ಶಿವಸಂಚಾರ ನಾಟಕಗಳು ಮಾನವೀಯ ಮೌಲ್ಯಗಳ ಸಾರುತ್ತವೆ: ಪಂಡಿತರಾಧ್ಯ ಶ್ರೀ 

ಸಂಜೆವಾಣಿ ವಾರ್ತೆ

ಜಗಳೂರು.ಜ.22:- ಶಿವಸಂಚಾರ ನಾಟಕಗಳಲ್ಲಿನ ತತ್ವಪದಗಳು,ಕಥೆಗಳು, ಮಾನವೀಯ ಮೌಲ್ಯಗಳನ್ನು ಸಾರುತ್ತವೆ ಎಂದು ಸಾಣೆಹಳ್ಳಿ ಮಠದ ಶ್ರೀ ಪಂಡಿತರಾಧ್ಯ ಶಿವಚಾರ್ಯಮಹಾಸ್ವಾಮಿಗಳು ಹೇಳಿದರು.ಪಟ್ಟಣದ ಬಯಲು ರಂಗಮಂದಿರದಲ್ಲಿ ಮೂರು ದಿನಗಳ ಕಾಲ ಆಯೋಜಿಸಿದ್ದ ಶಿವಸಂಚಾರ ನಾಟಕೋತ್ಸವ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.ಸಾಮಾಜಿಕ ನ್ಯಾಯದ ಹರಿಕಾರ ಬಸವಣ್ಣ ನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸರಕಾರ ಘೋಷಿಸಿದ್ದು ಸ್ವಾಗತರ್ಹ ಇದರಿಂದ ಬಸವಣ್ಣನ ಸಾಧನೆ ಕೊಡುಗೆಗಳು ಸಮಾಜಕ್ಕೆ ಪರಿಚಯವಾಗುತ್ತವೆ.ನಮ್ಮ ದೃಷ್ಠಿಯಲ್ಲಿ ವಿಶ್ವದ ಸಾಂಸ್ಕೃತಿಕ ನಾಯಕನಾಗಬೇಕಿದೆ ಎಂದು ತಿಳಿಸಿದರು.ಶಿವಸಂಚಾರ ನಾಟಕೋತ್ಸವದಲ್ಲಿ ಅಭಿನಯಿಸಿದ ಜೊತೆಗಿರುವನು ಚಂದಿರ,ತಾಳಿಯ ತಕರಾರು,ಕಲ್ಯಾಣದ ಬಾಗಿಲು ,ಮೂರು ನಾಟಕಗಳು ಅರ್ಥಪೂರ್ಣ ಕಥೆಗಳಾಗಿವೆ.ಇವುಗಳನ್ನು ತಾಲೂಕಿನಲ್ಲಿ ದಾರವಾಹಿ ವ್ಯಾಮೋಹ ತೊರೆದು ನಾಟಕ ವೀಕ್ಷಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ಕಲಾಭಿಮಾನಿ ಪ್ರೇಕ್ಷಕರು ಆಗಮಿಸಿರುವುದು ಅನ್ಯ ತಾಲೂಕುಗಳಿಗೆ ಚಾಟಿ ಬೀಸುವಂತಿದೆ‌ ಎಂದು ಪ್ರಶಂಸಿದರು.ಫೆ.2.ಮತ್ತು 3 ರಂದು ಚಿತ್ರದುರ್ಗ ಮತ್ತು ಚಿಕ್ಕಮಂಗಳೂರು ಎರಡು ಜಿಲ್ಲೆಗಳ ಒಂದಾಗಿ ಸಾಹಿತ್ಯೋತ್ಸವ ಕಾರ್ಯಕ್ರಮ ನಡೆಯಲಿದ್ದು.ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸದುಪಯೋಗಪಡೆದುಕೊಳ್ಳಬೇಕು ಎಂದು ಸಲಹೆ ಹೇಳಿದರು.