ಶಿವಯೋಗಿಗಳ ಉಚಿತ ಪ್ರಸಾದ ನಿಲಯಕ್ಕೆ ಪ್ರವೇಶಕ್ಕೆ ಆಹ್ವಾನ

ಮಾನ್ವಿ ಜೂ ೧೫ :- ತಾಲೂಕಿನ ತುಂಗಭದ್ರ ನದಿ ತೀರದಲ್ಲಿನ ಪುಣ್ಯಕ್ಷೇತ್ರಗಳಲ್ಲಿ ಇಂದಿನ ಸೀಮಾಂದ್ರ ಪ್ರದೇಶಕ್ಕೆ ಸೇರಿದ ಪುಟ್ಟ ಗ್ರಾಮವಾದ ನದಿಚಾಗಿಯಲ್ಲಿನ ಮಠದಲ್ಲಿ ಲಿಂ.ಶ್ರೀ ಚನ್ನಬಸವ ಶಿವಯೋಗಿಗಳು ಈ ಭಾಗದ ಕನ್ನಡಭಾಷಿಕ ಭಕ್ತರ ಆಶಯದಂತೆ ೧೯೭೨ರಲ್ಲಿ ಉಚಿತ ಪ್ರಸಾದ ನಿಲಯವನ್ನು ಪ್ರಾರಂಭಿಸಿದ್ದು ಇದಕ್ಕೆ ಈಗ ಅರ್ಜಿಯನ್ನು ಆಹ್ವಾನಿಸಿ ಗಡಿಭಾಗದಲ್ಲಿ ಕನ್ನಡ ಕಲಿಸಲು ಮಠವೊಂದು ಸಿದ್ದವಾಗಿರುವುದು ಸಂತಸದ ವಿಷಯವಾಗಿದೆ..
೫೧ ವರ್ಷಗಳನ್ನು ಪೂರೈಸಿ ಸುವರ್ಣ ಮಹೋತ್ಸವವನ್ನು ಆಚಾರಿಸಿಕೊಳ್ಳುತ್ತಿರುವ ಸವಿನೆನಪಿಗಾಗಿ ವಳಬಳ್ಳಾರಿಯ ಸುವರ್ಣಗಿರಿ ವಿರಕ್ತಮಠದ ಪ್ರಸ್ತುತ ಪೀಠಾಧಿಪತಿಗಳಾದ ಶ್ರೀ ಸಿದ್ದಲಿಂಗಮಹಾಸ್ವಾಮಿಗಳು ೩ ಕೋಟಿಗಿಂತ ಹೆಚ್ಚಿನ ವೆಚ್ಚದಲ್ಲಿ ಉಚಿತ ಪ್ರಸಾದ ನಿಲಯವನ್ನು ನವೀಕರಣ ಗೊಳಿಸಿ ವಿದ್ಯಾರ್ಥಿಗಳಿಗೆ ಅಧ್ಯಯನಕ್ಕೆ ಪೂರಕವಾದ ವಾತಾವರಣವನ್ನು ನಿರ್ಮಿಸಿಕೊಡುವ ಮೂಲಕ ಗಡಿ ಭಾಗದಲ್ಲಿ ಕನ್ನಡ ಭಾಷೆ ಬೆಳವಣಿಗೆಗೆ ಮಹತ್ತಾರವಾದ ಕೊಡುಗೆಯನ್ನು ನೀಡಿದ್ದಾರೆ.
ನದಿಚಾಗಿ ಗ್ರಾಮದಲ್ಲಿ ೨೦೨೩-೨೪ ನೇ ಸಾಲಿನಲ್ಲಿ ಜೂನ್ ೧೨ರಿಂದ ಈ ವರ್ಷದ ಶೈಕ್ಷಣಿಕ ಸಾಲಿನಲ್ಲಿ ಶಾಲೆಗಳು ಪ್ರಾರಂಭವಗುತ್ತಿದ್ದು ೬ರಿಂದ ೧೦ನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿರುವ ಕನ್ನಡ ಶಾಲೆಯಲ್ಲಿ ಪ್ರವೇಶವನ್ನು ಪಡೆದ ಬಡ ಮಕ್ಕಳ ಅನುಕೂಲಕ್ಕಾಗಿ ಲಿಂ.ಶ್ರೀ ಚನ್ನಬಸವ ಶಿವಯೋಗಿಗಳ ಉಚಿತ ಪ್ರಸಾದ ನಿಲಯದಲ್ಲಿ ಅವಕಾಶ ಕಲ್ಪಿಸಲಾಗಿದೆ.
ಈ ಭಾಗದ ಶಾಲೆಗಳ ಶಿಕ್ಷಕರು ಹಾಗೂ ಪೋಷಕರು,ತಮ್ಮ ಮಕ್ಕಳನ್ನು ಪ್ರಸಾದ ನಿಲಯದಲ್ಲಿ ಪ್ರವೇಶವನ್ನು ಪಡೆಯುವ ಮೂಲಕ ಸದುಪಯೊಗ ಪಡಿಸಿಕೊಳ್ಳಬಹುದಾಗಿದೆ
ಕ.ಕಲ್ಯಾಣ ಕರ್ನಾಟಕ ಭಾಗದಲ್ಲಿನ ಮಾನ್ವಿ ತಾಲೂಕಿನ ಗಡಿ ಭಾಗದಲ್ಲಿ ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದ ಕನ್ನಡ ಭಾಷಿಕರ ಮಕ್ಕಳ ಭವಿಷ್ಯವನ್ನು ಉಜ್ವಲ ಗೊಳಿಸುವ ಉದ್ದೇಶದಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ವಳಬಳ್ಳಾರಿಯ ಶ್ರೀಮಠವು ತ್ರಿವಿಧ ದಾಸೋಹವನ್ನು ಭಕ್ತರಿಗೆ ನೀಡುವ ಮೂಲಕ ಭಕ್ತರನ್ನು ಉದ್ದಾರಮಾಡುತ್ತ ಬಂದಿದೆ,
ಶ್ರೀ ಮಠದಲ್ಲಿ ಮಕ್ಕಳಿಗೆ ಮುಂದಿನ ಭವಿಷ್ಯದ ಸತ್ ಪ್ರಜೆಗಳನ್ನಾಗಿ ರೂಪಿಸಲು ಶಿಕ್ಷಣದ ಜೊತೆಗೆ ಶಿಸ್ತುಬದ್ದ ಜೀವನ, ನಮ್ಮ ಪರಂಪರೆ,ಸಂಸ್ಕೃತಿ,ಅಚಾರ ವಿಚಾರಗಳನ್ನು ಶ್ರೀಗಳ ಮಾರ್ಗದರ್ಶನದಲ್ಲಿ ನೀಡಲಾಗುತ್ತಿದೆ.
ವಳಬಳ್ಳಾರಿಯ ಸುವರ್ಣಗಿರಿ ವಿರಕ್ತಮಠದ ಲಿಂ.ಶ್ರೀ ಚನ್ನಬಸವ ಶಿವಯೋಗಿಗಳು ತಾಲೂಕಿನ ಗಡಿ ಭಾಗದಲ್ಲಿನ ಸೀಮಾಂದ್ರ ಪ್ರದೇಶಕ್ಕೆ ಸೇರಿದ ನದಿಚಾಗಿ ಗ್ರಾಮದಲ್ಲಿನ ಕನ್ನಡಿಗರಿಗಾಗಿ ಅಂದಿನ ಮದ್ರಾಸ್ ಸರಕಾರದಿಂದ ಕನ್ನಡ ಶಾಲೆಯನ್ನು ಮಂಜೂರು ಮಾಡಿಸುವ ಮೂಲಕ ಸೀಮಾಂದ್ರ ಪ್ರದೇಶದಲ್ಲಿ ಕನ್ನಡ ಶಾಲೆಯನ್ನು ಪ್ರಾರಂಭಿಸಲು ಕಾರಣರಾಗಿದ್ದು ಇಂದು ಈ ಶಾಲೆ ಶತಮಾನವನ್ನು ಕಂಡಿದೆ. ಅಂದು ಶ್ರೀಮಠವನ್ನೆ ವಿದ್ಯಾರ್ಥಿಗಳಿಗಾಗಿ ಉಚಿತ ಪ್ರಸಾದ ನಿಲಯವಾಗಿ ಪರಿವರ್ತಿಸುವ ಮೂಲಕ ಈ ಭಾಗದಲ್ಲಿ ಕನ್ನಡ ಭಾಷೆಯ ಬೆಳವಣಿಗೆಗೆ ಕಾರಣರಾಗಿದ್ದಾರೆ, ಶ್ರೀಮಠದಲ್ಲಿ ಅಶ್ರಯವನ್ನು ಪಡೆದು ಅಕ್ಷರ ಕಲಿತವರು ಇಂದು ಪ್ರಸಿದ್ದ ವ್ಯಕ್ತಿಗಳಾಗಿದ್ದಾರೆ.
ವಳಬಳ್ಳಾರಿಯ ಸುವರ್ಣಗಿರಿ ವಿರಕ್ತಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಮಾತನಾಡಿ ನೂರಾರು ವರ್ಷಗಳಿಂದ ಶ್ರೀಮಠವು ಭಕ್ತರಿಗೆ ತ್ರೀವಿಧ ದಾಸೋಹವನ್ನು ನೀಡುತ್ತ ಬಂದಿದ್ದು ಲಿಂ.ಶ್ರೀ ಚನ್ನಬಸವ ಶಿವಯೋಗಿಗಳು ಶ್ರೀ ಮಠದ ಶಾಖ ಮಠವಾದ ಗಡಿ ಭಾಗದಲ್ಲಿನ ನದಿಚಾಗಿ ಗ್ರಾಮದಲ್ಲಿನ ನದಿಚಾಗಿ ಶ್ರೀ ತೋಂಟದಾರ್ಯ ಮಠದ ಭಕ್ತರ ಆಶಯದಂತೆ ಹಾಗೂ ಈ ಭಾಗದ ಕನ್ನಡಿಗರಿಗಾಗಿ ಸರಕಾರದಿಂದ ಕನ್ನಡ ಪ್ರಾಥಮಿಕ ಹಾಗೂ ಹೈಸ್ಕೂಲ್ ಅನ್ನು ಗ್ರಾಮಕ್ಕೆ ಮಂಜೂರು ಮಾಡಿಸುವಲ್ಲಿ ಶ್ರಮಿಸಿದರು ೧೯೭೨ ರಲ್ಲಿ ಕನ್ನಡ ಶಾಲೆಗಳಲ್ಲಿ ಅಭ್ಯಾಸ ಮಾಡುವ ಅಂದಿನ ಬೇರೆ ಗ್ರಾಮಗಳ ಬಡ ಮಕ್ಕಳ ಅನುಕೂಲಕ್ಕಾಗಿ ಶ್ರೀ ಮಠವನ್ನೆ ಉಚಿತ ಪ್ರಸಾದ ನಿಲಯವಾಗಿ ಪರಿವರ್ತಿಸಿ ಮಕ್ಕಳ ಅಧ್ಯಯನಕ್ಕೆ ಬಿಟ್ಟುಕೊಡುವ ಮೂಲಕ ಈ ಭಾಗದಲ್ಲಿ ಶೈಕ್ಷಣಿಕ ಅಭಿವೃದ್ದಿಗೆ ಕಾರಣರಾಗಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಶ್ರೀಮಠದ ದೂ.ಸಂಖ್ಯೆ ೮೯೭೦೯೪೬೬೩೦,