ಶಿವಮೊಗ್ಗ ಜಿಲ್ಲಾ ಕುರುಬ ಸಂಘದಿಂದ ಸಿಎಂ ಸಿದ್ದರಾಮಯ್ಯಗೆ ಅಭಿನಂದನೆ

ಸಂಜೆವಾಣಿ ವಾರ್ತೆ

*ಶಿವಮೊಗ್ಗ.ಫೆ.೨೭; ಜಿಲ್ಲಾ ಕುರುಬ ಸಂಘದ ವತಿಯಿಂದ  ಬಾಲರಾಜ್ ಅರಸ್ ರಸ್ತೆಯಲ್ಲಿರುವ ಕುರುಬರ ವಿದ್ಯಾರ್ಥಿ ನಿಲಯದ ಆವರಣದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಕರ್ನಾಟಕ ರಾಜ್ಯ ಸರ್ಕಾರದ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರು ಈ ಸಾಲಿನ ಬಜೆಟ್ ನಲ್ಲಿ  ಅನುದಾನ  ಘೋಷಣೆ ಮಾಡಿ ಬಿಡುಗಡೆ ಮಾಡಿದ್ದು, ನಿನ್ನೆ ಸಂಜೆ ಮುಖ್ಯಮಂತ್ರಿಗಳನ್ನು ಅವರ ಕಾವೇರಿ ನಿವಾಸದಲ್ಲಿ ಭೇಟಿ ಮಾಡಿ ಕೃತಜ್ಞತೆ ಸಲ್ಲಿಸಿ, ಅಭಿನಂದಿಸಲಾಯಿತು.ಈ ಸಂದರ್ಭದಲ್ಲಿ  ಮಾಜಿ ವಿಧಾನಪರಿಷತ್ ಸದಸ್ಯರಾದ ಆರ್ ಪ್ರಸನ್ನ ಕುಮಾರ್, ಸಮಾಜದ ರಾಜ್ಯ ಮುಖಂಡರಾದ  ಎಂ ಶ್ರೀಕಾಂತ್ , ಮಾಜಿ ಮಹಾಪೌರರಾದ ಎಸ್ .ಕೆ.ಮರಿಯಪ್ಪ, ಕರ್ನಾಟಕ ಪ್ರದೇಶ ಕುರುಬರ ಸಂಘದ ರಾಜ್ಯ ಉಪಾಧ್ಯಕ್ಷ ಕೆ ರಂಗನಾಥ್, ರಾಜ್ಯ ನಿರ್ದೇಶಕರಾದ ಎಸ್.ಎಂ ಶರತ್,  ಸಮಾಜದ ಮುಖಂಡರುಗಳಾದ ಎಸ್ ಪಿ ಶೇಷಾದ್ರಿ , ಕಟ್ಟೆ ವೆಂಕಟೇಶ್ ,ಎಂ.ರಾಕೇಶ್, ಕೆ .ಎಲ್ . ಪವನ್ ,ಹಾಗೂ ಶಿವಮೊಗ್ಗ ಜಿಲ್ಲೆಯ ಕುರುಬ ಸಮಾಜದ ಪ್ರಮುಖರು  ಇದ್ದರು.