ಶಿವಶರಣ ಮಾದರ ಚನ್ನಯ್ಯ ವೃತ್ತ

ರಾಯಚೂರು.ಮಾ.೨೩- ಅಂಜಲಿ ಜನಸೇವಾ ಅಭಿವೃದ್ಧಿ ಸಂಸ್ಥೆಯಿಂದ ಮಾ.೨೨ ರಂದು ವಾರ್ಡ್ ೧೨ ರ ಮಂಗಳವಾರ ಪೇಟೆಯಲ್ಲಿ ನೂತನವಾಗಿ ಶ್ರೀ ಶಿವಶರಣ ಮಾದರ ಚನ್ನಯ್ಯ ವೃತ್ತವನ್ನು ಶಾಸಕ ಡಾ.ಶಿವರಾಜ ಪಾಟೀಲ್ ಅವರು ತಮ್ಮ ಅಮೃತಾಸ್ತದಿಂದ ನಾಮಕರಣ ಮತ್ತು ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಈ.ವಿನಯಕುಮಾರ, ಎ.ವಸಂತಕುಮಾರ ಮಾತನಾಡಿದರು. ಸಂಸ್ಥೆಯ ಅಧ್ಯಕ್ಷರಾದ ಚಂದ್ರು ಭಂಡಾರಿ, ಶ್ರೀನಿವಾಸ ತಾಯಪ್ಪ, ಆರ್‌ಡಿಎ ಅಧ್ಯಕ್ಷರಾದ ವೈ.ಗೋಪಾಲರೆಡ್ಡಿ, ರವೀಂದ್ರ ಜಲ್ದಾರ್, ಪಿ.ಯಲ್ಲಪ್ಪ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.