ಶಿವಯೋಗ ಎಂದರೆ ಶುದ್ಧೀಕರಣ 

ಚಿತ್ರದುರ್ಗ , ಜೂ. 21 : ಆಲೋಚನೆಗಳ ಜೊತೆ ಇಂದ್ರಿಯಗಳ ಶುದ್ಧೀಕರಣ ಮಾಡಿಕೊಳ್ಳಬೇಕಾಗುತ್ತದೆ. ಶಿವಯೋಗ ಅಂದರೆ ಶುದ್ಧೀಕರಣ ಮಾಡುವ ಕ್ರಿಯೆ. ಶಿವಯೋಗದ ಮೂಲಕ ಏಕಾಗ್ರತೆ ಸಾಧ್ಯವಾಗುತ್ತದೆ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದರು.ಶ್ರೀಮಠದಲ್ಲಿ ಅಂತಾರಾಷ್ಟಿçÃಯ ಯೋಗದಿನದ ಅಂಗವಾಗಿ ಯೋಗ ದಿನ – ಶಿವಯೋಗ ದರ್ಶನ ಪ್ರಾತ್ಯಕ್ಷಿಕೆಯನ್ನು ನೀಡುತ್ತ ಶ್ರೀಗಳು ಆಶೀರ್ವಚನ ನೀಡಿದರು. ಜಪ, ಏಕಾಗ್ರತೆ ಬಹಳ ಮುಖ್ಯ. ಮನುಷ್ಯ ಜೀವವನ್ನು ಖರೀದಿ ಮಾಡಲು ಸಾಧ್ಯವಿಲ್ಲ. ಹಾಗಾಗಿ ಶಿವಯೋಗ(ಧ್ಯಾನ)ದ ಮೂಲಕ ಜೀವನದಲ್ಲಿ ಜಾಗೃತಿಯನ್ನು ಕಾಪಾಡಿಕೊಂಡು ಹೋಗಬೇಕಾಗುತ್ತದೆ. ಎಚ್ಚರದ ಬದುಕು ನಮ್ಮದಾಗಬೇಕು. ಶಿವಯೋಗದಿಂದ ವ್ಯಕ್ತಿತ್ವದ ವಿಕಸನ. ಯಾವುದೇ ಕೆಲಸವನ್ನು ಮಾಡಲಿ ಅದರಲ್ಲಿ ಸ್ಪಷ್ಟತೆಯಿರಬೇಕು. ಕೇಳುವ, ಓದುವ, ಹೀಗೆ ಅನೇಕ ರೀತಿಯ ಸಾಮರ್ಥ್ಯವನ್ನು ಬಳಸಿಕೊಳ್ಳಬೇಕು. ಮಾಡುವ ಕೆಲಸ ಪ್ರಾಮಾಣಿಕತೆಯಿಂದ ಕೂಡಿರಬೇಕು. ಸಂಘಟನಾ ಶಕ್ತಿ ಮಾಡಬೇಕು ಎಂದು ನುಡಿದರು.