ಶಿವಮೊಗ್ಗ.: ಉತ್ತರ ಕರ್ನಾಟಕದ ಹೆಬ್ಬಾಗಿಲು ಹಾವೇರಿಯ ಶ್ರೀ ಗುರುಪಾದೇಶ್ವರ ವಿರಕ್ತಮಠದ ೨೫ನೇ ಪಟ್ಟಾಧಿಕಾರ ಹಾಗೂ ರಜತಮಹೋತ್ಸವದ ಸಂತರ ವೇದಿಕೆಯಲ್ಲಿ ಶ್ರೀ ಮ.ನಿ.ಪ್ರ ಶಿವಯೋಗಿ ಮಹಾಸ್ವಾಮಿಗಳಿಂದ ಶಿವಮೊಗ್ಗದ ಮೂವರು ಸಾಧಕ ರತ್ನ ಪ್ರಶಸ್ತಿ ಗೌರವವನ್ನು ಸ್ವೀಕರಿಸಿದ್ದಾರೆ.ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದಲ್ಲಿ ಪತ್ರಕರ್ತನಾಗಿ, ಸಾಹಿತ್ಯಾತ್ಮಕವಾಗಿ, ಜನಪರ ಲೇಖನಗಳನ್ನು ಪ್ರಸ್ತುತಪಡಿಸುತ್ತಲಿ ಸೇವಾಮುಖಿಯಲ್ಲಿಯು ಮುಂಚೂಣಿಯಲ್ಲಿರುವ ಪತ್ರಕರ್ತರಾದ ಗಾರಾ.ಶ್ರೀನಿವಾಸ್, ಹಾಗೂ ಕೋವಿಡ್ ಸಂದರ್ಭದಲ್ಲಿ ನಾಗರೀಕರಿಗೆ ಪುಡ್ ಹಾಗೂ ಸ್ಯಾನಿಟೈಸರ್, ಮಾಸ್ಕ್‌ಗಳನ್ನು ವಿತರಿಸಿದ್ದಲ್ಲದೆ ಸೇವೋನ್ಮುಖಿಯಾಗಿ ಜನಪರ ದನಿಯಾಗಿರುವ ಜ್ಯೋತಿ ಅರಳಪ್ಪ, ನೂರಾರು ಕೋವಿಡ್ ಪೀಡಿತ ಶವಗಳ ಅಂತ್ಯ ಸಂಸ್ಕಾರಗಳನ್ನು ನಡೆಸಿ ಹಸಿವಿನ ಜನತೆಗೆ ಪುಡ್ ಕಿಟ್‌ಗಳನ್ನು ನಿರಂತರವಾಗಿ ನೀಡಿದ ಜಿರಂಜೀವಿ ಬಾಬು ರವರ ಸಮಾಜಮುಖಿ ಕರ್ತವ್ಯವನ್ನು ಗುರುತಿಸಿ ಸಾವಿರಾರು ಸಧ್ಬಕ್ತರ ನಡುವೆ ಶರಣ ಸಂತರಿಂದ ಈ ಪ್ರಶಸ್ತಿ ಪ್ರಧಾನ ಮಾಡಲಾಗಿದೆ, ಒಟ್ಟು ರಾಜ್ಯದ ವಿವಿದೆಡೆಯಿಂದ ೨೫ ಸಾಧಕರಿಗೆ ಆಹ್ವಾನಿಸಲಾಗಿದೆ ಈ ಪ್ರಶಸ್ತಿ ಪ್ರತಿ ವರುಷ ಶ್ರೀ ಗುರುಪಾದೇಶ್ವರ ಮಠದಲ್ಲಿ ನಡೆಯುತ್ತಿರುವುದು ವಿಶೇಷವಾಗಿದೆ,ಹೊರಜಿಲ್ಲೆಯ ವೇದಿಕೆಯಲ್ಲಿ ಸನ್ಮಾನಿಸುವುದು ಶಿವಮೊಗ್ಗದ ಜನತೆಗೆ ಸಂದ ಗೌರವವಾಗಿದೆ ಎಂದು ಅನೇಕರು ಉವಾಚಿಸಿದ್ದು ಬರಪೂರವಾಗಿ ಮೂವರಿಗೂ ಅಭಿನಂದನೆಗಳನ್ನು ಸಲ್ಲಿಸಿ ಶ್ರೀ ಮಠದ ಸ್ವಾಮೀಜಿಗಳಾದ ಶ್ರೀ ಮ.ನಿ.ಪ್ರ ಶಿವಯೋಗಿ ಮಹಾಸ್ವಾಮಿಗಳಿಗೆ ಈ ಮೂಲಕ ಧನ್ಯವಾದ ಅರ್ಪಿಸಿದ್ದಾರೆ.