ಶಿವಮೂರ್ತಿ ಶಿವಯೋಗಿಗಳ ೪೨ನೇ ಪುಣ್ಯಸ್ಮರಣೆ

ಸಿರವಾರ.ಅ.೩೦-ತಾಲೂಕಿನ ಲಕ್ಕಂದಿನ್ನಿ ಗ್ರಾಮ ಆರಾಧ್ಯದೈವ ಶ್ರೀ ಸದ್ಗುರು ಲಿ.ಶಿವಮೂರ್ತಿ ಶಿವಯೋಗಿಗಳ ೪೨ ನೇ ಪುಣ್ಯಸ್ಮರಣೋತ್ಸವವು ಗುರುವಾರ ರಾತ್ರಿ ೯ ಗಂಟೆಯಿಂದ ಭಜನೆ ಕಾರ್ಯಕ್ರಮ ಹಾಗೂ ಕಳಸಾರೋಹಣ ಕಾರ್ಯಕ್ರಮ ಜರುಗಿತು.
ಇಂದು ಬೆಳಗ್ಗೆ ದ್ವಜಾರೋಹಣ ನೆರವೇರಿಸಲಾಯಿತು. ಕೊವೀಡ್ ೧೯ ಹಿನ್ನಲೆಯಲ್ಲಿ ಸರಳವಾಗಿ ಜಾತ್ರಾ ಮಹೋತ್ಸವವನ್ನು ಆಚರಣೆ ಮಾಡಲಾಯಿತು. ಈ ಬಾರಿ ಭಕ್ತರಿಗೆ ಪ್ರಸಾದ ವ್ಯವಸ್ಥೇಯನ್ನು ಮಾಡಿಲ್ಲ. ಭಕ್ತರ ಮಠಕ್ಕೆ ಆಗಮಿಸಿ ಕಾಯಿ, ಕರ್ಪೂರ, ಹೂ ಸಮರ್ಪಿಸಿದರು.