ಶಿವಶಕ್ತಿ ವಾಗ್ವಾದ ಎಂಬ ಗೀಗಿಪದ ಪ್ರಾರಂಭ

ತಾಳಿಕೋಟೆ:ಜೂ.25: ಸ್ಥಳೀಯ ಶ್ರೀ ಗ್ರಾಮದೇವತಾ ಜಾತ್ರೋತ್ಸವ ಅಂಗವಾಗಿ ಕರೆತರಲಾದ ಗೀಗಿಪದದ ಸಿಂಧಗಿ ತಾಲೂಕಾ ಹಾಗೂ ಅಥಣಿ ತಾಲೂಕಿನವರಿಂದ ಶಿವಶಕ್ತಿ ವಾಗ್ವಾದ(ಅರ್ಥಾರ್ಥ ಪರಮೇಶ್ವರ ಹೆಚ್ಚು ಪಾರ್ವತಿ ಹೆಚ್ಚು) ಎಂಬುದರ ಕುರಿತು ಗೀಗಿ ಪದ ಶನಿವಾರರಂದು ಪ್ರಾರಂಭಗೊಂಡಿತು.

ರಾಜವಾಡೆಯಲ್ಲಿ ಪ್ರಾರಂಭಗೊಂಡ ಈ ಗೀಗಿಪದದ ಸಿಂಧಗಿ ತಾಲೂಕಿನ ಮದರಿ ಗ್ರಾಮದ ಸಂಗನಬಸವೇಶ್ವರ ಕಲಾ ಸಂಘದ ಗಂಡು ಮೇಳದಲ್ಲಿ ಮುಖ್ಯಗಾಯಕರಾಗಿ ಬಸಪ್ಪ ಅಂಬಣ್ಣ ತಳವಾರ ಹಾಗೂ ಹಿಮ್ಮೇಳ ಗಾಯಕರಾಗಿ ಬಾಬಾರಾಯ ತಳವಾರ, ಪಿಟಲ್ ಗಾಯಕರಾಗಿ ಪಾಪಣ್ಣ ರಾಠೋಡ ಅವರು ಪರಮೇಶ್ವರ ಹೆಚ್ಚು ಎಂಬುದರ ಕುರಿತು ಗೀಗಿ ಪದ ಪ್ರಾರಂಬಿಸಿದ್ದಾರೆ.

ಇತ್ತ ಅಥಣಿ ತಾಲೂಕಿನ ಬಾಳಗೇರಿ ಗ್ರಾಮದ ದುರ್ಗಾದೇವಿ ಕಲಾ ಸಂಘದ ಶ್ರೀಮತಿ ಲಕ್ಷ್ಮೀಂಬಾಯಿ ಅಡಿವೆಪ್ಪ ಕೊಣ್ಣೂರ ಅವರು ಮುಖ್ಯ ಗಾಯಕರಾಗಿ ಚಿಕ್ಕಯ್ಯ ಕೊಣ್ಣೂರ ತಾಳವಾದಕರಾಗಿ, ಶಾಂತಪ್ಪ ಪಿಟೇಲವಾದಕರಾಗಿ ಯಮನಪ್ಪ ಕೊಣ್ಣೂರ ಶೂರವಾದಕರಾಗಿ ಗೀಗಿಪದವನ್ನು ಮುಂದುವರೆಸಿದ ಈ ತಂಡ ಪಾರ್ವತಿ ಹೆಚ್ಚು ಎಂಬ ವಾದದೊಂದಿಗೆ ಮುಂದಾಗಿದೆ.

ಇಂದು ಪ್ರಾರಂಭಗೊಂಡ ಈ ಗೀಗಿಪದದ ಕಥೆ ಒಟ್ಟು 3 ದಿನಗಳ ವರೆಗೆ ನಡೆದು ಪರಮೇಶ್ವರ ಹೆಚ್ಚು ಪಾರ್ವತಿ ಹೆಚ್ಚು ಎಂಬುದರ ಕುರಿತು ನಿರ್ಣಯಹೊರಬಿಳ್ಳಲಿದೆ ನಾಲ್ಕನೇದಿನದಂದು ಶರಣ ಸತ್ಪುರುಷರ ಹಾಡಿಕೆಯೊಂದಿಗೆ ಜರುಗಲಿರುವ ಗೀಗಿಪದದೊಂದಿಗೆ ಈ ತಂಡದವರ ಕಾರ್ಯಕ್ರಮ ಮಂಗಲಗೊಳ್ಳಲಿದೆ ಎಂದು ಗಂಡು ತಂಡದ ಮುಖ್ಯಗಾಯಕರಾದ ಬಸಪ್ಪ ತಳವಾರ ಅವರು ತಿಳಿಸಿದ್ದಾರೆ.