ಶಿವಮೊಗ್ಗ ಭದ್ರಾವತಿ ಸಾಗರದಲ್ಲಿ ಪೊಲೀಸರ ಕಾರ್ಯಾಚರಣೆ : ನೂರಕ್ಕೂ ಅಧಿಕ ಕೇಸ್ ದಾಖಲು!

ಸಂಜೆವಾಣಿ ವಾರ್ತೆ

ಶಿವಮೊಗ್ಗ, ಸೆ.6; ಶಿವಮೊಗ್ಗ, ಭದ್ರಾವತಿ ಹಾಗೂ ಸಾಗರ ನಗರದ ವಿವಿಧೆಡೆಯ ನಿರ್ಜನಪ್ರದೇಶಗಳಲ್ಲಿ ಪೊಲೀಸರು ಸೆ. 2 ರಂದು ರಾತ್ರಿ ಏರಿಯಾ ಡಾಮಿನೇಷನ್ ಕಾರ್ಯಾಚರಣೆ
ನಡೆಸಿ ನೂರಕ್ಕೂ ಅಧಿಕ ಪ್ರಕರಣ ದಾಖಲಿಸಿಕೊಂಡ ಘಟನೆ ನಡೆದಿದೆ.ಶಿವಮೊಗ್ಗ ಪೊಲೀಸ್ ಉಪ ವಿಭಾಗ – ಎ ವ್ಯಾಪ್ತಿಯ ಗೋಪಾಳ, ಚಾಲಕ್ಯು ನಗರ, ಎಂ.ಆರ್.ಎಸ್ವೃತ್ತ, ಹೊಳೆಹೊನ್ನೂರು ವೃತ್ತ, ಉಪ ವಿಭಾಗ – ಬಿ ವ್ಯಾಪ್ತಿಯ ಎಪಿಎಂಸಿ, ಆಟೋಕಾಂಪ್ಲೆಕ್ಸ್, ಕೆಇಬಿ ವೃತ್ತ, ದುರ್ಗಿಗುಡಿ, ರಾಗಿಗುಡ್ಡ, ಹೊನ್ನಾಳ್ಳಿ ರಸ್ತೆ,ಸಾಗರ ಉಪ ವಿಭಾಗ ವ್ಯಾಪ್ತಿಯ ನೆಹರು ಕ್ರೀಡಾಂಗಣ, ಆನಂದಪುರ ರೈಲ್ವೆ ನಿಲ್ದಾಣ ಹಾಗೂ
ಭದ್ರಾವತಿ ಉಪ ವಿಭಾಗ ವ್ಯಾಪ್ತಿಯ ಸಾದತ್ ಕಾಲೋನಿ, ಹನುಮಂತ ನಗರ, ಹಿರಿಯೂರಿನಹೊರವಲಯದ ಪ್ರದೇಶಗಳಲ್ಲಿ ಪೊಲೀಸರು ಈ ವಿಶೇಷ ಗಸ್ತು ಕಾರ್ಯಾಚರಣೆ ನಡೆಸಿದ್ದಾರೆ.
ಸಾರ್ವಜನಿಕ ಸ್ಥಳಗಳಲ್ಲಿ ಅಸಭ್ಯವಾಗಿ ವರ್ತನೆ ಆರೋಪದಡಿ 92 ಕೇಸ್, ಕೋಟ್ಪಾಕಾಯ್ದೆಯಡಿ 2 ಹಾಗೂ ಸಂಚಾರಿ ನಿಯಮಗಳ ಉಲ್ಲಂಘನೆಯಡಿ 25 ಪ್ರಕರಣಗಳನ್ನು ಪೊಲೀಸರುದಾಖಲಿಸಿಕೊಂಡಿದ್ದಾರೆ. ವಶಕ್ಕೆ ಪಡೆದವರ ಪೂರ್ವಾಪರ ಮಾಹಿತಿ ಕಲೆ ಹಾಕಿದ್ದಾರೆ.ಕಳೆದ ಹಲವು ದಿನಗಳಿಂದ ಜಿಲ್ಲೆಯಾದ್ಯಂತ ಪೊಲೀಸರು ಏರಿಯಾ ಡಾಮಿನೇಷನ್ ಕಾರ್ಯಾಚರಣೆನಡೆಸುತ್ತಿದ್ದಾರೆ. ನಿರ್ಜನ ಪ್ರದೇಶಗಳಲ್ಲಿ ಅಸಭ್ಯ ವರ್ತನೆ, ಅನುಮಾನಾಸ್ಪದವಾಗಿತಿರುಗಾಡುವವರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸುತ್ತಿದ್ದಾರೆ.