ಶಿವರಾಂ ಆರೋಗ್ಯ ವಿಚಾರಿಸಿದ ಶಿವಣ್ಣ

ಬೆಂಗಳೂರು,ಡಿ.೩-ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಿರಿಯ ನಟ ಶಿವರಾಂ ಅವರ ಆರೋಗ್ಯವನ್ನು ವಿಚಾರಿಸಲು ಆಸ್ಪತ್ರೆಗೆ ಬಂದಿದ್ದ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅವರು ದೇವರು ಶಿವರಾಂ ಅವರ ಆರೋಗ್ಯ ಸುಧಾರಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಶಿವರಾಂ ಅವರ ಜೊತೆಗೆ ಕಳೆದಿರುವ ಹಳೆಯ ನೆನಪುಗಳನ್ನು ಮೆಲಕು ಹಾಕಿ ಭಾವುಕರಾದ ಶಿವಣ್ಣ, ನಮ್ಮ ಕುಟುಂಬದ ಜೊತೆ ಯಾವುದೇ ಪರಿಸ್ಥಿತಿಯಲ್ಲಿಯೂ ಅವರು ನಮ್ಮ ಜೊತೆಗೆ ಇದ್ದರು. ದೇವರು ಕೈ ಬಿಡಲ್ಲ, ಚಿಕ್ಕ ವಯಸ್ಸಿನಿಂದಲೂ ನೋಡುತ್ತಿದ್ದೇವೆ. ನಮ್ಮ ಕುಟುಂಬದಲ್ಲಿ ಅವರು ಒಬ್ಬರು ಆಗಿದ್ದಾರೆ ಎಂದರು.
ನಾವೆಲ್ಲ ಅಯಪ್ಪ ದೇವಸ್ಥಾನಕ್ಕೆ ಮೂರು ವರ್ಷಗಳ ಹಿಂದೆ ಹೋಗಿದ್ದೇವು. ಆಗ ಅವರಿಗೆ ೮೧ ವರ್ಷ, ಆದರೂ ಯಾವುದೇ ಸಹಾಯವಿಲ್ಲದೆ ಬೆಟ್ಟ ಹತ್ತವರು, ಮನಸ್ಸು ಬಂದಾಗಲೆಲ್ಲಾ ಅಯಪ್ಪ ದೇವಸ್ಥಾನ ಕ್ಕೆ ಅವರು ಹೋಗುತ್ತಿದ್ದರು. ನಾವು ತಮ್ಮನ ಕಳೆದುಕೊಂಡ ನೋವುನಲ್ಲಿ ಇದ್ದೇವು, ದೇವರು ನಮಗೆ ಯಾಕೆ ಪದೇ ಪದೇ ಇತರ ನೋವು ಕೊಡುತ್ತಿದ್ದಾನೋ ಗೊತ್ತಿಲ್ಲ ಎಂದು ದುಃಖಿತರಾಗಿದ್ದಾರೆ.
ಅಯಪ್ಪನ ಪೂಜೆ ವೇಳೆ ಈ ರೀತಿ ಆಗಿದೆ ಅಂದರೆ ದೇವರು ಅವರನ್ನ ಕೈ ಬಿಡಲ್ಲ. ಈ ಪರಿಸ್ಥಿತಿಯಲ್ಲಿ ಅವರನ್ನು ನೋಡಲು ತುಂಬಾ ಕಷ್ಟ ಆಗುತ್ತದೆ. ಮತ್ತೆ ಅವರು ಗುಣಮುಖರಾಗಿ ಬರಬೇಕು ಎನ್ನುವುದು ನಮ್ಮಗೂ ಆಸೆ ಎಂದು ಹೇಳಿದ್ದಾರೆ.
ಚೇತರಿಕೆ ಇಲ್ಲ:
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಿರಿಯ ನಟ ಶಿವರಾಂ ಆರೋಗ್ಯದಲ್ಲಿ ಯಾವುದೇ ಚೇತರಿಕೆ ಇಲ್ಲ ಎಂದು ವೈದ್ಯರು ಹೇಳಿದ್ದಾರೆ.
ಶಿವರಾಂ ಆರೋಗ್ಯದ ಕುರಿತು ಮಾಹಿತಿ ನೀಡಿರುವ ವೈದ್ಯರು, ಶಿವರಾಂ ಆರೊಗ್ಯ ಸ್ಥಿತಿ ಗಂಭೀರವಾಗಿದ್ದು, ಯಾವುದೇ ಚೇತರಿಕೆ ಕಂಡುಬಂದಿಲ್ಲ. ಸದ್ಯ ನಿನ್ನೆ ಹೇಗಿದ್ದರೂ ಇಂದೂ ಹಾಗೇ ಇದ್ದಾರೆ. ಹಾಗಾಗಿ ಇಂದು ನುರಿತ ವೈದ್ಯರು ಪರೀಕ್ಷೆ ಮಾಡಿ ನಂತರ ಮಾಹಿತಿ ನೀಡಲಿದ್ದಾರೆ. ಈಗಾಗಲೇ ಕೋಮಾದಲ್ಲಿದ್ದು, ಶಿವರಾಮ್ ಅವರು ಬದುಕುಳಿದ್ರೆ ಮಿರಾಕಲ್ ಎಂದು ಹೇಳಿದ್ದಾರೆ.