ಶಿವಯೋಗಿ ಸಿದ್ಧರಾಮೇಶ್ವರ ರಥ ವಜ್ರಮಹೋತ್ಸವ: ಧ್ವಜಾರೋಹಣ


ದಾವಣಗೆರೆ.ಜು.೨೫: ದೇಶ, ನಾಡು, ನುಡಿ, ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಕಾಯಕ ಹಾಗೂ ಯಾವುದೇ ರಂಗದ ಧ್ವಜವು ಆ ರಂಗದ ಸ್ವಾಭಿಮಾನ, ಧೈಯ, ಸಂಸ್ಕೃತಿಯ ಪ್ರತೀಕ ಹಾಗೂ ಚೈತನ್ಯದ ಚಿಲುಮೆಯ ಸಂಕೇತವಾಗಿದೆ ಎಂದು ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ತಿಳಿಸಿದರು.
ನಗರದ ವೆಂಕಭೋವಿ ಕಾಲೋನಿಯ ಶ್ರೀ ಜಗದ್ಗುರು ಸಿದ್ಧರಾಮೇಶ್ವರ ಮಹಾಸಂಸ್ಥಾನ, ಶಾಖಾಮಠದಲ್ಲಿ  ಪ್ರಾರಂಭವಾದ ಶಿವಯೋಗಿ ಸಿದ್ಧರಾಮೇಶ್ವರ ರಥ ವಜ್ರಮಹೋತ್ಸವ ನಿಮಿತ್ತ ಧರ್ಮ-ಧ್ವಜಾರೋಹಣ ಮಾತಾನಾಡಿದರು. ನೆರವೇರಿಸಿ ಧರ್ಮವು ಸಂಪ್ರದಾಯ ಸತ್ ಸತ್ಸಂಗ, ಸತ್ ಸಂಸ್ಕೃತಿ, ಸತ್ ಜೀವನದ ಗೌರವ ಹಾಗೂ ಮೌಲ್ಯಯುತ ಒಂದು ಎಲ್ಲೆಯನ್ನು ಹಾಕಿಕೊಡುತ್ತದೆ. ಶರಣರು ಕಾಯಕ ದಾಸೋಹ ಶಿವಯೋಗದ ತಳಹದಿ ಮೇಲೆ ಸುಖ ಶಾಂತಿ ನೆಮ್ಮದಿಯ ಮಾರ್ಗೋಪಯವನ್ನು ತೋರಿದ್ದಾರೆ. ಕಾಯಕ ಸಮುದಾಯದ ಆಸ್ಮಿತೆ ಸಿದ್ಧರಾಮೇಶ್ವರರು, ಕಾಯಕದಿಂದ ಜಲ-ಜನ-ಜಾತ್ಯತೀತ ನಾಡಿನ ಜಾಗೃತಿವುಂಟು ಮಾಡಿದರು. ಅನ್ನಛತ್ರ,ಅರವಂಟಿಕೆ, ಗುರುಕುಲ ಮೂಲಕ ಅನ್ನದಾಸೋಹ, ಜ್ಞಾನ ದಾಸೋಹದ ಜಾಗೃತಿ ಮೂಡಿಸಿದರು. ವೈಜ್ಞಾನಿಕ ವೈಚಾರಿಕತೆ ಧಾರ್ಮಿಕ ಜಿಜ್ಞಾಸುಗಳಿಗೆ ಶಿವಯೋಗ ಜಾಗೃತಿ ಮೂಡಿಸಿದರು ಅಭಿಪ್ರಾಯ ವ್ಯಕ್ತಪಡಿಸಿದರು. ಎಂದು  ಮೊದಲನೇ ಶ್ರಾವಣ ಸೋಮವಾರದವರೆಗೂ ಮಹಾವಚನ ಭಜನೆ ಏರ್ಪಡಿಸಿದೆ. ಆಗಸ್ಟ್ 1ರಂದು ರಥ ವಜ್ರಮಹೋತ್ಸವವು ಜರುಗಲಿದೆ.
ಈ ವೇಳೆ ಜಿಲ್ಲಾ ಭೋವಿ ಸಮಾಜದ ಮುಖಂಡರಾದ ಡಿ.ಬಸವರಾಜ್, ಹೆಚ್.ಆನಂದಪ್ಪ, ಜಯಣ್ಣ, ಗೋಪಾಲ, ಆರ್.ಶ್ರೀನಿವಾಸ, ಮೂರ್ತಿಪ್ಪ ಕೇಶವಮೂರ್ತಿ, ಶೇಖರಪ್ಪ, ವೆಂಕಟೇಶ್‌. ಎ.ಬಿ.ನಾಗರಾಜು, ಹರಿಹರ ರಾಮಣ್ಣ, ಹೊನ್ನಾಳ್ಳಿ ನಾಗರಾಜ್, ಜಗಳೂರು ದೇವರಾಜ್ ಚನ್ನಗಿರಿ ಗದಗ ರಾಜಪ್ಪ ಹಾಗೂ ಭೋವಿ ಸಮಾಜದ ಹಿರಿಯ ಮುಖಂಡರು ಮತ್ತು ನಾಗರಿಕರು ಇದ್ದರು.Attachments area