ಶಿವಯೋಗಿ ಸಿದ್ಧರಾಮೇಶ್ವರ ತತ್ವಗಳು ಸಮಾಜಕ್ಕೆ ದಾರಿದೀಪ: ಗುತ್ತೇದಾರ

ಆಳಂದ:ಜ.16: 12ನೇ ಶತಮಾನದಲ್ಲಿ ಬಸವಾದಿ ಶರಣರು ಮೊದಲಗೊಂಡು ಅವರ ಸಮಕಾಲಿನವರಾದ ಸೊನ್ನಲಗಿಯ ಶಿವಯೋಗಿ ಸಿದ್ಧರಾಮೇಶ್ವರರು ನೀಡಿದ ಕಾಯಕ, ದಾಸೋಹ ಮತ್ತು ವಚನ ಸಾಹಿತ್ಯ ಸಮಾಜಕ್ಕೆ ದಾರಿ ದೀಪವಾಗಿದೆ. ಅವರ ಹಾಕಿಕೊಟ್ಟ ಮಾರ್ಗದಲ್ಲಿ ತತ್ವಗಳ ಪಾಲಿಸಲು ಬದ್ಧರಾಗೋಣಾ ಎಂದು ಶಾಸಕ ಸುಭಾಷ ಗುತ್ತೇದಾರ ಅವರು ಹೇಳಿದರು.

ಪಟ್ಟಣದ ತಾಲೂಕು ಆಡಳಿತಸೌಧನಲ್ಲಿ ಆಯೋಜಿಸಿದ್ದ ಶಿವಯೋಗಿ ಸಿದ್ಧರಾಮೇಶ್ವರ ಅವರ ಜಯಂತ್ಯೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.

ಶರಣರು ಸಂತರು ಜಾತಿ ಪಂತಕ್ಕೆ ಸೀಮಿತವಾಗಿಲ್ಲ. ಅವರು ಇಡೀ ಮಾನವರನ್ನು ಒಂದುಗೂಡಿಸಿ ಅವರ ಕಲ್ಯಾಣಕ್ಕಾಗಿ ಶ್ರಮಿಸಿ ಬದುಕನ್ನು ಕಟ್ಟಿಕೊಟ್ಟಿದ್ದಾರೆ. ಅವರು ತಮಗಾಗಿ ಜೀವಿಸದೆ ಜನಪರ ಜೀವಪರ ಶ್ರೇಯೋಭಿವೃದ್ಧಿಗೆ ಶ್ರಮಿಸಿದ್ದು ಇಂದಿಗೂ ಮಾದರಿಯಾಗಿದೆ. ಶರಣರ ವಚನಗಳನ್ನು ಅಧ್ಯಯಮಾಡಿ ಪ್ರಗತಿಯತ್ತ ಸಾಗಬೇಕು ಎಂದು ಹೇಳಿದರು.

ಕಮಲಾನಗರ ಸರ್ಕಾರಿ ಪ್ರೌಢಶಾಲೆಯ ಕನ್ನಡ ಪಂಡಿತ ಚಂದ್ರಶೇಖರ ಕಟ್ಟಿಮನಿ ಅವರು ಉಪನ್ಯಾಸ ನೀಡಿ, 12ನೇ ಶತಮಾನ ಜಾಗತೀಕ ಇತಿಹಾಸ ಪರಿವರ್ತನೆ ತಂದ ಕಾಲವಾಗಿದ್ದು, ಅಂದು ಅರಮನೆಗೆ ಸೀಮಿತವಾಗಿದ್ದ ಸಾಹಿತ್ಯ ರಚನೆ ಜನಸಾಮಾನ್ಯರಿಂದ ರಚಿತವಾಗಿ ಎಲ್ಲಡೆ ಪರಸರಿಸುವಂತಾಯಿತು. ಬಸವಣ್ಣನವರ ನೇತೃತ್ವದಲ್ಲಿ ಪಂಚ ಪ್ರಮುಖರಲ್ಲಿ ಶಿವಯೋಗಿ ಸಿದ್ಧರಾಮರು ಪ್ರಮುಖ ವಚನಕಾರರಾಗಿ ಕಾಯಕ, ದಾಸೋಹ ಮೂಲಕ ಜನಪರ ಕಾರ್ಯವನ್ನು ಮಾಡಿ ಜನರಿಗೆ ದಾರಿದೀಪವಾಗಿದ್ದಾರೆ. ನಾವು ಜಾತಿ ಸಂಕೋಲೆಯಿಂದ ಹೊರಬಂದು ಸಮಾನತೆ ಸಮಾಜ ಕಟ್ಟಿದ್ದಾಗ ಮಾತ್ರ ಅವರ ಕನಸು ನಸಾಗುತ್ತದೆ. ಈ ನಿಟ್ಟಿನಲ್ಲಿ ಕಾರ್ಯವಾಗಬೇಕು ಎಂದರು.

ವೇದಿಕೆಯಲ್ಲಿ ಪುರಸಭೆ ಅಧ್ಯಕ್ಷೆ ರಾಜಶ್ರೀ ಎಸ್. ಖಜೂರಿ, ಮುಖ್ಯಾಧಿಕಾರಿ ವಿಜಯಮಹಾಂತೇಶ ಹೂಗಾರ, ಭೂವಿ ಸಮಾಜ ಅಧ್ಯಕ್ಷ ಬಡಪ್ಪಾ ದಂಡಗುಲೆ, ಉಪಾಧ್ಯಕ್ಷ ಯಲ್ಲಪ್ಪ ಮತ್ತಿತರು ಇದ್ದರು.

ತಹಸೀಲ್ದಾರ ಯಲ್ಲಪ್ಪ ಸುಬೇದಾರ ಸ್ವಾಗತಿಸಿದರು. ಶಿಕ್ಷಕ ಕಲ್ಯಾಣಪ್ಪ ಬಿಜ್ಜರಗಿ ನಿರೂಪಿಸಿದರು. ಕೈಗಾರಿಕೆ ಅಧಿಕಾರಿ ಜಾಫರ್ ಅನ್ಸಾರಿ ವಂದಿಸಿದರು. ಬಳಿಕ ಪಟ್ಟಣದ ಹಳೆಯ ತಹಸೀಲ್ದಾರ ಕಚೇರಿಯಿಂದ ಶಿವಯೋಗಿ ಸಿದ್ಧರಾಮೇಶ್ವರ ಭಾವಚಿತ್ರದ ಮೆರವಣಿಗೆಗೆ ತಹಸೀಲ್ದಾರರು ಚಾಲನೆ ನೀಡಿದರು. ಭೂವಿ ಸಮಾಜದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.