ಶಿವಮೊಗ್ಗ : ತಗ್ಗಿದ ಕೊರೊನಾ ಸೋಂಕಿತರ ಸಾವಿನ ಪ್ರಮಾಣ!

ಶಿವಮೊಗ್ಗ, ಮೇ 28: ಶಿವಮೊಗ್ಗ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಾವಿನ ಪ್ರಮಾಣ
ಕಡಿಮೆಯಾಗಿದೆ. ಇದು ನಾಗರೀಕರಲ್ಲಿ ಕೊಂಚ ನಿಟ್ಟುಸಿರು ಬಿಡುವಂತೆ ಮಾಡಿದೆ.
ಮತ್ತೊಂದೆಡೆ, ಸೋಂಕಿತರ ಸಂಖ್ಯೆಯಲ್ಲಿ ಮತ್ತೆ ಹೆಚ್ಚಳವಾಗಿರುವುದು ನಾಗರೀಕರ ಆತಂಕ
ಮುಂದುವರಿಯುವಂತೆ ಮಾಡಿದೆ.

ಕಳೆದ ಹಲವು ದಿನಗಳಿಂದ, ಪ್ರತಿನಿತ್ಯ 12 ಕ್ಕೂ ಅಧಿಕ ಸೋಂಕಿತರು ಕೊರೊನಾದಿಂದ
ಜಿಲ್ಲೆಯಲ್ಲಿ ಅಸುನೀಗುತ್ತಿದ್ದರು. ಕೆಲವೊಮ್ಮೆ ಸೋಂಕು ಕಡಿಮೆಯಾದರು, ಸಾವಿನ ಪ್ರಮಾಣ
ಕಡಿಮೆಯಾಗಿರಲಿಲ್ಲ. ಆದರೆ ಗುರುವಾರ ಸೋಂಕಿನಿಂದ ಮೃತರಾದವರ ಸಂಖ್ಯೆ 7 ಕ್ಕೆ
ಕುಸಿದಿದೆ. ಒಟ್ಟಾರೆ ಇಲ್ಲಿಯವರೆಗೂ ಜಿಲ್ಲೆಯಲ್ಲಿ ಕೊರೊನಾಗೆ ಬಲಿಯಾದವರ ಸಂಖ್ಯೆ 755
ಆಗಿದೆ.

ಜಿಲ್ಲಾಡಳಿತ ಬಿಡುಗಡೆ ಮಾಡಿದ ದೈನಂದಿನ ಕೊರೊನಾ ಮಾಹಿತಿ ಅನುಸಾರ, ಗುರುವಾರ
ಜಿಲ್ಲೆಯಲ್ಲಿ 2479 ಸ್ಯಾಂಪಲ್ಸ್ ಗಳನ್ನು ಸಂಗ್ರಹಿಸಲಾಗಿತ್ತು. ಇದರಲ್ಲಿ 1744
ಸ್ಯಾಂಪಲ್ಸ್ ಗಳಲ್ಲಿ ಕೊರೊನಾ ನೆಗೆಟಿವ್ ಬಂದಿದೆ. 927 ಪಾಸಿಟಿವ್ ಕಂಡುಬಂದಿದೆ. 847
ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ.

ಉಳಿದಂತೆ ತಾಲೂಕುವಾರು ವಿವರದಲ್ಲಿ ಶಿವಮೊಗ್ಗದಲ್ಲಿಯೇ ಅತ್ಯದಿಕ 255 ಹೊಸ ಪ್ರಕರಣಗಳು
ದಾಖಲಾಗಿವೆ. ಭದ್ರಾವತಿಯಲ್ಲಿ 115, ತೀರ್ಥಹಳ್ಳಿಯಲ್ಲಿ 79, ಶಿಕಾರಿಪುರದಲ್ಲಿ 114,
ಸಾಗರದಲ್ಲಿ 154, ಹೊಸನಗರದಲ್ಲಿ 104, ಸೊರಬದಲ್ಲಿ 69 ಹಾಗೂ ಹೊರ ಜಿಲ್ಲೆಗಳಿಂದ
ಆಗಮಿಸಿದ 37 ಜನರಲ್ಲಿ ಕೊರೊನಾ ಪಾಸಿಟಿವ್ ಕಂಡುಬಂದಿದೆ.

ಚಿಕಿತ್ಸೆ: ನಿಗದಿತ ಕೋವಿಡ್ ಆಸ್ಪತ್ರೆಗಳಲ್ಲಿ 630 ಜನರು ಚಿಕಿತ್ಸೆ
ಪಡೆಯುತ್ತಿದ್ದಾರೆ. ಡಿಸಿಹೆಚ್’ಸಿಗಳಲ್ಲಿ 314 ಜನ, ಕೋವಿಡ್ ಕೇರ್ ಸೆಂಟರ್ ಗಳಲ್ಲಿ
1260, ಖಾಸಗಿ ಆಸ್ಪತ್ರೆಗಳಲ್ಲಿ 1336 ಹಾಗೂ ಹೋಂ ಐಸೋಲೇಷನ್ ವ್ಯವಸ್ಥೆಯಡಿ 2929
ಜನರಿದ್ದಾರೆ. ಒಟ್ಟಾರೆ ಜಿಲ್ಲೆಯಲ್ಲಿ 7333 ಸಕ್ರಿಯ ಕೋವಿಡ್ ಪ್ರಕರಣಗಳಿವೆ.