ಶಿವರಾಜ ಪಾಟೀಲ್ ಪರ ಬಿರುಸಿನ ಪ್ರಚಾರ

ರಾಯಚೂರು, ಏ.೨೭- ನಗರ ವಿಧಾನಸಭಾ ಕ್ಷೇತ್ರದ ವಾರ್ಡ್ ನಂ.೪ರ ಜೋಸೆಫ್ ಇಂದಿರಾ ನಗರದಲ್ಲಿ ಬಿಜೆಪಿ ಅಭ್ಯರ್ಥಿ ಶಾಸಕ ಡಾ. ಶಿವರಾಜ ಪಾಟೀಲ್ ಪರ ಮತಯಾಚನೆ ಮಾಡಲಾಯಿತು.
ಚಂದ್ರಶೇಖರಸ್ವಾಮಿ, ರಮೇಶ,ಅಶೋಕ, ಶಶಿ, ವಿಜಯಕುಮಾರ, ರವಿ ಸೂಗಪ್ಪ ಶಾಸಕರ ಸಹೋದರರಾದ ಚನ್ನನಗೌಡ ಮತ್ತು ರೈಲ್ವೆ ಬೋರ್ಡ ಸದಸ್ಯರಾದ ಬಾಬುರಾವ್, ಅಶೋಕ, ರವಿ ವೆಂಕಟೇಶ, ಶ್ರೀನಿವಾಸ ಇಂಜನಿಯರ್, ಸಂಗಮೇಶ , ಬಾಜಿ ಶಶಿ, ರವಿಕುಮಾರ ಅವರು ಮನೆ ಮನೆಗೆ ತೆರಳಿ ಪ್ರಗತಿಪರ ಚಿಂತನೆಯ ಬಿಜೆಪಿಗೆ ಬೆಂಬಲಿಸುವಂತೆ ಕೋರಿದರು.ಇದೇ ಸಂದರ್ಭದಲ್ಲಿ ಇಂದಿರಾ ನಗರ ಚರ್ಚ ಫಾದರ ಜೋಸೆಫ ಅವರು ಸಹ ಬಿಜೆಪಿಗೆ ಬೆಂಬಲಿಸುವುದಾಗಿಹೇಳಿದರು.ಚಂದ್ರಶೇಖರಸ್ವಾಮಿ ಅವರು ಸಹ ಶಾಸಕರಿಗೆ ಸಹಕಾರ ನೀಡುವುದಾಗಿ ಹೇಳಿದರು.ಬಸವರಾಜ ಅಸ್ಕಿಹಾಳ, ಭಾಸ್ಕರಬಾಬು, ತಿಮ್ಮನಗೌಡ ಅವರು ಸೇರಿದರಂತೆ ಅನೇಕರು ಭಾಗವಹಿಸಿದ್ದರು.