ಶಿವಮೊಗ್ಗದಲ್ಲಿ ನಮ್ಮ ತಂಡದಿಂದ ಗಾಯಗಳು ನಾಟಕ ಪ್ರದರ್ಶನ

ಸಂಜೆವಾಣಿ ವಾರ್ತೆ

ಶಿವಮೊಗ್ಗ. ಆ.8; ಖ್ಯಾತ ನಟ ಪ್ರಕಾಶ್ ರಾಜ್ ಅವರ ನಿರ್ದಿಗಂತ ಸಂಸ್ಥೆಯ ನೇತೃತ್ವದಲ್ಲಿ ಮೂಡಿಬರುತ್ತಿರುವ ಗಾಯಗಳು ನಾಟಕ ಪ್ರದರ್ಶನವು ಶಿವಮೊಗ್ಗದ ಸುವರ್ಣ ಸಂಸ್ಕೃತಿ ಭವನದಲ್ಲಿ  ಆ. 7ರಂದು ಸಂಜೆ 6.45ಕ್ಕೆ ಪ್ರದರ್ಶನ ಕಾಣಲಿದೆ. ನಮ್ ಟೀಮ್ ರಂಗತAಡವು ಈ ನಾಟಕವನ್ನು ಆಯೋಜಿಸಿದ್ದು, ಪರಿಕಲ್ಪನೆ, ವಿನ್ಯಾಸ ಮತ್ತು ನಿರ್ದೇಶನ ಡಾ. ಶ್ರೀಪಾದ ಭಟ್ ಅವರದು. ಶ್ವೇತಾರಾಣಿ ಹಾಸನ ಅವರ ಸಹ ನಿರ್ದೇಶನವಿದೆ.ಪಿರಾಂಡೆಲೊ ಅವರ ವಾರ್, ಕುವೆಂಪು ಅವರ ಸ್ಮಶಾನ ಕುರುಕ್ಷೇತ್ರ, ಮಂಟೋ ಅವರ ಶರೀಫನ್, ಕೃಷ್ಣಮೂರ್ತಿ ಹನೂರು ಅವರ ಅe್ಞÁತನೊಬ್ಬನ ಆತ್ಮಕತೆ, ಬ್ರೆಕ್ಟ್, ಸಾಹಿರ್ ಲುಧಿಯಾನ್ವಿ ಸೇರಿದಂತೆ ಹಲವರ ಕಥೆ, ಕವನ, ಕಾದಂಬರಿ, ನಾಟಕ ಆಧಾರಿತ ರಂಗರೂಪವಿದು.ಪ್ರವೇಶ ದರ 100 ರೂ. ನಾಟಕ ಪ್ರದರ್ಶನವನ್ನು ಸ್ವತಃ ಖ್ಯಾತ ಕಲಾವಿದ ಪ್ರಕಾಶ್ ರೈ ಅವರು ಚಾಲನೆ ನೀಡುವರು. ನಾಟಕ ಪ್ರದರ್ಶನಕ್ಕೆ 10 ನಿಮಿಷ ಮುಂಚಿತವಾಗಿಯೇ ಪ್ರೇಕ್ಷಕರು ಆಗಮಿಸಲು ಕೋರಲಾಗಿದೆ. ಟಿಕೆಟ್‌ಗಾಗಿ ಸಂಪರ್ಕಿಸಿ – 7353674369, 9844518866ಇಡಿಯ ಜಗತ್ತು ಯುದ್ಧೋನ್ಮಾದದಿಂದ ನರಳುತ್ತಿದೆ. ರಾಜಕಾರಣಿಗಳ, ಧರ್ಮಗುರುಗಳ, ಮಾರುಕಟ್ಟೆಯ ದಲ್ಲಾಳಿಗಳ ಕೈಗಳು ಲೇಟಿ ಮ್ಯಾಕ್‌ಬೆತ್‌ಗಳ ಕೈಗಳಂತೆ ಎಷ್ಟು ತೊಳೆದರೂ ತೊಡೆಯಲಾಗದ ರಕ್ತದ ಕಲೆಗಳಿಂದ ತೊಯ್ದಿದೆ. ಪುರುಷಾಹಂಕಾರದ ಈ ಗಾಯಗಳು ಮೇದಿನಿ ಮತ್ತು ಮಾನಿನಿಯರ ಕರುಳ ಕತ್ತರಿಸುತ್ತಿದೆ. ಮನುಷ್ಯರನ್ನೇ ವಿಭಜಿಸುವ, ಮನುಷ್ಯತ್ವವನ್ನೇ ಅಣಕಿಸುವ ವರ್ಣಭೇದವಂತೂ ಇನ್ನೂ ಕ್ರೂ. ಇವು ನಮಗೆ ನಾವೇ ಮಾಡಿಕೊಂಡ ಗಾಯಗಳು. ಇವುಗಳಿಗೆ ಮುಖಾಮುಖಿಯಾಗದೇ ನಮಗೆ ಬಿಡುಗಡೆ ಇಲ್ಲ. ಅಂಥ ಅಸಂಖ್ಯಾತ ಗಾಯಗಳ ಕಥೆಗಳಿವೆ ಈ ನೆಲದ ತುಂಬ. ಅವುಗಳಿಂದ ಯುದ್ಧ ಹಾಗೂ ಕೋಮುಹಿಂಸೆಯ ಕಥನಗಳಲ್ಲಿ ಕೆಲವನ್ನು ಆಯ್ದು ಇಲ್ಲಿ ರಂಗಚಿತ್ರವಾಗಿಸುತ್ತಿz್ದÉÃವೆ ಮತ್ತು ಅವು ಸಹಜವಾಗಿಯೇ ಮಹಿಳೆಯರ ನೋವಿನ ಹಲ್ಲುಗಳಾಗಿ ಪರಿಗಮಿಸಿವೆ. ನಮ್ಮಿಂದ ಎಣಿಸಲಾಗದಷ್ಟು ಗಾಯದ ಕಥೆಗಳಿವೆ. ಇಲ್ಲಿ ಎಣಿಸಲಾಗದ ಅಸಂಖ್ಯ ಕಥೆಗಳ ಬಗೆಗೂ ಸಹಾನುಭೂತಿ, ಸಂತಾಪಗಳಿವೆ ಎಂದು ನಾಟಕದ ಕುರಿತು ಪರಿಚಯ ಪತ್ರದಲ್ಲಿ ಹೇಳಲಾಗಿದೆ.