ಶಿವರಾಮ ಕಾರಂತರ ಆಪ್ತಸಹಾಯಕಿ ಮಾಲಿನಿ ನಿಧನ

ಉಡುಪಿ,ಮಾ.೨೯-ಅನಾರೋಗ್ಯದಿಂದ ಬಳಲುತ್ತಿದ್ದ ಕಡಲತೀರದ ಭಾರ್ಗವ ಡಾ.ಶಿವರಾಮ ಕಾರಂತರ ಆಪ್ತ ಸಹಾಯಕಿ ಸಾಹಿತಿ, ಮಾಲಿನಿ ಮಲ್ಯ ವಿಧಿವಶರಾಗಿದ್ದು, ಅವರಿಗೆ ೭೨ ವರ್ಷ ವಯಸ್ಸಾಗಿತ್ತು.
ನಿನ್ನೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಅವರು ಅವಿವಾಹಿತೆಯಾಗಿದ್ದರು.ಮಾಲಿನಿ ಅವರು ದೀರ್ಘ ಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ವರ್ಷದಿಂದ ಸಮಸ್ಯೆ ಹೆಚ್ಚಿದ ಕಾರಣ ಬೆಂಗಳೂರಿನಲ್ಲಿರುವ ಸಂಬಂಧಿಯೊಬ್ಬರ ಮನೆಯಲ್ಲಿದ್ದು ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ.
ಆರಂಭದಲ್ಲಿ ಶಿಕ್ಷಣ ಸಂಸ್ಥೆಯಲ್ಲಿ ಬೆರಳಚ್ಚುಗಾರರಾಗಿ, ಅನಂತರ ಜೀವ ವಿಮಾ ನಿಗಮದಲ್ಲಿ ಉದ್ಯೋಗಿಯಾಗಿ ಸೇವೆ ಸಲ್ಲಿಸಿದ್ದರು. ಕಾರಂತರ ಆಪ್ತ ಸಹಾಯಕಿಯಾಗಿ ಕಾರ್ಯ ನಿರ್ವಹಿಸಿದ್ದರು.
ಅವರು ‘ನಾನು ಕಂಡ ಕಾರಂತರು ಕೃತಿ‘ ಸೇರಿದಂತೆ ೩೦ಕ್ಕೂ ಹೆಚ್ಚು ಪುಸ್ತಕ
ಗಳು, ಗೊಂದಲಪುರದ ಗಿಂದಲರು, ದಾಂಪತ್ಯಗಾಥೆ ಕಾದಂಬರಿಗಳು, ಹಿಮಾಲಯ ಪ್ರವಾಸಿ ಕಥನ ರಚಿಸಿದ್ದರು.
ಕಾರಂತರ ನಿಧನದ ನಂತರ ಅವರು ವಾಸವಿದ್ದ ಸಾಲಿಗ್ರಾಮದ ಮನೆಯಲ್ಲಿ ಡಾ.ಶಿವರಾಮ ಕಾರಂತ ಪ್ರತಿಷ್ಠಾನವನ್ನು ಸ್ಥಾಪಿಸಲಾಗಿತ್ತು.