ಶಿವಮೊಗ್ಗ ನಗರದಲ್ಲಿ ಪೊಲೀಸ್ ಪಥ ಸಂಚಲನ

ಸಂಜೆವಾಣಿ ವಾರ್ತೆ
ಶಿವಮೊಗ್ಗ, ಸೆ. ೨೧;: ಗಣೇಶೋತ್ಸವ ಮೆರವಣಿಗೆ ಹಾಗೂ ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ, ಶಿವಮೊಗ್ಗ ನಗರದಲ್ಲಿ ಪೊಲೀಸರು ಪಥಸಂಚಲನ ನಡೆಸಿದರು.ಮುರಾದ್ ನಗರದಿಂದ ಆರಂಭವಾದ ಪಥ ಸಂಚಲನವು ಬಿ ಬಿ ರಸ್ತೆ, ಎಂಕೆಕೆ ರಸ್ತೆ, ಅಮೀರ್ಅಹಮ್ಮದ್ ವೃತ್ತ, ಶಿವಪ್ಪನಾಯಕ ವೃತ್ತ, ಗಾಂಧಿ ಬಜಾರ್ ರಸ್ತೆ, ರಾಮಣ್ಣ ಶ್ರೇಷ್ಠಿಪಾರ್ಕ್, ಎಸ್.ಪಿ.ಎಂ ರಸ್ತೆ ಮೂಲಕ ಕೋಟೆ ಆಂಜನೇಯ ಸ್ವಾಮಿ ದೇವಾಲಯದ ಬಳಿಅಂತ್ಯಗೊಂಡಿತು.ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿಅನಿಲ್ ಕುಮಾರ್ ಭೂಮರೆಡ್ಡಿ, ಡಿವೈಎಸ್ಪಿ ಬಾಲರಾಜ್, ಸುರೇಶ್, ಡಿಎಆರ್ ಡಿವೈಎಸ್ಪಿ ಪಿಕೃಷ್ಣಮೂರ್ತಿ ಸೇರಿದಂತೆ ಶಿವಮೊಗ್ಗ ನಗರದ ಎಲ್ಲ ಪೊಲೀಸ್ ಠಾಣೆಗಳ ಇನ್ಸ್ ಪೆಕ್ಟರ್ಗಳು, ಸಬ್ ಇನ್ಸ್ ಪೆಕ್ಟರ್  ಗಳು, ಡಿಎಆರ್, ಕೆ.ಎಸ್.ಆರ್.ಪಿ.ಸಿ., ಸಿವಿಎಲ್ ಪೊಲೀಸ್ ಸಿಬ್ಬಂದಿಗಳು ಭಾಗವಹಿಸಿದ್ದರು.