ಶಿವಮೊಗ್ಗ ಜಿಲ್ಲೆಯಲ್ಲಿ ಕೊರೊನಾದಿಂದ 610 ಜನ ಗುಣಮು

ಶಿವಮೊಗ್ಗ, ಮೇ 2: ಒಂದೆಡೆ ಶಿವಮೊಗ್ಗ ಜಿಲ್ಲೆಯಲ್ಲಿ ಕೊರೊನಾ ಸೋಂಕಿಗೆ ತುತ್ತಾಗುವವರಸಂಖ್ಯೆ ಏರುಗತಿಯಲ್ಲಿದೆ. ಮತ್ತೊಂದೆಡೆ, ಸೋಂಕಿನಿಂದ ಗುಣಮುಖರಾಗುತ್ತಿರುವವರಸಂಖ್ಯೆಯೂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ಶನಿವಾರ ಒಂದೇ ದಿನ ಜಿಲ್ಲೆಯಲ್ಲಿ 610 ಜನ ಸೋಂಕಿನಿಂದ ಗುಣಮುಖರಾಗಿದ್ದಾರೆ. ಉಳಿದಂತೆ657 ಹೊಸ ಪ್ರಕರಣಗಳು ದಾಖಲಾಗಿವೆ. ಆದರೆ ಶುಕ್ರವಾರಕ್ಕೆ ಹೋಲಿಸಿದರೆ, ಶನಿವಾರಸೋಂಕಿಗೆ ತುತ್ತಾದವರ ಸಂಖ್ಯೆ ಕಡಿಮೆಯಾಗಿದೆ. ಒಟ್ಟಾರೆ 2130 ಸ್ಯಾಂಪಲ್ಸ್ ಗಳನ್ನುಸಂಗ್ರಹಿಸಲಾಗಿದ್ದು, 1745 ಸ್ಯಾಂಪಲ್ಸ್ ಗಳಲ್ಲಿ ನೆಗೆಟಿವ್ ವರದಿ ಬಂದಿದೆ.ವಿದ್ಯಾರ್ಥಿಗಳಲ್ಲಿ ಸೋಂಕು: ಕಾಲೇಜು ವಿದ್ಯಾರ್ಥಿಗಳ ಹಾಗೂ ನೌಕರರ 59ಸ್ಯಾಂಪಲ್ಸ್ಗಳನ್ನು ಶನಿವಾರ ಸಂಗ್ರಹಿಸಲಾಗಿತ್ತು. ಇದರಲ್ಲಿ 29 ವಿದ್ಯಾಥರ್ಿಗಳುಹಾಗೂ 6 ನೌಕರರಲ್ಲಿ ಸೋಂಕು ಕಂಡುಬಂದಿದೆ.
ಪ್ರಮಾಣ: ಕೊರೊನಾಗೆ ತುತ್ತಾಗಿದ್ದ 6 ಜನ ಅಸುನೀಗಿದ್ದಾರೆ. ಒಟ್ಟಾರೆ ಕಳೆದ ವರ್ಷದಿಂದಇಲ್ಲಿಯವರೆಗೂ ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 386 ಆಗಿದೆಎಂದು ಜಿಲ್ಲಾಡಳಿತ ಬಿಡುಗಡೆ ಮಾಡಿರುವ ಕೋವಿಡ್ ಮಾಹಿತಿಯಲ್ಲಿ ತಿಳಿಸಿದೆ.
ವಿವರ: ಶನಿವಾರ ಶಿವಮೊಗ್ಗ ತಾಲೂಕಿನಲ್ಲಿ 244 ಸೋಂಕಿನ ಪ್ರಕರಣಗಳು ಪತ್ತೆಯಾಗಿವೆ.ಉಳಿದಂತೆ ಭದ್ರಾವತಿಯಲ್ಲಿ 75, ಶಿಕಾರಿಪುರದಲ್ಲಿ 33, ತೀರ್ಥಹಳ್ಳಿಯಲ್ಲಿ 144,ಸೊರಬದಲ್ಲಿ 48, ಸಾಗರದಲ್ಲಿ 31, ಹೊಸನಗರದಲ್ಲಿ 67 ಹಾಗೂ ಹೊರ ಜಿಲ್ಲೆಗಳಿಂದಆಗಮಿಸಿದ 15 ಜನರಲ್ಲಿ ಕೋವಿಡ್ ಪಾಸಿಟಿವ್ ಕಂಡುಬಂದಿದೆ.