ಶಿವಮೊಗ್ಗ ಜಿಲ್ಲೆಯಾದ್ಯಂತ ರೌಡಿಗಳ ಮನೆ ಮೇಲೆ ಪೊಲೀಸರ ದಾಳಿ – ಖಡಕ್ ವಾರ್ನಿಂಗ್..!

ಸಂಜೆವಾಣಿ ವಾರ್ತೆ
ಶಿವಮೊಗ್ಗ, ಸೆ. 12; ಬೆಳ್ಳಂಬೆಳಿಗ್ಗೆ ಜಿಲ್ಲೆಯಾದ್ಯಂತ ಏಕಕಾಲದಲ್ಲಿ ನೂರಾರು ರೌಡಿಗಳ ಮನೆಗಳ ಮೇಲೆ ಪೊಲೀಸರು ದಿಢೀರ್ ದಾಳಿ ನಡೆಸಿ, ತಪಾಸಣೆ ನಡೆಸಿದ ಘಟನೆನಡೆದಿದೆ.ಮುಂಬರುವ ಗಣೇಶ ಚತುರ್ಥಿ ಹಾಗೂ ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ, ಶಾಂತಿ –ಸುವ್ಯವಸ್ಥೆ ಕಾಯ್ದುಕೊಳ್ಳುವ ಉದ್ದೇಶದಿಂದ ಜಿಲ್ಲಾ ಪೊಲೀಸ್ ಇಲಾಖೆ ಈ ಕಾರ್ಯಾಚರಣೆನಡೆಸಿದೆ. ಈ ಮೂಲಕ ಭೂಗತ ಲೋಕಕ್ಕೆ ಖಡಕ್ ಎಚ್ಚರಿಕೆಯ ಸಂದೇಶ ರವಾನಿಸಿದೆ.ಶಿವಮೊಗ್ಗ ನಗರದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಜಿಲ್ಲಾ ರಕ್ಷಣಾಧಿಕಾರಿಜಿ.ಕೆ.ಮಿಥುನ್ ಕುಮಾರ್, ಡಿವೈಎಸ್ಪಿ ಬಾಲರಾಜ್, ಸುರೇಶ್ ರವರು ಭಾಗಿಯಾಗಿದ್ದರು. ಉಳಿದಂತೆ ಭದ್ರಾವತಿಯಲ್ಲಿ ಡಿವೈಎಸ್ಪಿ ನಾಗರಾಜ್, ಸಾಗರದಲ್ಲಿ ಡಿವೈಎಸ್ಪಿ ಗೋಪಾಲಕೃಷ್ಣ ತಿಮ್ಮಣ್ಣನಾಯ್ಕ್,ಶಿಕಾರಿಪುರ ಡಿವೈಎಸ್ಪಿ ಶಿವಾನಂದ ಮದರಕಂಡಿ, ತೀರ್ಥಹಳ್ಳಿ ಡಿವೈಎಸ್ಪಿ ಗಜಾನನ ವಾಮನಸುತಾರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು. ಈ ವೇಳೆ ಇನ್ಸ್’ಪೆಕ್ಟರ್, ಸಬ್ಇನ್ಸ್’ಪೆಕ್ಟರ್ ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳ ನೂರಾರು ಪೊಲೀಸರುಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.ಶಿವಮೊಗ್ಗ ಎ ಉಪ ವಿಭಾಗದಲ್ಲಿ – 39, ಬಿ ಉಪ ವಿಭಾಗದಲ್ಲಿ – 38, ಭದ್ರಾವತಿ ಉಪವಿಭಾಗದಲ್ಲಿ – 72, ಸಾಗರ ಉಪ ವಿಭಾಗದಲ್ಲಿ 21, ಶಿಕಾರಿಪುರ ಉಪ ವಿಭಾಗದಲ್ಲಿ 27,
ತೀರ್ಥಹಳ್ಳಿ ಉಪ ವಿಭಾಗದಲ್ಲಿ 44 ಸೇರಿದಂತೆ ಒಟ್ಟಾರೆ 241 ರೌಡಿಗಳ ಮನೆಗಳಲ್ಲಿಪೊಲೀಸರು ತಪಾಸಣೆ ನಡೆಸಿದ್ದಾರೆ.ದಾಳಿಯ ವೇಳೆ ರೌಡಿ ಆಸಾಮಿಗಳ ಕಾರ್ಯ ಚುಟುವಟಿಕೆಯ ಮಾಹಿತಿ ಕಲೆ ಹಾಕಿದ್ದಾರೆ.ಮನೆಗಳಲ್ಲಿ ಮಾದಕ ವಸ್ತು, ಮಾರಕಾಸ್ತ್ರ ಹೊಂದಿದ್ದಾರೆಯೇ ಎಂಬುವುದನ್ನುಪರಿಶೀಲಿಸಿದ್ದಾರೆ.‘ಮುಂಬರುವ ಗಣೇಶ ಚತುರ್ಥಿ ಹಾಗೂ ಈದ್ ಮಿಲಾದ್ ವೇಳೆ ಯಾವುದೇ ಕಾನೂನುಬಾಹಿರ ಚಟುವಟಿಕೆ ಹಾಗೂ ಕೋಮು ಸೌಹಾರ್ದತೆಗೆ ಧಕ್ಕೆ ತರುವಂತಹ ಕೃತ್ಯಗಳಲ್ಲಿ ಭಾಗಿಯಾಗದಂತೆ’ ರೌಡಿಗಳಿಗೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.