ಶಿವರಾಜ ಪಾಟೀಲ್ ಬಿರುಸಿನ ಮತಯಾಚನೆ

ರಾಯಚೂರು,ಮೇ.೦೬- ನಗರದ ವಾರ್ಡ್ ನಂ. ೩೦, ೩೧ ರಲ್ಲಿ ಬಿಜೆಪಿ ಅಭ್ಯರ್ಥಿ ಶಿವರಾಜ ಪಾಟೀಲ್ ಅವರು ಬಿರುಸಿನ ಮತಯಾಚನೆ ಕೈಗೊಂಡರು.
ವಾರ್ಡ್ ಜನತೆ ಅದ್ದೂರಿಯಾಗಿ ಸ್ವಾಗತ ಕೋರಿದರು. ಕಾರ್ಯಕರ್ತರ ಉತ್ಸಾಹದ ಜೊತೆಗೆ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದರು.ಜನರ ಪ್ರತಿಕ್ರಿಯೆ ಉತ್ತಮವಾಗಿತ್ತು. ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾದ ಡಾ.ಶಿವರಾಜ ಪಾಟೀಲ್ ಅವರು ತಮ್ಮ ಅಪಾರ ಕಾರ್ಯಕರ್ತರು ಮತ್ತು ಬೆಂಬಲಿಗರೊಂದಿಗೆ ಮತಯಾಚನೆ ನಡೆಸಿದರು.
.ಶಾಂತಿಗೆ, ಅಭಿವೃದ್ದಿಗೆ ಮತ ನೀಡಲು ಕೋರಿದರು. ರೈಲ್ವೆ ಬೋರ್ಡ್ ಸದಸ್ಯ ಮತ್ರು ಪಕ್ಷದ ಉಪಾಧ್ಯಕ್ಷರಾದ ಬಾಬುರಾವ್, ಕೇಶವರೆಡ್ಡಿ, ನಗರಸಭೆ ಸದಸ್ಯ, ಶ್ರೀನಿವಾಸರೆಡ್ಡಿ ಎಂ.ಸತ್ಯನಾರಾಯಣ, ನಾಗರಾಜ, ಗಂಗಾಧರ ಯಾದವ್, ಅಂಜಿ, ಬೋರವೆಲ್ ಜಿಂದಪ್ಪ, ವಿನೋದರಾಜ್, ವಿಜ್ಜು, ವೀರಯ್ಯ, ಚಿನ್ನಿ, ರವಿ ಬಸವರಾಜ ಅಸ್ಕಿಹಾಳ, ತಿಮ್ಮನಗೌಡ ಸೇರಿದಂತೆ ಅಙೆಕರು ಭಾಗವಹಿಸಿ, ಶಿವರಾಜ ಪಾಟೀಲರ ಪರ ಮತಯಾಚನೆ ಮಾಡಿದರು. ಜನರು ಅಭಿವೃದ್ದಿಗೆ ಬೆಂಬಲಿಸುವುದಾಗಿ ಹೇಳಿದರು.