ಶಿವಮೊಗ್ಗ ಎನ್. ಎಸ್.ಯು.ಐನಿಂದ ಸಹಾಯ ಹಸ್ತ

ಶಿವಮೊಗ್ಗ. ಮೇ.೨: ಕರ್ನಾಟಕ ರಾಜ್ಯಾದ್ಯಂತ ಕೊವೀಡ್ 19 ರೋಗ ಹರಡುಬಾರದೆಂದು ಮುನ್ನೆಚ್ಚರಿಕೆ ಕ್ರಮವಾಗಿ ಲಾಕ್ಡೌನ್ ಮಾಡಿರುವುದರಿಂದ ಶಿವಮೊಗ್ಗ ನಗರದಲ್ಲಿ ಶಿವಮೊಗ್ಗ ಜಿಲ್ಲಾ ಎನ್.ಎಸ್.ಯು.ಐ ವತಿಯಿಂದ ನಿರಾಶ್ರಿತರಿಗೆ 4ನೇ ದಿನದ ಸಹಾಯಹಸ್ತ ಕಾರ್ಯಕ್ರಮ ಪ್ರಾರಂಭ ಮಾಡಲಾಯಿತು. ಮುಂಜಾನೆ ಬ್ರೆಡ್ ಹಾಗೂ ಜ್ಯೂಸ್ ನೀಡಲಾಯಿತು, ಮಧ್ಯಾಹ್ನ ಊಟ ನೀರಿನ ವ್ಯವಸ್ಥೆ ಮಾಡಲಾಯಿತು ಮತ್ತು ಕೊರೋನ ವಾರಿರ್ಯಸ್ ಗಳಿಗೆ ಜ್ಯೂಸ್ ಹಾಗೂ ನೀರನ್ನು ನೀಡಲಾಯಿತು, ಇ ಸಂದರ್ಭದಲ್ಲಿ ಯುವ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಚೇತನ್ ಕೆ, ಎನ್.ಎಸ್.ಯು.ಐ ಜಿಲ್ಲಾಧ್ಯಕ್ಷ ಬಾಲಾಜಿ ಎಚ್.ಎಸ್, ನಗರ ಅಧ್ಯಕ್ಷ ವಿಜಯ್, ಕಾರ್ಯಾಧ್ಯಕ್ಷ ರವಿಕುಮಾರ್ ಜಿ, ಶಿವಮೊಗ್ಗ ನಗರ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷ ಮಹಮ್ಮದ್ ನಿಹಾಲ್, ಯುವ ಕಾಂಗ್ರೆಸ್ ಉತ್ತರ ಬ್ಲಾಕ್‌ ಉಪಾಧ್ಯಕ್ಷ ಗಿರೀಶ್ ಆರ್,  ಆಕಾಶ್. ಸಂದೇಶ್,ಅನಘ, ಹಾಗೂ ಎನ್.ಎಸ್.ಯು.ಐ ಕಾರ್ಯಕರ್ತರು ಉಪಸ್ಥಿತರಿದ್ದರು