ಗುರುಮಠಕಲ:ಮೇ.29: ಮಹಾಸಾದ್ವಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ನವರ 601ನೇ ಜಯಂತೋತ್ಸವವನ್ನು ಪರಮಪೂಜ್ಯ ಶ್ರೀ ಶಾಂತವೀರ ಗುರು ಮುರುಘರಾಜೇಂದ್ರ ಮಹಾಸ್ವಾಮಿಗಳು ಸಂಸ್ಥಾನ ಖಾಸ ಮಠ ಗುರುಮಠಕಲ್ ಹಾಗೂ ಪರಮಪೂಜ್ಯ ಶ್ರೀ ಶಾಂತ ಚನ್ನ ಮಲ್ಲಿಕಾರ್ಜುನ ಪಂಡಿತಾರಾಧ್ಯ ಶಿವಯೋಗಿ ಮಹಾ ಸ್ವಾಮಿಗಳು ಹೆಡಗಿಮದ್ರ ಗುರುದ್ವಯರ ದಿವ್ಯ ಸಾನಿಧ್ಯದಲ್ಲಿ ಹಾಗೂ ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ ಮತಕ್ಷೇತ್ರದ ಶಾಸಕರು ಸನ್ಮಾನ ಶ್ರೀ ಶರಣಗೌಡ ಕಂದಕೂರ ರವರ ಘನ ನೇತೃತ್ವದಲ್ಲಿ ಸಮಾಜದ ಬಾಂಧವರ ಸಾರ್ವಜನಿಕರ ಸಮ್ಮುಖದಲ್ಲಿ ಮಹಾಸಾದ್ವಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಹಾಗೂ ಜ್ಯೋತಿ ಬೆಳಗಿಸುವ ಮೂಲಕ ಪಟ್ಟಣದ ಹೀರಾಗಾರ್ಡನ್ ನಲ್ಲಿ ಜಯಂತೋತ್ಸವ ವನ್ನು ಬಹು ವಿಜೃಂಭಣೆಯಿಂದ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಅಖಿಲ ಕರ್ನಾಟಕ ಗಾನಯೋಗಿ ಸಂಗೀತ ಪರಿಷತ್ ತಾಲೂಕು ಘಟಕ ಗುರುಮಠಕಲ ವಿಧ್ಯಾರ್ಥಿಗಳು ಮಾಣಿಕಪ್ರಭು ಹಾಗೂ ಬನಶಂಕರಿ ಅವರಿಂದ ವಚನ ಸಂಗೀತ ಗಾಯನ ಹಾಗೂ ಘಟಕದ ಉಪಾಧ್ಯಕ್ಷ ರಾದ ಕನ್ನಯ್ಯ ಪಡಿಗೆ. ಪ್ರಧಾನ ಕಾರ್ಯದರ್ಶಿ ಭೀಮರೆಡ್ಡಿ ಹಿಮ್ಲಾಪುರ ಹಾಗೂ ಸಂಗಡಿಗರಿಂದ ಸಂಗೀತ ಕಾರ್ಯಕ್ರಮ ನೀಡಿದರು. ತದನಂತರ ಮಾನ್ಯ ಶಾಸಕರು ಮಾತನಾಡಿ ಮಹಾಸಾದ್ವಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮನವರು ತಮ್ಮ ಜೀವನದಲ್ಲಿ ಪಟ್ಟ ಕಷ್ಟ ಸುಖಗಳ ಜೊತೆಯಲ್ಲಿಯು ಕೂಡ ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮಿಯನ್ನು ನೆನೆಯುತ್ತ ಸದಾ ಶಿವನ ಧ್ಯಾನ ದಲ್ಲಿದ್ದು ಶಿವಪೂಜೆ ಮಾಡುವದರ ಜೊತೆಗೆ ಸಾಕ್ಷಾತ್ ಮಲ್ಲಿಕಾರ್ಜುನನನ್ನು ಸಾಕ್ಷಾತ್ ಕರಿಸಿಕೊಂಡು ರೆಡ್ಡಿ ಕುಲಕ್ಕೆ ಬಡತನವೆ ಇಲ್ಲ ಎಂದು ಬೇಡಿಕೊಂಡಳು ಕಷ್ಟ ಸುಖಗಳು ಸಂಸಾರದ ಸಾಗರದಲ್ಲಿ ಬರುವುದು ಸಹಾಜ ಆದರೆ ತಮ್ಮ ಮಕ್ಕಳಿಗೆ ಒಳ್ಳೆಯ ಸಂಸ್ಕಾರದ ಜೊತೆಗೆ ಒಳ್ಳೆಯ ವಿದ್ಯಾಭ್ಯಾಸ ವನ್ನು ಕೂಡ ಕೊಡಬೇಕು ಎಂದು ಹೇಳಿದರು. ಪರಮಪೂಜ್ಯ ಶ್ರೀ ಗುರುದ್ವಯರು ಆರ್ಶೀವಚನ ನೀಡಿದರು ಕಾರ್ಯಕ್ರಮದಲ್ಲಿ 2022-23 ನೇ ಸಾಲಿನ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಪುರಸ್ಕøತರಿಗೆ ಹಾಗೂ 10 ನೇ ಮತ್ತು 12 ನೇ ತರಗತಿಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ಕನ್ನಡ ಮತ್ತು ಆಂಗ್ಲ ಮಾಧ್ಯಮದ ರೆಡ್ಡಿ ಸಮಾಜದ ವಿಧ್ಯಾರ್ಥಿಗಳಿಗೆ ಕಾರ್ಯಕ್ರಮ ದಲ್ಲಿ ವಿಶೇಷ ಸನ್ಮಾನ ಮಾಡಿದರು. ಕಾರ್ಯಕ್ರಮದ ಘನ ಅಧ್ಯಕ್ಷತೆಯನ್ನು ಕಿಷ್ಟರೆಡ್ಡಿ ಪೆÇೀಲಿಸ್ ಪಾಟಿಲ್. ಗೌರವ ಅಧ್ಯಕ್ಷರು ರವೀಂದ್ರ ರೆಡ್ಡಿ ಮಾಲಿ ಪಾಟೀಲ್. ಕಾರ್ಯ ಅಧ್ಯಕ್ಷ ರು ರವೀಂದ್ರ ರೆಡ್ಡಿ ಶೇರಿ. ಕಾರ್ಯಕ್ರಮದಲ್ಲಿ ಸಮಸ್ತ ರೆಡ್ಡಿ ಸಮಾಜದವರು ಭಾಗವಹಿಸಿ ಕಾರ್ಯಕ್ರಮವನ್ನು ಅತಿ ವಿಜೃಂಭಣೆಯಿಂದ ಆಚರಿಸಲಾಯಿತು ತದನಂತರ ಪ್ರಸಾದ ವೆವಸ್ಥೆ ಮಾಡಲಾಗಿತ್ತು.