ಶಿವರಾಜ ಪಾಟೀಲ್ – ರವಿ ಬೋಸರಾಜು : ತೀಕ್ಷ್ಣಗೊಂಡ ಆರೋಪ, ಪ್ರತ್ಯಾರೋಪ

ಬಚ್ಚಾ ಒಬ್ಬ ಸಂಕಷ್ಟದಲ್ಲಿ ರಾಜಕೀಯ ಲಾಭ ಪ್ರಯತ್ನ – ಕಾಂಗ್ರೆಸ್ಸಿನಲ್ಲಿ ತಳಮಳ
ರಾಯಚೂರು.ಮೇ.೩೦- ಅಪೋಜಿಷನ್ ಕೊಹಿ ನಹೀ. ಏಕ್ ಬಚ್ಚಾ ಹೈ, ಇಸ್ಕಾ ಖಯಾಲಿ ಅಲಗಹೈ, ಜೋ ಸಬ್‌ಲೋಗೋನ್ಕಾ ಏಕ್ ಖಯಾಲಿ ರಹೆತೋ ಉಸ್ಕಾ ಏಕ್ ಖಯಾಲಿ ಹೈ, ಹೇ ತಕ್ಲೀಫ್ ಕಾ ಸಮಯ್ ಮೇ, ಓ ಅಪ್ನಾ ಫೈಹಿದಾ ದೆಕ್ನಾಚತಾ ಹೈ ಉಸ್ಕೇ ಸಿವಾ ಕುಚ್ ಬಿ ನಹೀ, ಅಪೋಜಿಷನ್ ವಾಲೋ ಬೀ, ಪೆಸೆಂಟ್ ಬಿ ಅಮೇ ಕಾಲ್ ಕರೆ, ಸಬಿ ಲೋಗ್ ರಾಯಚೂರು ಮೇಲೆ ಅಚ್ಚಾ ಕಾಮ್ ಚಲ್ ರಹಾ ಹೈ.
( ವಿರೋಧ ಪಕ್ಷದ ಯಾರು ಅಲ್ಲ. ಓರ್ವ ಬಚ್ಚಾ ಇದ್ದಾನೆ. ಆತನ ಯೋಚನೆ ಬೇರೆಯಾಗಿವೆ. ಎಲ್ಲರ ಯೋಚನೆ ಭಿನ್ನವಾಗಿದ್ದರೇ, ಈತನ ಆಲೋಚನೆಯೇ ವಿಭಿನ್ನವಾಗಿದೆ. ಇಂತಹ ಸಂಕಷ್ಟದ ಸಮಯದಲ್ಲಿ ತನ್ನ ಲಾಭ ನೋಡಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ. ವಿರೋಧ ಪಕ್ಷಗಳು, ರೋಗಿಗಳು ಎಲ್ಲರೂ ನನಗೆ ಕರೆ ಮಾಡಿ, ಜಿಲ್ಲೆಯಲ್ಲಿ ಉತ್ತಮವಾದ ಕೋವಿಡ್ ನಿರ್ವಹಣೆ ನಡೆದಿದೆಂದು ಪ್ರಶಂಸಿಸಿದ್ದಾರೆ.)
ಮೇಲಿನ ಈ ಹೇಳಿಕೆ ಡಾ.ಶಿವರಾಜ ಪಾಟೀಲ್ ಅವರು ಇತ್ತೀಚಿಗೆ ಯೂಟ್ಯೂಬ್ ಚಾನೆಲ್‌ವೊಂದಕ್ಕೆ ನೀಡಿದ ವಿವಾದಿತ ಹೇಳಿಕೆಯಾಗಿದ್ದು, ಇದು ಈಗ ಕಾಂಗ್ರೆಸ್ ಪಕ್ಷದಲ್ಲಿ ಭಾರೀ ಅಸಮಾಧಾನಕ್ಕೆ ಕಾರಣವಾಗಿದೆ. ಆಕ್ಸಿಜನ್ ಕೊರತೆ, ರೆಮ್‌ಡಿಸಿವಿರ್ ಕೊರತೆ ಹಾಗೂ ಇತ್ಯಾದಿ ಸಮಸ್ಯೆ ಬಗ್ಗೆ ಸರ್ಕಾರ ಮತ್ತು ಶಾಸಕರ ವಿರುದ್ಧ ನಿರಂತರ ಹೇಳಿಕೆ ನೀಡುತ್ತಿದ್ದ ಕಾಂಗ್ರೆಸ್ ಯುವ ಮುಖಂಡ ರವಿ ಬೋಸರಾಜು ಅವರ ಬಗ್ಗೆ ಪರೋಕ್ಷವಾಗಿ ಈ ರೀತಿ ಹೇಳಿಕೆ ನೀಡಲಾಗಿದೆಂದು ಅವರ ಬೆಂಬಿಲಗರ ಭಾವನೆ ಈಗ ಬಿಜೆಪಿ, ಕಾಂಗ್ರೆಸ್ ಸಮರ ಮತ್ತಷ್ಟು ಬಿರುಸುಗೊಳ್ಳುವಂತೆ ಮಾಡಿದೆ.
ಶಾಸಕ ಡಾ.ಶಿವರಾಜ ಪಾಟೀಲ್ ಅವರು ತಮ್ಮ ಹೇಳಿಕೆಯಲ್ಲಿ ಯಾರದೇ ಹೆಸರು ತೆಗೆದುಕೊಳ್ಳದೇ ವಿರೋಧ ಪಕ್ಷಗಳಲ್ಲಿ ಒಬ್ಬ ಬಚ್ಚಾ ಇದ್ದಾನೆ. ಆತ ಇದೆಲ್ಲವನ್ನು ಮಾಡುತ್ತಿದ್ದಾರೆಂಬ ಹೇಳಿಕೆ ಈಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ಯೂಟ್ಯೂಬ್‌ನ ಈ ಹೇಳಿಕೆ ನಂತರ ಕಾಂಗ್ರೆಸ್ ಪಕ್ಷ ನಗರದಲ್ಲಿ ತನ್ನ ಚಟುವಟಿಕೆಗಳನ್ನು ಮತ್ತಷ್ಟು ತೀವ್ರಗೊಳಿಸಿದೆ. ಇಲ್ಲಿವರೆಗೂ ಡಾ.ಶಿವರಾಜ ಪಾಟೀಲ್ ತಮ್ಮ ವಿರೋಧಿಗಳ ಬಗ್ಗೆ ಯಾವುದೇ ಮಾಧ್ಯಮಕ್ಕೆ ಹೇಳಿಕೆ ನೀಡಿರಲಿಲ್ಲ. ಆದರೆ, ಯೂಟ್ಯೂಬ್ ಚಾನೆಲ್‌ವೊಂದಕ್ಕೆ ನೀಡಿದ ಹೇಳಿಕೆ ವಿರೋಧ ಪಕ್ಷಗಳ ಸಂಘರ್ಷಕ್ಕೆ ತಾವು ಸೈ ಎನ್ನುವುದನ್ನು ತೋರಿಸಿಕೊಟ್ಟಂತ್ತಿದೆ.
ನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ಅದರಲ್ಲೂ ವಿಶೇಷವಾಗಿ ಡಾ.ಶಿವರಾಜ ಪಾಟೀಲ್ ಮತ್ತು ರವಿ ಬೋಸರಾಜು ಅವರ ಮಧ್ಯೆ ಸಂಘರ್ಷ ತೀವ್ರವಾಗಿದೆ. ವಿಧಾನಸಭಾ ಚುನಾವಣೆ ಪೂರ್ವ ಸಿದ್ಧತೆ ಚಟುವಟಿಕೆಗಳು ಕಳೆದ ಎರಡು ವರ್ಷದಿಂದಲೂ ನಡೆಯುತ್ತಿವೆ. ಈಗ ಈ ಚಟುವಟಿಕೆಗಳು ಮತ್ತಷ್ಟು ಚುರುಕುಗೊಂಡು ಇಬ್ಬರು ನಾಯಕರು ತೂ ತೂ… ಮೈ ಮೈ… ಎಂಬ ತಾರಕ್ಕೇರಿದೆ. ಕಳೆದ ಎರಡು ದಿನಗಳ ಹಿಂದಿನ ಬಚ್ಚಾ ಎಂದು ಹೇಳಿರುವ ಪ್ರತಿಕ್ರಿಯೆ ಕಾಂಗ್ರೆಸ್ ಪಕ್ಷದಲ್ಲಿ ತಳಮಳಕ್ಕೆ ಕಾರಣವಾಗಿದೆ.
ರವಿ ಬೋಸರಾಜು ಅವರು ಕಳೆದ ಎರಡು ದಿನಗಳ ಹಿಂದೆ ಶಾಸಕರ ವೈಫಲ್ಯಗಳ ಬಗ್ಗೆ ಆರೋಪಿಸುವ ಮೂಲಕ ಜಿಲ್ಲೆಯಲ್ಲಿ ಕೊರೊನಾ ಸಾವಿಗೆ ಯಾರು ಕಾರಣವೆಂದು ಪ್ರಶ್ನಿಸಿದ್ದರು. ಕೊರೊನಾ ಸಂದರ್ಭದಲ್ಲಿ ನಡೆದ ಈ ಸಂಘರ್ಷ ರಾಜಕೀಯವಾಗಿ ಎರಡು ಪಕ್ಷದ ಮುಖಂಡರಿಗೆ ಯಾವ ರೀತಿಯಲ್ಲಿ ನಷ್ಟ, ಲಾಭ ಮಾಡಲಿದೆಯೇ ಮುಂಬರುವ ದಿನಗಳು ನಿರ್ಧರಿಸಲಿವೆ. ಆದರೆ, ನಗರದಲ್ಲಿ ಮಾತ್ರ ಜನರಿಗೆ ಒಂದಷ್ಟು ಸೌಲಭ್ಯ ವೃದ್ಧಿಗೆ ನೆರವಾಗಿರುವುದು ಸ್ಪಷ್ಟವಾಗಿದೆ. ಯಾರಿಗಿಂತ ತಾವೇನು ಕಡಿಮೆ ಎನ್ನುವ ಸ್ಪರ್ಧೆಯಲ್ಲಿ ಜನರಿಗೆ ಆರೋಗ್ಯ ಸೌಲಭ್ಯ ಅನುಕೂಲದೊಂದಿಗೆ ಆಹಾರ ಮತ್ತಿತರ ಸೌಲಭ್ಯಗಳು ಪೂರೈಸುವ ವ್ಯವಸ್ಥೆ ನಡೆದಿದೆ. ಈ ಮಧ್ಯೆ ಶಾಸಕರ ಈ ಬಚ್ಚಾ ಹೇಳಿಕೆ ಮತ್ತೊಂದು ತೀವ್ರ ಸಂಘರ್ಷಕ್ಕೆ ಕಾರಣವಾಗಿದೆ. ಹೇಳಿಕೆ ಮತ್ತು ಪ್ರತಿ ಹೇಳಿಕೆಗಳ ಸರದಿ, ಎರಡು ಪಕ್ಷದ ಕಾರ್ಯಕರ್ತರು ಸವಾಲ್ ಹಾಕಿ ನಿಂತಿದ್ದಾರೆ. ಈ ಉಭಯರ ಸಂಘರ್ಷ ನಗರ ವಿಧಾನಸಭಾ ಕ್ಷೇತ್ರದಲ್ಲಿ ರಾಜಕೀಯ ಧೃವೀಕರಣಕ್ಕೆ ದಾರಿ ಮಾಡಿದೆ.
ಸಮುದಾಯಗಳ ಮಧ್ಯೆ ಒಂದೆಡೆ ಪಕ್ಷ ಮತ್ತು ವೈಯಕ್ತಿಕ ವರ್ಚಸ್ಸು ಹೆಚ್ಚಿಸಿಕೊಳ್ಳುವ ಪ್ರಯತ್ನ ನಡೆಯುತ್ತಿರುವಾಗಲೇ ಮತ್ತೊಂದು ಕಡೆ ನಗರ ವಿಧಾನಸಭಾ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸುವ ಯುವಕರು ಬಿಜೆಪಿ ಮತ್ತು ಕಾಂಗ್ರೆಸ್ ಮಧ್ಯೆ ವಿಭಜಿತಗೊಂಡು ಮುಂಬರುವ ಚುನಾವಣೆಯ ಸಿದ್ಧತೆಗೆ ಅಣಿಗೊಳ್ಳುವಂತೆ ಈ ಪೈಪೋಟಿ ವೇದಿಕೆಯಾಗದೆ.
ಡಾ.ಶಿವರಾಜ ಪಾಟೀಲ್ ಮತ್ತು ರವಿ ಬೋಸರಾಜು ಅವರ ಮಧ್ಯದ ಈ ರಾಜಕೀಯ ಸಂಘರ್ಷ ಹೇಳಿಕೆಯ ಭಾಷೆಯ ಎಲ್ಲೆಯನ್ನೂ ಮೀರುತ್ತಿರುವುದು ಮುಂಬರುವ ದಿನಗಳಲ್ಲಿ ಯಾವ ರೀತಿಯ ಆರೋಪ, ಪ್ರತ್ಯಾರೋಪಗಳಿಗೆ ಯಾವ ತೀವ್ರತೆಯನ್ನು ಪಡೆಯಲಿವೆ ಎನ್ನುವುದು ಕುತೂಹಲ ಕೆರಳುವಂತೆ ಮಾಡಿದೆ.