ಶಿವಶರಣ ಹಡಪದ ಅಪ್ಪಣ್ಣ ಅವರು ದಾಸೋಹಕ್ಕೆ ಮಹತ್ವ ನೀಡುತ್ತಿದ್ದರು


ಕಲಬುರಗಿ, ಜು.03: ಶಿವಶರಣ ಹಡಪದ ಅಪ್ಪಣ್ಣ ಅವರು 12 ನೇ ಶತಮಾನದಲ್ಲಿ ಬಸವಣ್ಣನವರ ಕಾಲದಲ್ಲಿ ಕಾಯಕದ ದಾಸೋಹದ ಮಹತ್ವದ ನೀಡುತ್ತಿದ್ದಂತೆ ಕಾಯಕದಿಂದ ಬಂದ ಹಣವನ್ನು ದಾಸೋಹಕ್ಕೆ ನೀಡುತ್ತಿದ್ದರೆಂದು ಅಪರ ಜಿಲ್ಲಾಧಿಕಾರಿ ಎಂ. ರಾಚಪ್ಪ ಅವರು ಹೇಳಿದರು.
ಸೋಮವಾರದಂದು ಡಾ. ಎಸ್. ಎಂ. ಪಂಡಿತ ರಂಗಮಂದಿರದಲ್ಲಿ ಜಿಲ್ಲಾಡಳಿತ,ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಪಂಚಾಯತ್ ಇವರುಗಳ ಸಂಯುಕ್ತಾಶ್ರಯದಲ್ಲಿ ಶಿವಶರಣ ಹಡಪದ ಅಪ್ಪಣ್ಣ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಿ ಮಾತನಾಡಿದರು.
ಜಾತಿ ವರ್ಣ ವರ್ಗ ಲಿಂಗಗಳನ್ನು ಆಧರಿಸಿ ಅಸಮಾನತಿಯಿಂದ ನಿರ್ಮಾಣಗೊಂಡಿದ್ದ ಸಮಾಜವನ್ನು ಧಿಕ್ಕರಿಸಿ, ಪ್ರತಿಯಾಗಿ ಸಹಬಾಳ್ವೆ, ಸಮಾನತೆ, ಪರಸ್ಪರ ಸಹಕಾರ, ಸಹಾನುಭೂತಿ, ಅರಿವು, ಆಚಾರ ನಡೆನುಡಿ ಸಿದ್ದಾಂತಗಳ ಆಧಾರದ ಮೇಲೆ ಜನಮುಖಿ ಸಮಾಜ ನಿರ್ಮಿಸಿದರು.
ಮಕ್ಕಳಿಗೆ ಒಳ್ಳೆಯ ಶಿಕ್ಷಣವನ್ನು ನೀಡಿ ಸಮಾಜ ಒಳ್ಳಿತಿಗಾಗಿ ಒಳ್ಳೆಯ ಕೆಲಸ ಮಾಡಬೇಕೆಂದರು ಅವರು ನೀಡಿದ ವಚನಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರು.
ಚಿತ್ತಾಪೂರ ಕಂಬಳೇಶ್ವರ ಸಂಸ್ಥಾನಮಠ ಷ.ಬ್ರ.ಶ್ರೀ.ಸೋಮಶೇಖರ ಶಿವಾಚಾರ್ಯರು ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ, ಶಿವಶರಣÀ ಹಡಪದ ಅಪ್ಪಣ್ಣನವರ ಜಯಂತಿಯನ್ನು ಆಚರಿಸುತ್ತಿರುವುದು ತುಂಬಾ ಸಂತೋಷ ವಿಷಯವಾಗಿದೆ. ಈ ಜಯಂತಿಯನ್ನು 3-4 ವರ್ಷಗಳಿಂದ ಆಚರಿಸುತ್ತಿದ್ದೇವೆ. ಕ್ಷೌರೀಕ ಸಮಾಜ ಎಂದರೆ ದೊಡ್ಡ ಸಮಾಜ 12 ನೇ ಶತಮಾನದಲ್ಲಿ ಬಸವಣ್ಣನವರ ಕಾಲದಲ್ಲಿ ಹಡಪದಪ್ಪ ನವರು ಅವರ ಪಕ್ಕದಲ್ಲಿ ಕುಳಿತುಕೊಳ್ಳುತ್ತಿದ್ದರು ಅವರು ಕಾಯಕ ಜೀವಿಯಾಗಿದ್ದರು. ಅನೇಕ ವಚನಗಳನ್ನು ರಚಿಸಿದರು ನಾವು ಅವರ ಜೀವನ ಆದರ್ಶ ತತ್ವಗಳನ್ನು ಆಳವಡಿಸಿಕೊಳ್ಳಬೇಕೆಂದರು. ನಾವು ನಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡಬೇಕೆಂದರು. ಸಮಾಜವನ್ನು ಗುರುತಿಸುವ ಕೆಲಸ ಮಾಡಬೇಕೆಂದರು.
ಅದೇ ರೀತಿಯಾಗಿ ಶಹಬಾದ ಹಡಪದ ಅಪ್ಪಣ ದೇವಸ್ಥಾನ ಶ್ರೀ. ಬಾಲಬ್ರಹ್ಮಚಾರಿ ರಾಜ ಶಿವಯೋಗಿಗಳು ಸಾನಿಧ್ಯ ವಹಿಸಿ ಆರ್ಶಿವಚನ ನೀಡಿದರು. ಹಡಪದ ಸಮಾಜದ ಜಿಲ್ಲಾಧ್ಯಕ್ಷರಾದ ಈರಣ್ಣ ಹಡಪದ ಸಣ್ಣೂರ ಮಾತನಾಡಿದರು..
ಹಡಪದ ಅಪ್ಪಣ ಅಧ್ಯಯನ ಪೀಠ, ಗುಲಬರ್ಗಾ, ವಿಶ್ವವಿದ್ಯಾಲಯದ ನಿರ್ದೇಶಕರಾದ ಡಾ. ಸುರೇಶ ಜಂಗೇ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ನಮ್ಮ ವಿಶ್ವವಿದ್ಯಾಲಯ ಸಂಶೋಧಾನ ಕೇಂದ್ರ ಇದೆ. ಅದನ್ನು ಕಟ್ಟಿ ಇಲ್ಲಿಯವರೆಗೆ 15 ವಷಗಳಾದರೂ ನಾಲ್ಕು ಪುಸ್ತಕಗಳನ್ನು ಹೊರತಂದಿದ್ದೇವೆ ಎಂದರು.
ಹಡಪದ ಅಪ್ಪಣ್ಣನವರು ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲ್ಲೂಕಿನ ಮಸಬಿನಾಳ ಗ್ರಾಮ ಚೆನ್ನವೀರಪ್ಪ, ದೇವಕಮ್ಮನವರ ಮಗ ದೇಗಿನಾಳ ಗ್ರಾಮ ಜೀರ ನಾಗಪ್ಪ ಚೆನ್ನಬಸಮ್ಮನವರು ಮಗಳಾದ ಲಿಂಗಮ್ಮ ಇವರ ಪುತ್ರ ಇವರ ಕಾಲವನ್ನು ಕ್ರಿ.ಶ. 1160 ಎಂದು ಗುರುತಿಸಲಾಗಿದೆ. ಚೆನ್ನಬಸವಣ್ಣ ಎಂಬ ಅಂಕಿತನಾಮದಲ್ಲಿ ಸುಮಾರು 250 ವಚನಗಳನ್ನು ರಚಿಸಿದರು ಹೇಳಿದರು.
ಉಪನಿರ್ದೇಶಕಿ ಹಾಗೂ ಕನ್ನಡ ಸಂಸ್ಕøತಿ ಇಲಾಖೆ ಸಹಾಯಕ ಪ್ರಭಾರಿ ನಿರ್ದೇಶಕಿ ಜಗದೀಶ್ವರಿ ಶಿವಕೇರಿ ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ರಾಜ್ಯ ಸಂಘಟನೆ ಕಾರ್ಯದರ್ಶಿ ಬಸವರಾಜ ಹಳ್ಳಿ, ರಾಜ್ಯ ಕಾನೂನು ಸಲಹೆಗಾರ ರಮೇಶ ಮಲ್ಲಿಕೋಡ, ಸೇರಿದಂತೆ ಸಮಾಜದ ಮುಖಂಡರು ಕಾರ್ಯಕ್ರಮದಲ್ಲಿ ಹಾಜರಿದ್ದರು.