ಶಿವಮೊಗ್ಗದ ಗಾಡಿಕೊಪ್ಪದಲ್ಲಿ ಯಶಸ್ವಿಯಾಗಿ ನಡೆದ ನಾಗ ದೇವರ ವಾರ್ಷಿಕೋತ್ಸವ

ಶಿವಮೊಗ್ಗ, ಡಿ. ೨೮: ಎರಡು ದಿನಗಳ ಕಾಲ ಶಿವಮೊಗ್ಗ ನಗರದ ಗಾಡಿಕೊಪ್ಪದ ನಾಗ ದೇವಸ್ಥಾನದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಆರಾಧನಾ ಮಹೋತ್ಸವವು ಯಶಸ್ವಿಯಾಗಿ ನಡೆಯಿತು.
ಶ್ರೀ ನಾಗರಕಟ್ಟೆ ಸೇವಾ ಸಮಿತಿಯ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ನೂರಾರು ಭಕ್ತಾಧಿಗಳು ಭಾಗವಹಿಸಿದ್ದರು.
ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು, ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಧಾರ್ಮಿಕ ಕಾರ್ಯದಲ್ಲಿ ಭಾಗವಹಿಸಿದ್ದರು ಎಂದು ದೇವಾಲಯ ಸಮಿತಿ ಅಧ್ಯಕ್ಷ ರಮೇಶ್ ಮಾಹಿತಿ ನೀಡಿದ್ದಾರೆ.
ಕುಲದೇವತಾ ಪೂಜೆ, ಗುರು ಗಣೇಶ ಪೂಜೆ, ಪುಣ್ಯಾಹವಾಚಕ ಮಹಾಸಂಕಲ್ಪ, ವಾಸ್ತು ಹೋಮ, ಸ್ಥಳಶುದ್ದಿ ದಿಗ್ಬಲಿ ಕಾರ್ಯಗಳು ನಡೆದವು.
ನವಕ ಪ್ರಧಾನ ಕಲಶ ಪ್ರತಿಷ್ಠಾಪನೆ, ಕಲಾತ್ಮತ್ವ ಹೋಮ, ಅಧಿವಾಸ ಹೋಮ, ಬ್ರಹ್ಮ ಕುಂಭಾಭಿಷೇಕ, ಮಹಾಪೂಜೆ, ಮಂಗಳಾರತಿ ಹಾಗೂ ಸಂಜೆ ಸಮಸ್ತ ಸರ್ಪ ದೋಷ ನಿವಾರಣೆಯ ಆಶ್ಲೇಷ ಬಲಿ ಪೂಜೆ ನಡೆಯಿತು ಎಂದು ಅಧ್ಯಕ್ಷ ರಮೇಶ್ ರವರು ಮಾಹಿತಿ ನೀಡಿದ್ದಾರೆ.