ಶಿವಮೊಗ್ಗ : ೨೦ ಮಂದಿಯಲ್ಲಿ ಕೊರೊನಾ ಪಾಸಿಟಿವ್

ಶಿವಮೊಗ್ಗ, ಮಾ. ೨೭: ರಾಜ್ಯಾದಲ್ಲಿ ಕೊರೊನಾ ಸೋಂಕಿನ ಎರಡನೇ ಅಲೆಯ ಭೀತಿ ಎದುರಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಸೋಂಕು ನಿಯಂತ್ರಣದಲ್ಲಿದ್ದು, ಶುಕ್ರವಾರ ೨೦ ಜನರಲ್ಲಿ ಕೋವಿಡ್ ಪಾಸಿಟಿವ್ ಕಂಡುಬಂದಿದೆ.
ಜಿಲ್ಲಾಡಳಿತ ಬಿಡುಗಡೆ ಮಾಡಿರುವ ಅಂಕಿಅಂಶಗಳ ಪ್ರಕಾರ, ಶುಕ್ರವಾರ ಜಿಲ್ಲೆಯಾದ್ಯಂತ ೨೪೫೨ ಜನರನ್ನು ತಪಾಸಣೆಗೊಳಪಡಿಸಲಾಗಿದೆ. ಇದರಲ್ಲಿ ೧೬೮೪ ಜನರ ಸ್ಯಾಂಪಲ್‌ಗಳು ಕೊರೊನಾ ನೆಗೆಟಿವ್ ಬಂದಿದೆ. ಮೂವರು ವಿದ್ಯಾರ್ಥಿಗಳು ಸೇರಿ ೨೦ ಮಂದಿ ವರದಿ ಪಾಸಿಟಿವ್ ಬಂದಿದೆ.
ಶಿವಮೊಗ್ಗ ತಾಲೂಕಿನಲ್ಲಿ ೭, ಭದ್ರಾವತಿ ೨, ಶಿಕಾರಿಪುರ ೧, ತೀರ್ಥಹಳ್ಳಿ ೨, ಸೊರಬ ೨, ಸಾಗರ ೩ ಹಾಗೂ ಇತರೆ ಜಿಲ್ಲೆಯ ೩ ಮಂದಿಯಲ್ಲಿ ಕೊರೊನಾ ಪಾಸಿಟಿವ್ ಬಂದಿದೆ.
ಪ್ರಸ್ತುತ ಜಿಲ್ಲೆಯಲ್ಲಿ ಒಟ್ಟಾರೆ ೧೨೪ ಮಂದಿ ಕೊರೊನಾ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋವಿಡ್ ಆಸ್ಪತ್ರೆಯಲ್ಲಿ ೫೩, ಖಾಸಗಿ ಆಸ್ಪತ್ರೆಗಳಲ್ಲಿ ೨೮ ಹಾಗೂ ಮನೆಗಳಲ್ಲಿ ೪೩ ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ ವರ್ಷ ಕೊರೊನಾ ಸೋಂಕು ಕಾಣಿಸಿಕೊಂಡ ನಂತರ, ಇಲ್ಲಿಯವರೆಗೂ ಜಿಲ್ಲೆಯಲ್ಲಿ ಕೊರೊನಾದಿಂದ ೩೪೯ ಮಂದಿ ಅಸುನೀಗಿದ್ದಾರೆ.