ಶಿವರಾತ್ರಿ, ದ್ವಾದಶ ಜ್ಯೋತಿರ್ಲಿಂಗಗಳ ಮೆರವಣಿಗೆ

ಸಿರವಾರ,ಫೆ.೨೦- ಮಾನವರು ತಮ್ಮ ಜೀವಿತಾವದಿಯಲ್ಲಿ ಆಸ್ತಿ, ಅಂತಸ್ತುಗಳಿಗಿಂತ ಪುಣ್ಯಗಳಿಸಬೇಕು. ಅದೇ ನಿಮಗೆ ಶ್ರೀರಕ್ಷೆಯಾಗುತ್ತದೆ ಎಂದು ನವಲಕಲ್ ಬೃಹನ್ಮಠದ ಅಭಿನವಶ್ರೀ ಸೋಮನಾಥ ಶಿವಾಚಾರ್ಯ ಮಹಾಸ್ವಾಮಿಗಳು ನುಡಿದರು.
ಪಟ್ಟಣದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದಲ್ಲಿ ಮಹಾಶಿವರಾತ್ರಿ ಅಂಗವಾಗಿ ೭೮ನೇ ವರ್ಷ ಶಿವಜಯಂತಿಯ ಕಾರ್ಯಕ್ರಮದಲ್ಲಿ ಶಿವಬಾಬ ಧ್ವಜಾರೋಹಣ ಮಾಡಿ ನಂತರ ಮಾತನಾಡಿ ನಾವು ಇನ್ನೊಬ್ಬರ ಜೀವನಕ್ಕೆ ಬೆಳಕಾಗಬೇಕು, ಬೆಳಕು ತ್ಯಾಗದ ದೀಪದಂತೆ ಇರಬೇಕು, ಸದಾಕಾಲವೂ ದೇವರ ನೆನಪಿನಲ್ಲಿ ಇರುವುದೇ ಉಪವಾಸ ಎಂದರು. ಓಂ ಶಾಂತಿ ನಿಲಯದ ಸಂಚಾಲಕರಾದ ಬಿ.ಕೆ.ಜ್ಯೋತಿಅಕ್ಕ ಮಾತನಾಡಿ ಅಂದಕಾರ ಕಳೆಯುವದೆ ಶಿವರಾತ್ರಿ, ಪರಮಾತ್ಮ ಸದಾಕಾಲವೂ ನೆನೆಯಬೇಕು, ನಾನು ಎಂಬ ಅಂಹಕಾರ, ಕ್ರೋಧ ತ್ಯಜಿಸಲು ಈ ಶಿವರಾತ್ರಿಯ ಸಂದೇಶವಾಗಿದೆ. ನಾವು ಭಗವಂತನಿಗೆ ಹತ್ತಿರವಾಗಬೇಕು, ಜಗತ್ತು ವಿನಾಶವಾಗುವ ಕಾಲಹತ್ತರವಿದೆ ಎಂದರು.
ಈ ಸಂದರ್ಭದಲ್ಲಿ ಚುಕ್ಕಿ ಸೂಗಪ್ಪ ಸಾಹುಕಾರ್, ಜೆ.ಶರಣಪ್ಪಗೌಡ, ಎ.ಮಲ್ಲಪ್ಪ ಸಾಹುಕಾರ್, ಬಸವಲಿಂಗಪ್ಪ, ಅಯ್ಯನಗೌಡ ಐರಡ್ಡಿ, ಕೃಷ್ಣ ನಾಯಕ, ಜೆ.ಶಿವರಾಮರಡ್ಡಿ, ಶ್ರೀನಿವಾಸ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಮೆರವಣಿಗೆ: ಮಹಾ ಶಿವರಾತ್ರಿ ಅಂಗವಾಗಿ ಪಟ್ಟಣದ ಪ್ರಮುಖ ರಸ್ತೆಯಲ್ಲಿ ೧೨ ದ್ವಾದಶ ಜ್ಯೋತಿರ್ಲಿಂಗಗಳ ಮೆರವಣಿಗೆ ಡೊಳ್ಳು, ಭಜನೆ, ಕುಂಭ, ಕಳಸದೊಂದಿಗೆ ಅದ್ಧೂರಿಯಾಗಿ ಮೆರವಣಿಗೆ ನಡೆಯಿತು.