ಶಿವಶರಣೆ ಅಕ್ಕಮಹಾದೇವಿ ಜಯಂತಿ

 ಚಿತ್ರದುರ್ಗ, ಏ. 27 – ಅಹಿತ ಲೋಕದ ಸುಖ ಸವಲತ್ತುಗಳನ್ನು ತ್ಯಜಿಸಿ ಪರಮಾರ್ಥದಲ್ಲಿಯೇ ಪರಮಾನಂದವನ್ನು ಅರ್ಥಾತ್ ಪರಮಸುಖವನ್ನು ಕಂಡವರು ಮಹಾನ್ ವಚನಗಾರ್ತಿ ಅಕ್ಕಮಹಾದೇವಿ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದರು.ನಗರದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದಲ್ಲಿ ನಡೆದ ಪ್ರಥಮ ಕವಯಿತ್ರಿ, ವಚನಗಾರ್ತಿ ಮತ್ತು ಅನ್ವೇಷಕಿ ಶಿವಶರಣೆ ಅಕ್ಕಮಹಾದೇವಿ ಜಯಂತಿ ಕಾರ್ಯಕ್ರಮದಲ್ಲಿ ಅಕ್ಕಮಹಾದೇವಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಶ್ರೀಗಳು, ಏನೆಲ್ಲ ವಿಧವಾದ ಕಷ್ಟ ಕೋಟಲೆ ಕೊಡುವವರ ನಡುವೆ ಅಕ್ಕಮಹಾದೇವಿ ಒಬ್ಬ ಸ್ತಿçÃಯಾಗಿ ಧೈರ್ಯದಿಂದ ಎಲ್ಲವನ್ನು ದಿಟ್ಟತನದಿಂದ ಎದುರಿಸಿ ನಿಂತಂತಹ ಅಪೂರ್ವ ಸಾಧಕಿ. ಇಡೀ ಜಗತ್ತಿಗೆ ಧರ್ಮೋಪಾಸನೆಯ ಜೊತೆಯಲ್ಲಿ ನಿಸರ್ಗೋಪಾಸನೆಯ ವಿಧಾನವನ್ನು, ಶೂನ್ಯತತ್ವವನ್ನು ಅನುಸರಿಸುತ್ತ ಉತ್ತುಂಗಕ್ಕೆ ಏರಿದ ಶಿವಶರಣೆಯಾಗಿದ್ದಾರೆ ಎಂದರು.