ಶಿವಮೊಗ್ಗ ಜಿಲ್ಲೆಯ ಹಲವೆಡೆ ಗುಡುಗು ಸಹಿತ ವರ್ಷಧಾರೆ

ಶಿವಮೊಗ್ಗ, ಮೇ 2: ಶಿವಮೊಗ್ಗ ಜಿಲ್ಲೆಯ ಹಲವೆಡೆ ಕೆಲ ದಿನಗಳಿಂದ ಬೀಳುತ್ತಿರುವಮುಂಗಾರು ಪೂರ್ವ ವರ್ಷಧಾರೆ ಮುಂದುವರಿದಿದೆ. ಶನಿವಾರ ಸಂಜೆ ಕೆಲ ತಾಲೂಕುಗಳಲ್ಲಿಚದುರಿದಂತೆ ಗುಡುಗು, ಬಿರುಗಾಳಿ ಸಹಿತ ಮಳೆಯಾಗಿದೆ.
ಶಿವಮೊಗ್ಗ ನಗರ ಸೇರಿದಂತೆ ತಾಲೂಕಿನ ಕೆಲವೆಡೆ ಸಂಜೆ ಹಾಗೂ ರಾತ್ರಿ ಉತ್ತಮಮಳೆಯಾಯಿತು. ಕೆಲ ಗ್ರಾಮಗಳಲ್ಲಿ ಗಾಳಿಯ ಪ್ರಮಾಣ ಹೆಚ್ಚಿತ್ತು. ಇನ್ನೂ ಒಂದೆರೆಡು ದಿನಗಳ ಕಾಲ ಅಕಾಲಿಕ ಮಳೆ ಮುಂದುವರಿಯುವ ಸಾಧ್ಯತೆಯಿದೆ ಎಂದು ಹವಮಾನ ಇಲಾಖೆ ಮೂಲಗಳು ಮಾಹಿತಿ ನೀಡಿವೆ.
ನಿಟ್ಟುಸಿರು: ಇತ್ತೀಚೆಗೆ ಬೀಳುತ್ತಿರುವ ಅಕಾಲಿಕ ಮಳೆಯು, ಜಿಲ್ಲೆಯ ನಾಗರೀಕರಲ್ಲಿನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ. ಪ್ರಸ್ತುತ ಬಿಸಿಲಿನ ಬೇಗೆ ಹೆಚ್ಚಿದೆ.ಶಿವಮೊಗ್ಗ ನಗರ ಸೇರಿದಂತೆ ಕೆಲ ತಾಲೂಕುಗಳಲ್ಲಿ, ಕನಿಷ್ಠ ತಾಪಮಾನ 35 ಡಿಗ್ರಿಗೂಹೆಚ್ಚು ದಾಖಲಾಗುತ್ತಿದೆ.
ಉಷ್ಣಾಂಶದಿಂದ ನಾಗರೀಕರು ಎದುಸಿರು ಬಿಡುವಂತಾಗಿದೆ. ಭೂಮಿಯು ಕಾದಕಾವಲಿಯಂತಾಗುತ್ತಿದೆ. ಆದರೆ ಅಕಾಲಿಕ ಮಳೆಯಿಂದ ತಣ್ಣನೆ ವಾತಾವರಣ ನೆಲೆಸುವುದರಜೊತೆಗೆ, ಧಗೆಯ ಪ್ರಮಾಣ ಕಡಿಮೆಯಾಗಿಸಿದೆ. ಹಾಗೆಯೇ ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಹಾಹಾಕಾರ ತಗ್ಗುವಂತೆ ಮಾಡಿದೆ.
ಏಪ್ರಿಲ್ ತಿಂಗಳಲ್ಲಿ ಆಗಾಗ್ಗೆ ಬೀಳುತ್ತಿರುವ ವರ್ಷಧಾರೆಯಿಂದ, ಒಣಗಿ ಹೋಗಿದ್ದ ಹಸಿರು ಮತ್ತೆ ಚಿಗುರಲಾರಂಭಿಸಿದೆ. ಇದರಿಂದ ಜಾನುವಾರುಗಳಿಗೆ ಕೊಂಚ ಮೇವಿನ ಕೊರತೆನೀಗುವಂತಾಗಿದೆ. ಹಾಗೆಯೇ ಬೇಸಿಗೆ ವೇಳೆ ಕೈಗೊಂಡಿರುವ ಕೃಷಿ ಚಟುವಟಿಕೆಗೆ ಮಳೆಪೂರಕವಾಗಿದೆ ಎಂದು ರೈತರು ಅಭಿಪ್ರಾಯಪಡುತ್ತಾರೆ.