ಶಿವಮೊಗ್ಗ ಪೊಲೀಸರಿಗೆ ಕರಾಟೆ ತರಬೇತಿ..!


ಶಿವಮೊಗ್ಗ, ನ. 21: ಶಿವಮೊಗ್ಗ ನಗರ ಪೊಲೀಸರಿಗೆ ಆತ್ಮ ರಕ್ಷಣೆ ಹಾಗೂ ಸಾಹಸ ಕಲೆಯಾದ, ಕರಾಟೆ ತರಬೇತಿ ನೀಡಲಾಗುತ್ತಿದೆ.ನೇರ-ನಿರ್ಭೀಡ ಕಾರ್ಯವೈಖರಿ ಮೂಲಕ ಗಮನ ಸೆಳೆದಿರುವ ಯುವ ಪೊಲೀಸ್ ಅಧಿಕಾರಿ, ಡಿವೈಎಸ್ಪಿ ಪ್ರಶಾಂತ್ ಮುನ್ನೋಳಿ ಆಸಕ್ತಿ ಫಲವಾಗಿ ಪೊಲೀಸರಿಗೆ ಕರಾಟೆ ತರಬೇತಿ ಕಾರ್ಯಕ್ಕೆ ಭಾನುವಾರ ಡಿ.ಎ.ಆರ್. ಮೈದಾನ ಆವರಣದಲ್ಲಿ ಚಾಲನೆ ದೊರಕಿದೆ. ಕರ್ನಾಟಕ ರಾಜ್ಯ ಕರಾಟೆ ಸಂಸ್ಥೆ ಅಧ್ಯಕ್ಷರಾದ ಶಿಹಾನ್, ಶಿವಮೊಗ್ಗ ವಿನೋದ್ ಮೊದಲಾದವರು ಪೊಲೀಸರಿಗೆ ಕರಾಟೆ ತರಬೇತಿ ನೀಡುತ್ತಿದ್ದಾರೆ. ಇದಕ್ಕೆ ಶಿವಮೊಗ್ಗ ನಗರ ಪೊಲೀಸರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಲವು ಪೊಲೀಸ್ ಸಿಬ್ಬಂದಿಗಳು ತರಬೇತಿಯಲ್ಲಿ ಭಾಗಿಯಾಗಿದ್ದಾರೆ.