ಶಿವಮೊಗ್ಗ ಸೋಂಕಿಗೆ ೧೨ ಮಂದಿ ಬಲಿ

ಶಿವಮೊಗ್ಗ, ಮೇ ೩: ಜಿಲ್ಲಾಡಳಿತ ಭಾನುವಾರ ಬಿಡುಗಡೆ ಮಾಡಿದ ದೈನಂದಿನ ಕೋವಿಡ್ ಮಾಹಿತಿ ಅನುಸಾರ, ಕಳೆದ ೨೪ ಗಂಟೆಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ೧೨ ಜನರು ಕೊರೊನಾ ಸೋಂಕಿನಿಂದ
ಅಸುನೀಗಿದ್ದಾರೆ.
ಕೋವಿಡ್-೧೯ ಸೋಂಕು ಕಾಣಿಸಿಕೊಂಡ ನಂತರ, ಕಳೆದೆರೆಡು ವರ್ಷಗಳ ಅವಧಿಯಲ್ಲಿ ಒಂದೇ ದಿನ ಇಷ್ಟೊಂದು ಜನರು ಸೋಂಕಿಗೆ ಮೃತಪಟ್ಟಿದ್ದು ಜಿಲ್ಲೆಯಲ್ಲಿ ಇದೇ ಮೊದಲ ಬಾರಿಯಾಗಿದೆ. ಭಾನುವಾರದ ಮಾಹಿತಿ ಅನುಸಾರ, ೭೬೫ ಜನರಲ್ಲಿ ಕೊರೊನಾ ಪಾಸಿಟಿವ್ ಕಂಡುಬಂದಿದೆ. ೪೨೨ ಜನರು ಸೋಂಕಿನಿಂದ ಗುಣುಮುಖರಾಗಿದ್ದಾರೆ. ಶಿವಮೊಗ್ಗ ತಾಲೂಕಿನಲ್ಲಿ ಅತ್ಯದಿಕ ೧೭೯ ಹೊಸ ಸೋಂಕಿನ ಪ್ರಕರಣಗಳು ದಾಖಲಾಗಿವೆ.
ಉಳಿದಂತೆ ಭದ್ರಾವತಿಯಲ್ಲಿ ೧೨೮, ಶಿಕಾರಿಪುರದಲ್ಲಿ ೭೪, ತೀರ್ಥಹಳ್ಳಿಯಲ್ಲಿ ೮೩, ಸೊರಬದಲ್ಲಿ ೧೨೯, ಸಾಗರದಲ್ಲಿ ೮೯, ಹೊಸನಗರದಲ್ಲಿ ೬೫ ಹಾಗೂ ಹೊರ ಜಿಲ್ಲೆಗಳ ೧೮ ಜನರಲ್ಲಿ ಕೊರೊನಾ ಪಾಸಿಟಿವ್ ಕಂಡುಬಂದಿದೆ. ಉಳಿದಂತೆ ಭಾನುವಾರ ೩೨ ಕಾಲೇಜು ವಿದ್ಯಾರ್ಥಿಗಳು ಮತ್ತು ೧೧ ನೌಕರರಲ್ಲಿ ಸೋಂಕು ಪತ್ತೆಯಾಗಿದೆ.
ದಾಖಲು: ನಿಗಿದತ ಕೋವಿಡ್ ಆಸ್ಪತ್ರೆಯಲ್ಲಿ ೪೦೯ ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋವಿಡ್ ಕೇರ್ ಸೆಂಟರ್’ನಲ್ಲಿ ೫೪ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ೩೦೦ ಮತ್ತು ೨೩೨೫ ಜನರು ಹೋಂ ಐಸೋಲೇಷನ್ ವ್ಯವಸ್ಥೆಯಲ್ಲಿದ್ದಾರೆ.