
ಕೆಂಭಾವಿ:ಮೇ.12: ಪಟ್ಟಣದ ಆರಾಧ್ಯ ದೈವ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮಳ ಜಾತ್ರಾ ಮಹೋತ್ಸವು ಗುರುವಾರ ಪ್ರಥಮ ಬಾರಿಗೆ ಜರುಗಿತು ಮಹಾರಥೋತ್ಸವದ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯಿತು. ಕಳೆದ ಹತ್ತು ದಿನಗಳಿಂದ ದೇವಸ್ಥಾನದಲ್ಲಿ ನಡೆಯುತ್ತಿದ್ದ ಮಹಾ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮಳ ಪುರಾಣ ಮುಕ್ತಾಯ ಸಮಾರಂಭ ಮತ್ತು ಮಹಾರಥೋತ್ಸವ ಅತೀ ವಿಜೃಂಬಣೆಯಿಂದ ನೆರವೇರಿತು.
ಸುಮಾರು 40 ಕೋಟಿ ರೂಗಳ ವೆಚ್ಚದಲ್ಲಿ ನಿರ್ಮಾಣವಾದ ಬೃಹತ್ ರಥವನ್ನು ಸಾವಿರಕ್ಕೂ ಅಧಿಕ ಮಹಿಳೆಯರು ಎಳೆಯುವ ಮೂಲಕ ಭಕ್ತಿಯ ಪರಾಕಾಷ್ಠೆ ಮೆರೆದರು. ಮುಂಜಾನೆ ರಾಜಶೇಖರಯ್ಯ ಹಿರೇಮಠ ಮತ್ತು ಅರ್ಚಕ ವೀರೇಶ ಗಣಾಚಾರಿ ನೇತೃತ್ವದಲ್ಲಿ ನೂತನ ರಥಕ್ಕೆ ಹೋಮಹವನ ಸೇರಿದಂತೆ ಹಲವು ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಸಂಜೆ ರಜತಖಚಿತ ಮಲ್ಲಮ್ಮಳ ಮೂರ್ತಿ ಜೊತೆಗೆ ರಥದ ಮೇಲೆ ಶಿಖರ ಏರುತ್ತಿದ್ದಂತೆ ನೆರೆದಿದ್ದ ಸಾವಿರಾರು ಭಕ್ತರಿಂದ ಹೇಮರೆಡ್ಡಿ ಮಲ್ಲಮ್ಮ ಮಾತಾಕಿ ಜೈ ಎಂಬ ಘೋಷಣೆ ಎಲ್ಲೆಡೆ ಮೊಳಗಿದವು. ದೇವಸ್ಥಾನದ ಪ್ರಾಂಗಣ ಸಾವಿರಾರು ಭಕ್ತರಿಂದ ತುಂಬಿ ತುಳುಕುತ್ತಿತ್ತು. ಮಾಗಣಗೇರಿ ಬ್ರಹನ್ಮಠದ ಶ್ರೀ ಡಾ. ವಿಶ್ವರಾಧ್ಯ ಶಿವಾಚಾರ್ಯ ಸ್ವಾಮಿಗಳು, ಹಿರೇಮಠದ ಶ್ರೀ ಚನ್ನಬಸವ ಶಿವಾಚಾರ್ಯರು, ಚಿಕ್ಕಮಠದ ಶ್ರೀ ಚನ್ನಯ್ಯ ಸ್ವಾಮಿಗಳು, ಪುರಾಣಿಕ ನಾಗಯ್ಯ ಸ್ವಾಮಿ ವಡಗೇರಿ ಸೇರಿದಂತೆ ಸಾವಿರಾರು ಭಕ್ತರು ಭಾಗವಹಿಸಿದ್ದರು. ಡಿವೈ.ಎಸ್.ಪಿ. ಜೆ.ಎಸ್. ನ್ಯಾಮಗೌಡ ನೇತೃತ್ವದಲ್ಲಿ ಅರೆ ಸೇನಾ ಪಡೆ ಮತ್ತು ಪೆÇಲೀಸ್ ಪಡೆಯಿಂದ ಬಿಗಿ ಪೆÇಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು