ಶಿವಮೊಗ್ಗ : ಜನತಾ ಕರ್ಫ್ಯೂ ಮತ್ತಷ್ಟು ಬಿಗಿ – ರಸ್ತೆಗಳಿಗೆ ಬ್ಯಾರಿಕೇಡ್ ಅಳವಡಿಕೆ

ಶಿವಮೊಗ್ಗ, ಮೇ 2: ಶಿವಮೊಗ್ಗ ನಗರದಲ್ಲಿ ಜನತಾ ಕರ್ಫ್ಯೂವನ್ನು ಕಟ್ಟುನಿಟ್ಟಾಗಿಜಾರಿಗೊಳಿಸಲು ಮುಂದಾಗಿರುವ ಪೊಲೀಸ್ ಇಲಾಖೆ, ವಾರಾಂತ್ಯ ದಿನಗಳಂದು ನಗರಾದ್ಯಂತ ಪ್ರಮುಖರಸ್ತೆ-ವೃತ್ತಗಳಿಗೆ ಬ್ಯಾರಿಕೇಡ್ ಅಳವಡಿಸಿ ವಾಹನ ಸಂಚಾರಕ್ಕೆ ಸಂಪೂರ್ಣ ನಿರ್ಬಂಧಹೇರಿತ್ತು.ಶನಿವಾರದಂತೆ ಭಾನುವಾರ ಕೂಡ ಪೊಲೀಸರು ಪ್ರತಿಯೊಂದು ವಾಹನಗಳನ್ನು ತಪಾಸಣೆ ನಡೆಸುತ್ತಿದ್ದರು. ಅನಗತ್ಯವಾಗಿಓಡಾಡುತ್ತಿದ್ದವರಿಗೆ ದಂಡ ವಿಧಿಸುತ್ತಿದ್ದ ದೃಶ್ಯ ಕಂಡು ಬಂದಿತು.
ಸ್ತಬ್ದ: ಜನತಾ ಕರ್ಫ್ಯೂವಿನ ಐದನೆ ದಿನವಾದ ಭಾನುವಾರ ಕೂಡ ಶಿವಮೊಗ್ಗ ನಗರ ಸಂಪೂರ್ಣಸ್ತಬ್ದವಾಗಿತ್ತು. ಬೆಳಿಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ ಅಗತ್ಯ ವಸ್ತುಗಳಖರೀದಿಗೆ ನೀಡಿದ್ದ ಸಮಯ ಪೂರ್ಣಗೊಂಡ ನಂತರ, ರಸ್ತೆಗಳಲ್ಲಿ ಜನ-ವಾಹನ ಸಂಚಾರ ವಿರಳವಾಗಿತ್ತು.
ನೆರವು: ಶಿವಮೊಗ್ಗ ನಗರದ ಖಾಸಗಿ ಬಸ್ ನಿಲ್ದಾಣ ಸೇರಿದಂತೆ ನಗರದ ವಿವಿಧೆಡೆಯಿರುವಅಶಕ್ತರು, ನಿರ್ಗತಿಕರು, ಭಿಕ್ಷುಕರಿಗೆ ವಿವಿಧ ಸಂಘಸಂಸ್ಥೆಗಳು ಅವರಿರುವಸ್ಥಳಗಳಲ್ಲಿಯೇ ಅನ್ನಾಹಾರ, ಕುಡಿಯುವ ನೀರಿನ ಬಾಟಲಿ ವಿತರಿಸಿ ಮಾನವೀಯತೆ ಮೆರೆದವು.