂಗ್ರಹಣೆ, ಉತ್ತರ ಕರ್ನಾಟಕದ ನೆರೆ ಪ್ರವಾಹ ಸಂತ್ರಸ್ಥರಿಗೆ ಆಹಾರ, ಬಟ್ಟೆ ಸಂಗ್ರಹಿಸಿ ಜಿಲ್ಲಾಧಿಕಾರಿಗಳ ಮೂಲಕ ಸಮರ್ಪಿಸಲಾಗಿದೆ.
• ಕರೋನಾ ಬಿಕ್ಕಟ್ಟಿನ ಸಮಯದಲ್ಲಿ ಸಮಾಜದಿಂದ ರೂ.58,000/- ಗಳನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಅರ್ಪಿಸಲಾಯಿತು.
• ಡೂಡಾದಿಂದ ಮಂಜೂರಾದ ನಿವೇಶನದ ಮುಂಗಡ ಬಾಬ್ತು ರೂ. 3,65,000/- ಗಳನ್ನು ಜಮೆ ಮಾಡಿದ್ದು, ನಿವೇಶನವನ್ನು ಪಡೆಯುವ ಪ್ರಯತ್ನ ಮುಂದುವರೆದಿದೆ.
• 2010 ರಿಂದ ಇದುವರೆಗೆ ಕಾರ್ಯಕ್ರಮಗಳನ್ನು ದಾನಿಗಳ ಮೂಲಕ ಏರ್ಪಡಿಸಿ ಉಳಿತಾಯ ಮಾಡಿದ 8 ಲಕ್ಷ ರೂ ಗಳನ್ನು ಕರ್ನಾಟಕ ಬ್ಯಾಂಕ್ ಶ್ರೀ ಮುರುಘರಾಜೇಂದ್ರ ಕಾಂಪ್ಲೆಕ್ಸ್ ಶಾಖೆಯಲ್ಲಿ ನಿಶ್ಚಿತ ಠೇವಣಿ ಇಡಲಾಗಿದೆ ಹಾಗು 3 ಲಕ್ಷ ರೂ ಗಳ ಕಛೇರಿ ಮುಂಗಡ ಹಣ ಸೇರಿ ಒಟ್ಟು 11 ಲಕ್ಷ ರೂ ಗಳನ್ನು ಉಳಿತಾಯ ಮಾಡಲಾಗಿದೆ.
ಸಮಾಜದ ಭವಿಷ್ಯದ ಯೋಜನೆಗಳು:
• ಸಮಾಜದ ಹೆಸರಿನಲ್ಲಿ ಸಹಕಾರಿ ಬ್ಯಾಂಕ್, ಶಿಕ್ಷಣ ಸಂಸ್ಥೆ, ಆಧುನಿಕ ಹೊಲಿಗೆ ತರಬೇತಿ ಕೇಂದ್ರ ಇತ್ಯಾದಿ ಸ್ಥಾಪನೆ.
• ಸಮಾಜದ ಚಟುವಟಿಕೆಗಳ ನಿರ್ವಹಣೆಗೆ ಶಾಶ್ವತ ನಿಧಿ ಸ್ಥಾಪನೆ.
• ವಿದ್ಯಾರ್ಥಿ ವೇತನ ಪ್ರತಿಭಾ ಪುರಸ್ಕಾರಕ್ಕೆ ರೂ 5000/- ಗಳಂತೆ ಠೇವಣಿ ಮೂಲಕ ಸಂಗ್ರಹಿಸಿ ಶಾಶ್ವತ ಯೋಜನೆ ರೂಪಿಸಲಾಗುವುದು.
• ದಾವಣಗೆರೆ ಜಿಲ್ಲೆಯ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಉದ್ದೇಶಕ್ಕಾಗಿ ಹಾಸ್ಟಲ್ ಆರಂಭಿಸುವುದು.
• ಚಿತ್ರದುರ್ಗ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದಿಂದ ದಯಾಪಾಲಿಸಲಾಗಿರುವ ಜಾಗವನ್ನು ಸಮಾಜದ ಹೆಸರಿಗೆ ನೋಂದಯಿಸಿಕೊಳ್ಳಲು ಮುಂದುವರಿಯುವುದು.
– ಗುರುಬಸಪ್ಪ ಬೂಸ್ನೂರು,
ಅಧ್ಯಕ್ಷರು ಶಿವಸಿಂಪಿ ಸಮಾಜ ದಾವಣಗೆರೆ.