ಶಿವರಾಜ ಪಾಟೀಲ್ ಮನೆ ಮನೆಗೆ ತೆರಳಿ ಮತಯಾಚನೆ

ರಾಯಚೂರು,ಮೇ.೦೭- ನಗರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಡಾ.ಶಿವರಾಜ ಪಾಟೀಲ್ ಅವರು ತಮ್ನ ಅಪಾರ ಕಾರ್ಯಕರ್ತರು, ಬೆಂಬಲಿಗರೊಂದಿಗೆ ತೆರಳಿ ವಾರ್ಡ್ ನಂ. ೪ ಇಂದಿರಾನಗರ, ಗೋಲ ಮಾರುಕಟ್ಟೆಯಲ್ಲಿ ಮತಯಾಚನೆ ಮಾಡಿದರು. ಸತತ ಎರಡು ತಾಸು ಮಳೆಯಲ್ಲೇ ನೆನೆಯುತ್ತಾ ಉತ್ಸಾಹದಿಂದ ಮನೆ ಮನೆಗೆ ತೆರಳಿ ಡಬಲ್ ಇಂಜನ್ ಸರ್ಕಾರದ ಸಾಧನೆಗಳು ಭವಿಷ್ಯದಲ್ಲಿ ಸಿಗುವ ಸೌಲಭ್ಯಗಳ ಮನವರಿಕೆ ಮಾಡಿದರು.
ಈ ಸಂದರ್ಭದಲ್ಲಿ ರೈಲ್ವೆ ಬೋರ್ಡ್ ಸದಸ್ಯ ಮತ್ತು ಪಕ್ಷದ ಉಪಾಧ್ಯಕ್ಷ ಬಾಬುರಾವ್, ಚನ್ನಪ್ಪಗೌಡ, ಸೂಗಪ್ಪ, ಅಸೋಕ, ರವಿ, ರಮೇಶ, ವೆಂಕಟೇಶ, ಶಶಿ, ಸಂಗಮೇಶ ಗೌಡ, ರಾಜೇಶ ಮತ್ತು ಬಸವರಾಜ ಅಸ್ಕಿಹಾಳ, ಶ್ರೀನಿವಾಸ ಇಂಜನಿಯರ್ ತಿಮ್ಮನಗೌಡ ಇದ್ದರು.