ಶಿವಶರಣೆ ನೀಲೂರ ನಿಂಬೆಕ್ಕಾದೇವಿ ಜಾತ್ರೆ ರದ್ದು

ಕಲಬುರಗಿ,ಏ.27- ಇಲ್ಲಿನ ಆಳಂದ ರಸ್ತೆ ಮಾಳಿ (ಮಾಲಗಾರ) ನಗಗರದ ಶಿವಶರಣೆ ನೀಲೂರ ನಿಂಬೆಕ್ಕಾ ದೇವಿಯ ಜಾತ್ರಾ ಮಹೋತ್ಸವ ರದ್ದು ಪಡಿಸಲಾಗಿದೆ ಎಂದು ನೀಲೂರ ನಿಂಬೇಕ್ಕಾದೇವಿ ಟ್ರಸ್ಟ್ ಹಾಗೂ ಜಿಲ್ಲಾ ಮಾಳಿ (ಮಾಲಗಾರ) ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಕುಪೇಂದ್ರ ಎಸ್.ಧೂಳೆ ಕಿಣ್ಣಿ ಸುಲ್ತಾನ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೋವಿಡ್-19 ಎರಡನೆ ಅಲೆ ಹಾಗೂ ಸರ್ಕಾರದ ಕಲಂ-144 ಕಫ್ರ್ಯೂ ಜಾರಿಯ ಹಿನ್ನಲೆಯಲ್ಲಿ ಈ ವರ್ಷದ (ಮೇ.2,2021) ದೇವಿ ಜಾತ್ರೆಯ ರಥೋತ್ಸವ ಸೇರಿದಂತೆ ಉದ್ದೇಶಿತ ರಾಜ್ಯ ಮಟ್ಟದ ವಧುವರರ ಸಮಾವೇಶ, 1008 ಮುತೈದಿಯರ ಉಡಿ ತುಂಬುವ ಕಾರ್ಯಕ್ರಮ, ಲಕ್ಷ ದಿಪೋತ್ಸವ, ಪ್ರತಿಭಾ ಪುರಸ್ಕಾರ , ಉತ್ತಮ ಶಿಕ್ಷಕರ ಹಾಗೂ ಚುನಾಯಿತರಾದ ಸಮಾಜದ ಗ್ರಾಮ ಪಂಚಾಯತ ನೂತನ ಸದಸ್ಯರ ಸನ್ಮಾನ ಸಮಾರಂಭವನ್ನು ರದ್ದು ಪಡಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಕೋವಿಡ-19 ಸರ್ಕಾರದ ನಿಯಮವಳಿಯಂತೆ ದೇವಸ್ಥಾನದಲ್ಲಿ ಅಂದು ಕೇವಲ ಅರ್ಚಕರ ಸಮ್ಮುಖದಲ್ಲಿ ಮಾತ್ರ ಧಾರ್ಮಿಕ ಹಾಗೂ ಸಂಪ್ರದಾಯಕ ಪೂಜೆ ಪುನಸ್ಕಾರಗಳನ್ನು ನೆರವೇರಿಸಲಾಗುವುದು, ಮಾಳಿ ಸಮಾಜಬಾಂಧವರು ಹಾಗೂ ಭಕ್ತರು ತಮ್ಮ ಮನೆಯಲ್ಲಿಯೇ ಇದ್ದುಕೊಂಡು ಮಹಾಮಾರಿ ಕೋವಿಡ ವೈರಸ್ ನಿರ್ಮೂಲನೆಗಾಗಿ ತಾಯಿ ನೀಲೂರ ನಿಂಬೆಕ್ಕ ದೇವಿಯಲ್ಲಿ ಪ್ರಾರ್ಥಿಸುವಂತೆ ಮತ್ತು ಮನೆಯಿಂದಲೆ ದೇವಿಯ ಸ್ಮರಣೆ ಹಾಗೂ ಪೂಜೆ ಧಾರ್ಮಿಕ ಕಾರ್ಯಗಳನ್ನು ಕೈಗೊಳ್ಳುವಂತೆ ಕುಪೇಂದ್ರ ಎಸ್.ಧೂಳೆ ಕಿಣ್ಣಿ ಸುಲ್ತಾನ ಅವರು ಕೋರಿದ್ದಾರೆ.