ಶಿವಮೊಗ್ಗ ಕ್ಷೇತ್ರದಲ್ಲಿ ಮಹಿಳೆಯರಿಂದಲೇ ಹೆಚ್ಚು ಮತ ಚಲಾವಣೆ 

ಶಿವಮೊಗ್ಗ, ಮೇ.9;  ಶಿವಮೊಗ್ಗ ಲೋಕಸಭಾ ಕ್ಷೇತ್ರದ ಒಟ್ಟಾರೆ ಮತದಾನದ ಅಂಕಿ ಅಂಶಗಳಲ್ಲಿ ಮಹಿಳೆಯರೇ ಹೆಚ್ಚು ಮತದಾನ ಮಾಡಿರುವ ಬಗ್ಗೆ ತಿಳಿದು ಬಂದಿದೆ. ಇವತ್ತು ಲಭ್ಯವಾದ ಮಾಹಿತಿ ಪ್ರಕಾರ, ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಒಟ್ಟಾರೆ 78.33% ರಷ್ಟು ಮತದಾನವಾಗಿದ್ದು  8,90,061 ಮಹಿಳಾ ಮತದಾರರ ಪೈಕಿ 6,92,402 ಮಹಿಳೆಯರು ಮತ ಚಲಾಯಿಸಿದ್ದಾರೆ. ಒಟ್ಟಾರೆ  8,62,789. ಮತಗಳನ್ನು ಹೊಂದಿರುವ ಪುರುಷರ ಪೈಕಿ ಅಂತಿಮವಾಗಿ  6,80,534 ಪುರುಷರ ಮತದಾನ ಮಾಡಿದ್ದಾರೆ. ಭದ್ರಾವತಿ, ಶಿವಮೊಗ್ಗ, ತೀರ್ಥಹಳ್ಳಿ, ಬೈಂದೂರಿನಲ್ಲಿ ಮಹಿಳೆಯರೇ ಪುರುಷರಿಗಿಂತ ಹೆಚ್ಚು ವೋಟ್‌ ಮಾಡಿದ್ದಾರೆ. ಇತ್ತ ಶಿವಮೊಗ್ಗ ಗ್ರಾಮಾಂತರ, ಶಿಕಾರಿಪುರ, ಸೊರಬದಲ್ಲಿ ಪುರುಷರೇ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿದ್ದು ಸಾಗರ ಕ್ಷೇತ್ರದಲ್ಲಿ ಪುರುಷರು ಹಾಗೂ ಮಹಿಳೆಯರು ಬಹುತೇಕ ಒಂದೆ ಸಂಖ್ಯೆಯಲ್ಲಿ ಮತದಾನ ಮಾಡಿದ್ದಾರೆ.