ಶಿವಶರಣರ ಸಿದ್ಧರಾಮೇಶ್ವರ ಜಯಂತಿ

ಬಳ್ಳಾರಿ,ಜ.14: ಶಿವಶರಣ ಸಿದ್ಧರಾಮೇಶ್ವರರವರು ಮಾಡಿದ ಕಾಯಕ,ಅವರ ಜೀವನ ಮತ್ತು ಬದುಕಿದ ರೀತಿ ಇಂದಿನ ಯುವಕರಿಗೆ ಮಾದರಿ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಸಿದ್ಧಲಿಂಗೇಶ ರಂಗಣ್ಣನವರ್ ಅವರು ಅಭಿಪ್ರಾಯಪಟ್ಟರು.
ಅವರು‌ ಇಂದು ನಗರದ ಬಿಡಿಎಎ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಶಿವಶರಣರ ಸಿದ್ಧರಾಮೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, 12 ಶತಮಾನದಲ್ಲಿ ಬಸವಣ್ಣನವರ ಅನುಯಾಯಿಯಾಗಿ ಶಿವಶರಣರು ಸಮಾಜದ ಒಳಿತಿಗೆ ಮತ್ತು ಅಭಿವೃದ್ಧಿಗೆ ಕಾರ್ಯ ನಿರ್ವಹಿಸಿದವರಲ್ಲಿ ಇವರು ಒಬ್ಬರು, ಅವರ ಜೀವನ ವಿಧಾನ ಇಂದಿನ ಯುವ ಜನತೆಗೆ ಮಾದರಿಯಾಗಿದೆ. ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಕೊವಿಡ್ ಹಿನ್ನಲೆಯಲ್ಲಿ ಶಿವಶರಣರ ಜಯಂತಿಯನ್ನು ಈ ಬಾರಿ ಅತ್ಯಂತ ಸರಳವಾಗಿ ಆಚರಿಸಲಾಯಿತು‌. ಮುಂದಿನ ವರ್ಷ ತುಂಬಾ ಅದ್ದೂರಿ ಮತ್ತು ಅರ್ಥ ಪೂರ್ಣವಾಗಿ ಆಚರಿಸಲಾಗುವುದು ಎಂದು ತಿಳಿಸಿದರು‌.
ಕಾರ್ಯಕ್ರಮದಲ್ಲಿ ತಹಶಿಲ್ದಾರರಾದ ರೆಹಮಾನ್ ಪಾಷಾ, ಜಿಲ್ಲಾ ಭೋವಿ ಸಂಘದ ಕಾರ್ಯದರ್ಶಿ ವಿ.ಗಾದಿಲಿಂಗ, ನಿರ್ದೇಶಕ ವಿ. ಕುಬೇರ, ಸಂಘದ ಸದಸ್ಯರುಗಳಾದ ಶೇಷಣ್ಣ,ಟಿ.ವೆಂಕಟೇಶ, ವಿ.ವೆಂಕಟೇಶ ಹಾಗೂ ಸಮುದಾಯದ ಮುಖಂಡರು ಇದ್ದರು.