ಶಿವಮೊಗ್ಗ-ಭದ್ರಾವತಿ ಪೊಲೀಸ್ ಕಮೀಷನರೇಟ್ : ರಾಜ್ಯ ಸರ್ಕಾರದ ನಿರ್ಲಕ್ಷ್ಯ!


ಶಿವಮೊಗ್ಗ, ಎ. 8: ಶಿವಮೊಗ್ಗ-ಭದ್ರಾವತಿ ಒಳಗೊಂಡಂತೆ, ಪೊಲೀಸ್ ಕಮೀಷನರೇಟ್ ಕಚೇರಿ
ಸ್ಥಾಪಿಸಬೇಕೆಂಬ ಹಲವು ವರ್ಷಗಳ ಕೂಗಿಗೆ ಇಲ್ಲಿಯವರೆಗೂ ರಾಜ್ಯ ಸಕರ್ಾರದಿಂದ ಸ್ಪಂದನೆ
ದೊರಕಿಲ್ಲ. ಜಿಲ್ಲೆಯವರೇ ಆದ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದರೂ, ಈ
ಪ್ರಮುಖ ಆಡಳಿತಾತ್ಮಕ ವಿಷಯದತ್ತ ಚಿತ್ತ ಹರಿಸಿಲ್ಲ ಏಕೆಂಬ ಪ್ರಶ್ನೆ
ನಾಗರೀಕರದ್ದಾಗಿದೆ.

ರಾಜ್ಯ ಮಾತ್ರವಲ್ಲ ದೇಶದಲ್ಲಿಯೇ ವೇಗವಾಗಿ ಬೆಳೆಯುತ್ತಿರುವ ಎರಡನೇ ಹಂತದ ನಗರಗಳಲ್ಲಿ
ಶಿವಮೊಗ್ಗವೂ ಒಂದಾಗಿದೆ. ಕೋಮು ಸೂಕ್ಷ್ಮ ಪ್ರದೇಶವಾಗಿದೆ. ಪೊಲೀಸ್ ಇಲಾಖೆ ಮೂಲಗಳ
ಅನುಸಾರ, ಬೆಂಗಳೂರು ನಂತರ ಅತೀ ಹೆಚ್ಚು ಎಫ್ಐಆರ್ ದಾಖಲಾಗುವ ಹಾಗೂ
ರೌಡಿ-ಕ್ರಿಮಿನಲ್ಸ್ಗಳಿರುವ ನಗರವಾಗಿದೆ.

ನಗರದ ಜನಸಂಖ್ಯೆ, ವ್ಯಾಪ್ತಿ ವಿಸ್ತೀರ್ಣ ಹೆಚ್ಚಾಗಿದೆ. ವಾಹನಗಳ ದಟ್ಟಣೆ ಏರುತ್ತಿದೆ.
ವಿಮಾನ ನಿಲ್ದಾಣ, ರೈಲ್ವೆ ಕೋಚಿಂಗ್ ಸೇರಿದಂತೆ ಹಲವು ಹೊಸ ಯೋಜನೆಗಳು
ಅನುಷ್ಠಾನಗೊಳ್ಳುತ್ತಿವೆ. ಆದರೆ ಜನಸಂಖ್ಯೆ, ಅಪರಾಧ ಚಟುವಟಿಕೆಗಳಿಗೆ ಅನುಗುಣವಾಗಿ
ಶಿವಮೊಗ್ಗ ನಗರದಲ್ಲಿ ಪೊಲೀಸ್ ಬಲವಿಲ್ಲವಾಗಿದೆ. ಇದರಿಂದ ಕಾನೂನು-ಸುವ್ಯವಸ್ಥೆ ಮೇಲೆ
ಪರಿಣಾಮ ಬೀರುವಂತಾಗಿದೆ.ಕಮೀಷನರೇಟ್ ಕಚೇರಿ ಸ್ಥಾಪನೆಗೆ 10 ಲಕ್ಷ ಜನಸಂಖ್ಯೆ, ಅಪರಾಧ ಚಟುವಟಿಕೆ ಮತ್ತೀತರ
ಮಾನದಂಡವಿದೆ. ಇದರಲ್ಲಿ ಜನಸಂಖ್ಯೆ ಹೊರತುಪಡಿಸಿ, ಇತರೆಲ್ಲ ಮಾನದಂಡ ಶಿವಮೊಗ್ಗ
ನಗರದಲ್ಲಿದೆ. ಈ ಕಾರಣದಿಂದ ಶಿವಮೊಗ್ಗ ಹಾಗೂ ಭದ್ರಾವತಿ ನಗರಗಳ ಜೊತೆಗೆ, ಎರಡು
ತಾಲೂಕುಗಳ ಕೆಲ ಹೋಬಳಿ ಕೇಂದ್ರಗಳನ್ನು ಒಗ್ಗೂಡಿಸಿದರೆ 10 ಲಕ್ಷಕ್ಕೂ ಹೆಚ್ಚು
ಜನಸಾಂದ್ರತೆ ಬರಲಿದೆ.
ಈ ಕಾರಣದಿಂದ ಶಿವಮೊಗ್ಗ-ಭದ್ರಾವತಿ ಒಳಗೊಂಡಂತೆ ಪೊಲೀಸ್ ಕಮೀಷನರೇಟ್ ಕಚೇರಿ
ಸ್ಥಾಪಿಸಬಹುದಾಗಿದೆ. ಇದಕ್ಕೆ ಕಾನೂನಾತ್ಮಕವಾಗಿ ಯಾವುದೇ ಅಡಚಣೆಗಳು
ಎದುರಾಗುವುದಿಲ್ಲವಾಗಿದೆ ಎಂಬುವುದು ನಾಗರೀಕರು ಮಾತ್ರವಲ್ಲದೆ, ಕೆಲ ಪೊಲೀಸ್
ಅಧಿಕಾರಿಗಳು ಅಭಿಪ್ರಾಯ ಪಡುತ್ತಾರೆ.
ಮಹತ್ವದ ಘಟಕಗಳು: ಶಿವಮೊಗ್ಗದಲ್ಲಿ ಸದ್ಯ ಕೈಗಾರಿಕಾ ಭದ್ರತಾ ಪಡೆ ಹಾಗೂ
ಕೆ.ಎಸ್.ಆರ್.ಪಿ. ಪಡೆಯ ಘಟಕವಿದೆ. ಭದ್ರಾವತಿ ವ್ಯಾಪ್ತಿಯಲ್ಲಿ ಸಿ.ಆರ್.ಪಿ.ಎಫ್. ಘಟಕ
ಸ್ಥಾಪಿಸಲಾಗುತ್ತಿದೆ. ಈ ಎರಡು ನಗರಗಳನ್ನು ಒಳಗೊಂಡಂತೆ ಪೊಲೀಸ್ ಕಮೀಷನರೇಟ್ ಕಚೇರಿ
ಸ್ಥಾಪಿಸಿದರೆ ರಕ್ಷಣಾ ವ್ಯವಸ್ಥೆಯಲ್ಲಿ ಹೊಸ ಬದಲಾವಣೆಗೆ ಸಾಕ್ಷಿಯಾಗಲಿದೆ.ಈಗಾಗಲೇ ಶಿವಮೊಗ್ಗ ನಗರಕ್ಕೆ ಸಂಬಂಧಿಸಿದಂತೆ, ಮುಖ್ಯಮಂತ್ರಿಗಳು ಹಲವು ಯೋಜನೆ
ಜಾರಿಗೊಳಿಸಿದ್ದಾರೆ. ನೂರಾರು ಕೋಟಿ ರೂ. ಅನುದಾನ ಮಂಜೂರುಗೊಳಿಸಿದ್ದಾರೆ.
ಆಡಳಿತಾತ್ಮಕ ವಿಷಯವಾದ ಪೊಲೀಸ್ ಕಮೀಷನರೇಟ್ ಕಚೇರಿ ಸ್ಥಾಪನೆಗೂ ಆದ್ಯ
ಗಮನಹರಿಸಬೇಕಾಗಿದೆ ಎಂಬುವುದು ನಾಗರೀಕರ ಅಭಿಪ್ರಾಯವಾಗಿದೆ.ದುಃಸ್ಥಿತಿ: ಪ್ರಸ್ತುತ ಶಿವಮೊಗ್ಗ ನಗರದಲ್ಲಿ ರಾಜ್ಯಕ್ಕೆ ಮಾದರಿಯಾದ, ಅತ್ಯಾಧುನಿಕ
ಜಿಲ್ಲಾಡಳಿತ ಭವನ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡಿದೆ. ಅದರಂತೆ
ಹಳೇಯದಾಗಿರುವ ಹಾಗೂ ದುಃಸ್ಥಿತಿಯಲ್ಲಿರುವ ಜಿಲ್ಲಾ ರಕ್ಷಣಾಧಿಕಾರಿ ಕಚೇರಿ ಕಟ್ಟಡ
ನೆಲಸಮಗೊಳಿಸಿ, ಅತ್ಯಾಧುನಿಕ ಸೌಲಭ್ಯ ಹಾಗೂ ಕಮೀಷನರೇಟ್ ವ್ಯವಸ್ಥೆಗೆ ಅನುಗುಣವಾಗಿ
ಹೊಸ ಕಟ್ಟಡ ನಿಮರ್ಿಸಬೇಕಾಗಿದೆ. ಈ ನಿಟ್ಟಿನಲ್ಲಿ ಗೃಹ ಇಲಾಖೆ ಆದ್ಯ ಗಮನಹರಿಸಬೇಕಾಗಿದೆ.

ಹೆಚ್ಚಾಗಲಿದೆ ಪೊಲೀಸ್ ಬಲ
*** ಕಮೀಷನರೇಟ್ ವ್ಯವಸ್ಥೆ ಜಾರಿಗೊಂಡರೆ, ಪೊಲೀಸ್ ಬಲ ಹೆಚ್ಚಾಗಲಿದೆ. ಐ.ಜಿ.ಪಿ.,
ಡಿ.ಜಿ.ಪಿ. ದಜರ್ೆಯ ಅಧಿಕಾರಿ ಕಮೀಷನರ್ ಆಗಲಿದ್ದಾರೆ. ನಂತರ ಐಪಿಎಸ್ ದರ್ಜೆಯ
ಮೂರರಿಂದ ನಾಲ್ಕು ಉಪ ಆಯುಕ್ತರು ನಿಯೋಜನೆಯಾಗಲಿದ್ದಾರೆ. ಡಿ.ಎ.ಆರ್. ರೀತಿಯಲ್ಲಿ
ಕಮೀಷನರೇಟ್ ವ್ಯಾಪ್ತಿಗೆ ಪ್ರತ್ಯೇಕ ಸಶಸ್ತ್ರ ಮೀಸಲು ಪಡೆ ಅಸ್ತಿತ್ವಕ್ಕೆ ಬರಲಿದೆ.
ಹೊಸ ಪೊಲೀಸ್ ಠಾಣೆ, ಅಧಿಕಾರಿ, ಸಿಬ್ಬಂದಿಗಳು ನೇಮಕವಾಗಲಿದ್ದರೆ. ವಾಹನಗಳು ಸೇರಿದಂತೆ
ಇತರೆ ಸೌಲಭ್ಯಗಳು ಹೆಚ್ಚಾಗಲಿವೆ. ಜೊತೆಗೆ ಪೊಲೀಸರಿಗೆ ವಿವಿಧ ಭತ್ಯೆಗಳು
ಏರಿಕೆಯಾಗಲಿದೆ. ಒಟ್ಟಾರೆ ಶಾಂತಿ-ಸುವ್ಯವಸ್ಥೆ ಕಾಪಾಡಲು ಕಮೀಷನರೇಟ್ ವ್ಯವಸ್ಥೆಯಿಂದ
ಸಾಕಷ್ಟು ಅನುಕೂಲವಾಗಲಿದೆ.