ಶಿವಮೊಗ್ಗದಲ್ಲಿ ೪೮೭ ಮಂದಿಗೆ ಸೋಂಕು

ಶಿವಮೊಗ್ಗ, ಎ. ೨೯: ಶಿವಮೊಗ್ಗ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಬುಧವಾರ ಒಂದೇ ದಿನ ಜಿಲ್ಲೆಯಲ್ಲಿ ೪೫೭ ಜನರಲ್ಲಿ ಕೊರೊನಾ
ಪಾಸಿಟಿವ್ ಕಂಡುಬಂದಿದೆ. ಹಾಗೆಯೇ ೫ ಜನ ಅಸುನೀಗಿದ್ದಾರೆ. ಉಳಿದಂತೆ ಸೋಂಕಿನಿಂದ ಚೇತರಿಸಿಕೊಳ್ಳುತ್ತಿರುವವರ ಸಂಖ್ಯೆಯೂ ಹೆಚ್ಚಿದೆ. ಬುಧವಾರ ೨೯೬ ಜನ ಸೋಂಕಿನಿಂದ ಗುಣಮುಖರಾಗಿದ್ದಾರೆ.
ಒಟ್ಟಾರೆ ೨೩೯೯ ಸ್ಯಾಂಪಲ್ಸ್ ಗಳನ್ನು ಸಂಗ್ರಹಿಸಲಾಗಿತ್ತು. ಇದರಲ್ಲಿ ೨೫೦೨ ಸ್ಯಾಂಪಲ್ಸ್’ಗಳು ನೆಗೆಟಿವ್ ಬಂದಿದೆ. ಜಿಲ್ಲಾಡಳಿತ ಬಿಡುಗಡೆ ಮಾಡಿದ ಕೊರೊನಾ ಮಾಹಿತಿಯಲ್ಲಿ ಈ ವಿವರ ತಿಳಿಸಲಾಗಿದೆ.
ಜಿಲ್ಲೆಯ ಇತರೆ ತಾಲೂಕುಗಳಿಗೆ ಹೋಲಿಸಿದರೆ, ಶಿವಮೊಗ್ಗ ತಾಲೂಕಿನಲ್ಲಿಯೇ ಸೋಂಕಿತರ ಸಂಖ್ಯೆ ಹೆಚ್ಚಿದೆ. ಬುಧವಾರ ಒಂದೇ ದಿನ ೨೪೦ ಹೊಸ ಪ್ರಕರಣಗಳು ತಾಲೂಕಿನಲ್ಲಿ ದಾಖಲಾಗಿವೆ.
ಉಳಿದಂತೆ ಭದ್ರಾವತಿಯಲ್ಲಿ ೩೯, ಶಿಕಾರಿಪುರದಲ್ಲಿ ೫೬, ತೀರ್ಥಹಳ್ಳಿಯಲ್ಲಿ ೩೦, ಸೊರಬದಲ್ಲಿ ೪೫, ಸಾಗರದಲ್ಲಿ ೧೪, ಹೊಸನಗರದಲ್ಲಿ ೧೨ ಹಾಗೂ ಹೊರ ಜಿಲ್ಲೆಗಳಿಂದ
ಆಗಮಿಸಿದ ೨೧ ಜನರಲ್ಲಿ ಕೊರೊನಾ ಪಾಸಿಟಿವ್ ಕಂಡುಬಂದಿದೆ.