ಶಿವರಾಜ ಪಾಟೀಲ್ ನೇತೃತ್ವ – ವಿಧಾನ ಪರಿಷತ್ ಚುನಾವಣೆ ಸಭೆ

ರಾಯಚೂರು.ನ.೨೩- ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಬಿರುಸಿನ ರಾಜಕೀಯ ಪ್ರಚಾರಕ್ಕಾಗಿ ಮತ್ತು ಬಿಜೆಪಿಯ ಗೆಲುವಿಗೆ ಸಂಬಂಧಿಸಿ ನಿನ್ನೆ ನಗರ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಶಿವರಾಜ ಪಾಟೀಲ್ ಅವರ ನೇತೃತ್ವದಲ್ಲಿ ಅವರ ಕಛೇರಿಯಲ್ಲಿ ಸಭೆ ನಡೆಸಲಾಯಿತು.
ಈ ಸಭೆಗೆ ನಗರ ವಿಧಾನಸಭಾ ಕ್ಷೇತ್ರಕ್ಕೆ ಬರುವ ೧೪ ಗ್ರಾಮಗಳ ಗ್ರಾಪಂ ಸದಸ್ಯರು ಮತ್ತು ಮುಖಂಡರು ಆಗಮಿಸಿದ್ದರು. ಈ ಸಭೆಯಲ್ಲಿ ಬಿಜೆಪಿಯ ಪರ ಕಾರ್ಯ ನಿರ್ವಹಿಸಲು ಚರ್ಚಿಸಲಾಯಿತು. ತಿಮ್ಮಪ್ಪ ನಾಡಗೌಡ, ಬಿ.ಗೋವಿಂದ, ಈ.ಶಶಿರಾಜ, ರವೀಂದ್ರ ಜಲ್ದಾರ್ ಸೇರಿದಂತೆ ಅನೇಕರು ಸಭೆಯಲ್ಲಿ ಪಾಲ್ಗೊಂಡಿದ್ದರು.