ಬೀದರ:ಮಾ.29:ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಮಾರ್ಚ 30 ರಂದು ಮಧ್ಯಾಹ್ನ 1 ಗಂಟೆಗೆ ಶ್ರೀ ಶಿವಶರಣ ಹರಳಯ್ಯ ಜಯಂತಿ ವೇದಿಕೆ ಕಾರ್ಯಕ್ರಮವನ್ನು ನಗರದ ಹರಳಯ್ಯ ವೃತ್ತದಲ್ಲಿ ಆಯೋಜಿಸಲಾಗಿದೆ.
ಮುಂಜಾನೆ 9 ಗಂಟೆಯಿಂದ ಮಧ್ಯಾಹ್ನ 12.30 ಗಂಟೆಯವರೆಗೆ ಮೊದಲಿಗೆ ಶ್ರೀ ಶಿವಶರಣಯ್ಯನವರ ಭಾವಚಿತ್ರಕ್ಕೆ ಪೂಜೆ ಕಾರ್ಯಕ್ರಮವನ್ನು ಜಯಂತಿ ಉತ್ಸವದ ಅಧ್ಯಕ್ಷರಾದ ಸುಭಾಷ ಟಿಳ್ಳೆಕರ್, ಸಮಾಜದ ಅಧ್ಯಕ್ಷರಾದ ಶಾಮಕುಮಾರ ಹಮಿಲಪೂರ ಹಾಗೂ ಸಮಾಜದ ಎಲ್ಲಾ ಮುಖಂಡರು ನೆರವೇರಿಸಿ, ನಂತರ ಮೆರವಣಿಗೆಗೆ ಚಾಲನೆ ನೀಡುವರು. ಭವ್ಯ ಮೆರವಣಿಗೆಯು ಮಂಗಲಪೇಟ್‍ದಿಂದ ಚೌಬಾರಾ ಮಾರ್ಗವಾಗಿ, ಗವಾನ್ ಚೌಕ್, ಶಾಹಗಂಜ್ ಕಮಾನ್, ಡಾ. ಬಿ.ಆರ್. ಅಂಬೇಡ್ಕರ ವೃತ್ತ, ಛತ್ರಪತಿ ಶಿವಾಜಿ ವೃತ್ತವಾಗಿ ಕೊನೆಗೆ ಮೋಹನ ಮಾರ್ಕೇಟ್ ಶ್ರೀ ಹರಳಯ್ಯ ವೃತ್ತದಲ್ಲಿ ಮುಕ್ತಾಯವಾಗುತದೆ.
ಕಾರ್ಯಕ್ರಮ ದಿವ್ಯ ಸಾನಿಧ್ಯವನ್ನು ಪರಮ ಪೂಜ್ಯ ಶ್ರೀ ಸುಖದೇವಜಿ ಮಹಾರಾಜ ರಾಷ್ಟ್ರೀಯ ಅಧ್ಯಕ್ಷರು, ಅಖಿಲ ಭಾರತ ರವಿದಾಸಿಯಾ ಧರ್ಮ ಸಂಘಟನಾ (ಕಾತ್ರಜ ಪುಣೆ), ಪರಮ ಪೂಜ್ಯ ಶ್ರೀ ಬೆಲ್ದಾಳ ಶರಣರು ಬಸವ ಯೋಗಾಶ್ರಮ ಕೌಠಾ (ಬಿ), ಉದ್ಘಾಟನೆಯನ್ನು ಸೂರ್ಯಕಾಂತ ನಾಗಮಾರಪಳ್ಳಿ ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯರು ಕರ್ನಾಟಕ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಭಾಷ ಟಿಳ್ಳೆಕರ್ ಅಧ್ಯಕ್ಷರು ಜಯಂತಿ ಉತ್ಸವ ಸಮಿತಿ ಬೀದರ, ಅಧ್ಯಕ್ಷರಾಗಿ ಶಾಮಕುಮಾರ ಹಮಿಲಾಆಪೂರೆ ಅಧ್ಯಕ್ಷರು ಶಿವಶರಣ ಹರಳಯ್ಯ ಸಮಾಜ ಸಂಘ ಬೀದರ, ಮುಖ್ಯ ಅತಿಥಿಗಳಾಗಿ ಶ್ರೀ ರಹೀಂ ಖಾನ್, ಶಾಸಕರು ಬೀದರ ಉತ್ತರ, ಬಂಡೆಪ್ಪಾ ಖಾಶೆಂಪೂರ ಶಾಸಕರು ಬೀದರ ದಕ್ಷಿಣ, ಪ್ರೊ. ಶಿವಶರಣಪ್ಪ ಹುಗ್ಗಿ ಪಾಟೀಲ ಅಕ್ಕಮಹಾದೇವಿ ಕಾಲೇಜು ಬೀದರ, ಮಾರುತಿ ಬೌದ್ಧೆ ರಾಜ್ಯ ಸಂಘಟನಾ ಸಂಚಾಲಕರು ಕ.ದ.ಸಂ.ಸ. ಬೆಂಗಳೂರು, ಫರ್ನಾಂಡಿಸ್ ಹಿಪ್ಪಳಗಾಂವ ರಾಜ್ಯ ಕಾರ್ಯಾಧ್ಯಕ್ಷರು ಮಾದೀಗ ದಂಡೋರಾ ಹೋರಾಟ ಸಮಿತಿ, ಈಶ್ವರಸಿಂಗ್ ಠಾಕೂರ್ ಬಿಜೆಪಿ ಮುಖಂಡರು ಬೀದರ, ಅತಿಥಿಗಳಾಗಿ ದಿಗಂಬರ ಮಡಿವಾಳ ನಗರಸಭೆ ಸದಸ್ಯರು ಬೀದರ, ಸೈಮನ ಜಾಸ್ವಾ, ಸುಭಾಷ, ರಾಜಕುಮಾರ ವಾಘಮಾg, ಸಿದ್ರಾಮ ಚೌದರಿ (ಕನೇರಿ), ದೇವಿದಾಸ ಟಿಳ್ಳೆಕರ್ , ಸುಭಾಷ ಹಮಿಲಾಪೂರೆ, ರಾಜಕುಮಾರ ಟಿಳ್ಳೆಕರ್ ನಿರ್ದೇಶಕರು ಹರಳಯ್ಯ ಸಮಾಜ
ಆದಕಾರಣ ತಾವು ದಯಮಾಡಿ ಈ ಜಯಂತೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲೆಯ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕಾಗಿ ತಮ್ಮಲ್ಲಿ ವಿನಂತಿಸಲಾಗಿದೆ.