ಶಿವಮೊಗ್ಗದಲ್ಲಿ  ತಂಬಾಕು ದಾಳಿ

ಶಿವಮೊಗ್ಗ, ಏ.೨೭; ಶಿವಮೊಗ್ಗ ನಗರದ ಕೋಟೆ ಪೆÇಲೀಸ್ ಸ್ಟೇಷನ್ ವ್ಯಾಪ್ತಿಯ ಹೊಳೆ ಬಸ್ ನಿಲ್ದಾಣ ಹಾಗೂ ಸಹ್ಯಾದ್ರಿ ಕಾಲೇಜಿನ ಸುತ್ತಮುತ್ತ ತಂಬಾಕು ದಾಳಿಗಳನ್ನು ಹಮ್ಮಿಕೊಂಡು, ಒಟ್ಟು 19 ಪ್ರಕರಣಗಳನ್ನು ದಾಖಲಿಸಿ 2500 ದಂಡವನ್ನು ಸಂಗ್ರಹಿಸಲಾಯಿತು.ದಾಳಿಯ ನೇತೃತ್ವವನ್ನು ಜಿಲ್ಲಾ ಸರ್ವೇಕ್ಷಣಾಧಿಕಾರಿ ಹಾಗೂ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ಜಿಲ್ಲಾ ಕಾರ್ಯಕ್ರಮ ಅಧಿಕಾರಿ ಡಾ. ಮಲ್ಲಪ್ಪ ಓ ವಹಿಸಿದ್ದರು. ಜಿಲ್ಲಾ ತಂಬಾಕು ನಿಯಂತ್ರಣ ಕೋಶ  ಹಾಗು ಪೆÇಲೀಸ್ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು. ಸಾರ್ವಜನಿಕರಿಗೆ ತಂಬಾಕು ಉತ್ಪನ್ನಗಳ ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳು ಕುರಿತು ಅರಿವು ಮೂಡಿಸಲಾಯಿತು.