ಶಿವಮೊಗ್ಗದಲ್ಲಿ ಕೊರೊನಾ ಸೋಂಕಿತರ ಚೇತರಿಕೆ ಪ್ರಮಾಣ ಹೆಚ್ಚಳ

ಶಿವಮೊಗ್ಗ, ಮೇ 5: ಶಿವಮೊಗ್ಗ ಜಿಲ್ಲೆಯಲ್ಲಿ, ಒಂದೆಡೆ ಕೊರೊನಾ ಸೋಂಕಿನ ಪ್ರಮಾಣ
ಏರುಗತಿಯಲ್ಲಿದೆ. ಮತ್ತೊಂದೆಡೆ, ಸೋಂಕಿತರ ಚೇತರಿಕೆ ಪ್ರಮಾಣವೂ ಕೂಡ
ಹೆಚ್ಚಿದೆ.ಮಂಗಳವಾರ ಜಿಲ್ಲಾಡಳಿತ ಬಿಡುಗಡೆ ಮಾಡಿದ ಕೊರೊನಾ ದೈನಂದಿನ ವರದಿಯ ಪ್ರಕಾರ,
ಇದೇ ಮೊದಲ ಬಾರಿಗೆ ಸೋಂಕಿತರಿಗಿಂತ ಗುಣಮುಖರಾದವರ ಸಂಖ್ಯೆಯೇ ಹೆಚ್ಚಿರುವುದು
ಕಂಡುಬಂದಿದೆ.
ಉಳಿದಂತೆ ಸೋಂಕಿತರ ಸಾವಿನ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿದ್ದು, 15 ಜನ
ಅಸುನೀಗಿದ್ದಾರೆ. ಹೊಸದಾಗಿ 612 ಜನರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಇದರಲ್ಲಿ
ಶಿವಮೊಗ್ಗ ತಾಲೂಕುವೊಂದರಲ್ಲಿಯೇ 230 ಕೇಸ್’ಗಳು ದಾಖಲಾಗಿವೆ. ಭದ್ರಾವತಿಯಲ್ಲಿ 62,
ಶಿಕಾರಿಪುರದಲ್ಲಿ 50, ತೀರ್ಥಹಳ್ಳಿಯಲ್ಲಿ 39, ಸೊರಬದಲ್ಲಿ 48, ಸಾಗರದಲ್ಲಿ 124,
ಹೊಸನಗರದಲ್ಲಿ 16 ಹಾಗೂ ಹೊರ ಜಿಲ್ಲೆಗಳಿಂದ ಆಗಮಿಸಿದ 43 ಜನರಲ್ಲಿ ಸೋಂಕು
ಕಂಡುಬಂದಿದೆ.
ದಾಖಲು: ಮಂಗಳವಾರದ ಮಾಹಿತಿ ಅನುಸಾರ, ನಿಗದಿತ ಕೋವಿಡ್ ಆಸ್ಪತ್ರೆಗಳಲ್ಲಿ 236,
ಡಿ.ಸಿ.ಹೆಚ್.ಸಿ. ಕೇಂದ್ರಗಳಲ್ಲಿ 133, ಕೋವಿಡ್ ಕೇರ್ ಸೆಂಟರ್ ಗಳಲ್ಲಿ 174 ಜನರು
ಚಿಕಿತ್ಸೆ ಪಡೆಯುತ್ತಿದ್ದಾರೆ. ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ 255 ಜನರು  ಮತ್ತು
2676 ಜನರು ಹೋಂ ಐಸೋಲೇಷನ್ ವ್ಯವಸ್ಥೆಯಲ್ಲಿದ್ದಾರೆ.
ಮಂಗಳವಾರ ಜಿಲ್ಲೆಯಲ್ಲಿ 23 ಕಾಲೇಜು ವಿದ್ಯಾರ್ಥಿಗಳು ಹಾಗೂ 10 ಜನ ಸಿಬ್ಬಂದಿಗಳಲ್ಲಿ
ಕೋವಿಡ್ ಸೊಂಕು ಪತ್ತೆಯಾಗಿದೆ ಎಂದು ಜಿಲ್ಲಾಡಳಿತ ಬಿಡುಗಡೆ ಮಾಡಿದ ಕೋವಿಡ್ ದೈನಂದಿನ
ವಿವರದಲ್ಲಿ ತಿಳಿಸಲಾಗಿದೆ.