ಶಿವಲಿಂಗೇಶ್ವರ ಮಠದ ಕಟ್ಟಡ ಲೋಕಾರ್ಪಣೆ ನ. 27ಕ್ಕೆಹೋದಲೂರ ಮಠದಲ್ಲಿ ಶ್ರೀ ಶರಣಬಸವೇಶ್ವರ ಪುರಾಣ ಆರಂಭ

ಆಳಂದ: ನ.13:ತಾಲೂಕಿನ ಹೋದಲೂರ ಶ್ರೀ ಶಿವಲಿಂಗೇಶ್ವರ ವಿರಕ್ತ ಮಠದ ಆವರಣದಲ್ಲಿ ನಿರ್ಮಾಣವಾದದ ಶ್ರೀಮಠದ ನೂತನ ಕಟ್ಟಡ ಲೋಕಾರ್ಪಣೆ ಅಂಗವಾಗಿ ಶ್ರೀಮಠದಲ್ಲಿ ನ.7ರಿಂದ 27ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳಿಗೆ ಪೀಠಾಧಿಪತಿ ಶ್ರೀ ವೃಷಬೇಂದ್ರ ಮಹಾಸ್ವಾಮೀಜಿ ಅವರು ಚಾಲನೆ ನೀಡಿದರು.

ಬಳಿಕ ಮಾತನಾಡಿದ ಶ್ರೀಗಳು ಗಡಿಭಾಗದಲ್ಲಿ ಸಾಮಾಜಿಕ ಸಾಮರಸ್ಯ ಹಾಗೂ ಸಮಾಜೋ ಧಾರ್ಮಿಕ ಕಾರ್ಯದ ಉದ್ದೇಶದಿಂದಾಗಿ ಮಠದ ಕಟ್ಟಡ ನಿರ್ಮಾಣ ಕೈಗೊಂಡಿದ್ದು, ಇದರ ಲೋಕಾರ್ಪಣೆ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಸರ್ವ ಭಕ್ತಾದಿಗಳು ಭಾಗವಹಿಸಬೇಕು ಎಂದು ಅವರು ಹೇಳಿದರು.

ನ.7ರಂದು 26ರ ವರೆಗೆ ಕಲಬುರಗಿಯ ಮಹಾದಾಸೋಹಿ ಶ್ರೀ ಶರಣಬಸವೇಶ್ವರ ಪುರಾಣವು ಪ್ರತಿದಿನ ಸಂಜೆ ಬಾಗಲಕೋಟದ ರೇವಣಸಿದ್ಧ ದೇವರು ಹೇಳಿಕೊಡಲಿದ್ದು, ಸಂಗೀತವು ಜಾಲಹಳ್ಳಿಯ ಶಿವುಕುಮಾರ ಹಿರೇಮಠ ಹಾಗೂ ತಬಲಾ ಸಾಥಿ ಲೋಕನಾಥ ಜಾಕಲೇರಿ ನಡೆಸಿಕೊಡಲಿದ್ದಾರೆ ಎಂದರು.

ನ. 26ರಂದು ನಡೆಯುವ ಪುರಾಣ ಮಹಾಂಗಮಲದ ಸಾನ್ನಿಧ್ಯವನ್ನು ಮಾಡಿಯಾಳದ ಒಪ್ಪತ್ತೇಶ್ವರ ಮರಳಸಿದ್ಧ ಮಹಾಸ್ವಾಮೀಜಿ, ಮಾದನಹಿಪ್ಪರಗಾ ಮಠದ ಶ್ರೀ ಅಭಿನವ ಶಿವಲಿಂಗ ಮಹಾಸ್ವಾಮೀಜಿ, ನಿರುಗುಡಿಯ ಮಲ್ಲಯ್ಯಾ ಮುತ್ತ್ಯಾ, ಖಜೂರಿ ಕೋರಣೇಶ್ವರ ಮಹಾಸ್ವಾಮೀಜಿ, ರಾಜೇಶ್ವರದ ಶ್ರೀ ಅಭಿನವ ರುದ್ರಮುನಿ ಸ್ವಾಮೀಜಿ, ಪರತಾಪೂರದ ಚನ್ನಮಲ್ಲ ದೇವರು ಆಗಮಿಸುವರು. ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಬಿ.ಆರ್. ಪಾಟೀಲ, ಡಿಸಿಸಿ ಬ್ಯಾಂಕ್ ನಿರ್ದೇಶಕ ಅಶೋಕ ಸಾವಳೇಶ್ವರ, ಕೆಎಂಎಫ್ ಅಧ್ಯಕ್ಷ ಆರ್. ಕೆ. ಪಾಟೀಲ, ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಗುರುಲಿಂಗ ಜಂಗಮ ಪಾಟೀಲ, ಜಿಪಂ ಮಾಜಿ ಸದಸ್ಯ ಸಿದ್ಧರಾಮ ಪ್ಯಾಟಿ, ತಾಪಂ ಮಾಜಿ ಸದಸ್ಯ ಶಿವಪ್ಪ ವಾರಿಕ ಸೇರಿದಂತೆ ರಾಜಕೀಯ ಗಣ್ಯರು ಮತ್ತು ಹರಗುರು ಚರಮೂರ್ತಿಗಳು ಪಾಳ್ಗೊಳ್ಳುವರು.

ನ. 27ರಂದು ಬೆಳಗಿನ ಜಾವ 9 ಗಂಟೆಗೆ ತಾಯಂದಿರಿಗೆ ಉಡಿ ತುಂಬುವ ಕಾರ್ಯಕ್ರಮ ನಂತರ 10:30ಕ್ಕೆ ಶಿವಮೊಗ್ಗ ಜಿಲ್ಲೆಯ ಅನಂದಪೂರ ಬೇಕಿನಕಲ್ಲ ಮಠದ ಜದ್ಗುರು ಡಾ| ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮೀಜಿಗೆ ಹಮ್ಮಿಕೊಳ್ಳುವ ಪ್ರಮುಖ ರಸ್ತೆಗಳ ಮೂಲಕ ಪಲ್ಲಕ್ಕಿ ಉತ್ಸವ ಸಾಗಿ ಶ್ರೀಮಠಕ್ಕೆ ತಲುಪಿದ ನಂತರ 11:30ಕ್ಕೆ ಶ್ರೀಮಠದ ನೂತನ ಕಟ್ಟಡ ಲೋಕಾರ್ಪಣೆ ಹಾಗೂ ಧಾರ್ಮಿಕ ಸಮಾರಂಭವನ್ನು ಶಾಸಕ ಸುಭಾಷ ಗುತ್ತೇದಾರ ಉದ್ಘಟನೆ ನೆರವೇರಿಸಿದರು.

ನೂತನ ಕಟ್ಟಡವನ್ನು ಕೇಂದ್ರ ಸಚಿವ ಭಗವಂತ ಖೂಬಾವರು ಲೋಕಾರ್ಪಣೆ ಕೈಗೊಳ್ಳುವರು. ವಿಧಾನಪರಿಷತ್ ಸದಸ್ಯ ಶಶೀಲ ಜಿ. ನಮೋಶಿ, ಬಿ.ಜಿ.ಪಾಟೀಲ, ಮಹಾನಗರ ಪಾಲಿಕೆ ಸದಸ್ಯ ಸುನಿಲಕುಮಾರ ಬಿ. ಬನಶೆಟ್ಟಿ, ಗ್ರಾಪಂ ಅಧ್ಯಕ್ಷೆ ಸಂಗೀತಾ ಎಸ್. ಬನಶೆಟ್ಟಿ, ನಂದಗಾಂವ ಮಠದ ರಾಜಶೇಖರ ಶ್ರೀ, ಹಾರಕೂಡದ ಡಾ| ಚನ್ನವೀರ ಶಿವಾಚಾರ್ಯರು, ಪಡಸಾವಳಿ ಡೋಣಗಾಂವ ಶಂಭುಲಿಂಗ ಶ್ರೀ, ಅಕ್ಕಲಕೋಟದ ಬಸವಲಿಂಗ ಶ್ರೀ, ಆಳಂದ ಸಿದ್ಧೇಶ್ವರ ಶಿವಾಚಾರ್ಯರು, ಅಣೂರ, ಸೊರಬ, ಹಿರೇನಾಗಾಂವ, ಸೋಲಾಪೂರ, ಬಂಗರಗಾ, ಹತ್ತಿಕಣಮಸ, ಬಿರೂರ, ಬಿಳಕಿ, ಕಿಣ್ಣಿಸುಲ್ತಾನ, ಭೂಸನೂರ, ಲಾಡಗಮುಗಳಿ, ಚಾಂಬಾಳ ಮಠದ ಶ್ರೀಗಳು ಸೇರಿದಂತೆ ನಾಡಿನ ಹರಗರು, ಚರಮೂರ್ತಿಗಳು ಮತ್ತು ರಾಜಕೀಯ ಮುಖಂಡರು ಭಾಗವಹಿಸಲಿದ್ದಾರೆ ಎಂದು ಅಅವರು ಹೇಳಿದರು. ಹೊದಲೂರ ಶ್ರೀಮಠದ ಸಮಸ್ತ ಭಕ್ತಮಂಡಳಿ ಉಪಸ್ಥಿತರಿದ್ದರು.