ಶಿವರಾತ್ರಿ ಪ್ರಯುಕ್ತ ಹಂಪಿಯಲ್ಲಿ ಭಕ್ತಿ ಭಾವದ ಸಾಂಸ್ಕೃತಿಕ ಜಾಗರಣೆ


ಸಂಜೆವಾಣಿ ವಾರ್ತೆ
ಹೊಸಪೇಟೆ ಮಾ10: ಹಂಪಿ ಶ್ರೀ ವಿರುಪಾಕ್ಷೇಶ್ವರ ದೇವಸ್ಥಾನದ ಆವರಣದಲ್ಲಿ  ಶ್ರೀ ಮರಿದೇವ ಸಂಗೀತ ಸಾಂಸ್ಕೃತಿಕ ಕಲಾವೃಂದದವರು 26ನೇ ವರ್ಷದ ಭಕ್ತಿ ಭಾವನ ಸಾಂಸ್ಕೃತಿಕ ಕಾರ್ಯಕ್ರಮವನ್ನು ಮಹಾ ಶಿವರಾತ್ರಿಯ ಪ್ರಯುಕ್ತ ಅರ್ಥಪೂಣವಾಗಿ ನಡೆಸಿದರು.
ಹಂಪಿಯ ಜಗದ್ಗುರು ಶ್ರೀ ವಿದ್ಯಾರಣ್ಯ ಭಾರತೀ ಸ್ವಾಮಿಜಿಗಳ ಸಾನಿಧ್ಯದಲ್ಲಿ,  ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್‍ರವರು ಹಾರ್ಮೊನಿಯಮ್ ನುಡಿಸುವುದರ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು ದೇವಸ್ಥಾನಗಳಲ್ಲಿ ಭಕ್ತರು ವಿವಿಧ ರೀತಿಯ ತಮ್ಮ ಭಕ್ತಿಯನ್ನು ದೀಪ ಹಚ್ಚುವುದು, ಭಜನೆ ಮಾಡುವುದು ಸಂಗೀತ ನೃತ್ಯಗಳನ್ನು ಮಾಡುತ್ತಾ ಕಲಾ ಸೇವೆಗೈದು ಪ್ರವಚನ ಧಾರ್ಮಿಕ ಚಿಂತನೆ ಮಾಡುವುದೇ ಭಗವಂತ ಶಿವನನ್ನು ಪೂಜಿಸುವ ಪರಿ ಎಂದು ಹೇಳಿದರು. ಹಾಗೇಯೇ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಆಗುವ ಮೂಲಸೌಕರ್ಯಗಳನ್ನು ಅದಷ್ಟು ಬೇಗನೇ ವ್ಯವಸ್ತೆಗೆ ಅಧಿಕಾರಿಗಳಿಗೆ ಸೂಚಿಸಿದರು. ನೀರು ಬೆಳಕಿನ ವ್ಯವಸ್ತೆಯ ಬಗ್ಗೆ ಸರಿಯಾದ ವ್ಯವಸ್ತೆ ನೀಡುವ ಬಗ್ಗೆ ಸೂಚನೆಗಳನ್ನು ನೀಡಿದರು. ಹಾಗೆಯೇ ಸ್ಥಳಿಯ ಕಲಾವಿದರ ಕೋರಿಕೆಯ ಮೇರೆಗೆ ಪ್ರತೀ ತಿಂಗಳು ಅಮವಾಸೆ ದಿನದಂದು ಶ್ರೀ ವಿರುಪಾಕ್ಷೇಶ್ವರ ದೇವಸ್ಥಾನದ ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಏರ್ಪಡಿಸಿ ಸ್ಥಳಿಯ ಕಲಾವಿದರಿಗೆ ಅವಕಾಶ ಕಲ್ಪಿಸಲಾಗುವುದು ಎಂದರು.
ಹಂಪಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಜಿನಿ.ಕೆ.ಷಣ್ಮುಖ ಗೌಡ ಅಧ್ಯಕ್ಷತೆವಹಿಸಿದ್ದರು. ಕಂಪ್ಲಿಯ ಹೇಮಯ್ಯ ಸ್ವಾಮಿ, ದೇವಸ್ಥಾನದ ನಿರ್ವಾಹಕ ಅಧಿಕಾರಿ ಹನುಮಂತಪ್ಪ ಹಾಗೂ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಹನುಮಂತಪ್ಪ, ಕಲಾವೃಂದದ ಸಂಸ್ಥಾಪಕ ಅಧ್ಯಕ್ಷ ಅಂಗಡಿ ವಾಮದೇವ, ಕೆ.ಪಂಪನಗೌಡ, ಎ.ದೊಡ್ಡಬಸಪ್ಪ, ಕೆ.ತೋಟಪ್ಪ, ಸೇರಿದಂತೆ ಇತರರು ಭಾಗವಹಿಸಿದ್ದರು.
ಅಹೋರಾತ್ರಿ ವೈವಿದ್ಯಮಯ ಕಲೆಗಳ ಸ್ಥಳೀಯ ಕಲಾವಿದರು  ನೃತ್ಯ. ಗೀತಗಾಯನದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ರಾತ್ರಿಯಲ್ಲಾ ನೆರೆದಿದ್ದ ಭಕ್ತ ಸಮೂಹಕ್ಕೆ ಭಾವದ ಸಾಂಸ್ಕೃತಿ ಮನೋರಂಜನೆಯ ಜಾಗರಣೆಯಾಗಿತ್ತು.